ನಾಯಕ ಮತ್ತು ಮಾಜಿ ನಾಯಕ ವಿಫಲರಾದರು, ಥ್ರಿಲ್ ಕೊಟ್ಟು ಗೆದ್ದ RCB!

RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡವು ಬುಧವಾರ(Wednesday) ಮುಂಬೈನ(Mumbai) ಡಿವೈ ಪಾಟೀಲ್(DY Patil) ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(Kolkata Night Riders) ವಿರುದ್ಧ ಅಬ್ಬರಿಸಿ 3 ವಿಕೆಟ್‌ಗಳ ಜಯ ಭಾರಿಸಿತು. ಈ ಪಂದ್ಯ ಗೆಲ್ಲುವ ಮೂಲಕ ಐಪಿಎಲ್(IPL) 2022ರ ಅಂಕ ಪಟ್ಟಿಯಲ್ಲಿ ಖಾತೆಯನ್ನು ತೆರೆದಿದೆ. 129 ರನ್ ಬೆನ್ನಟ್ಟಿದ RCB 17ಕ್ಕೆ 3 ವಿಕೆಟ್‌ ನಷ್ಟ ಅನುಭವಿಸಿತು. ಆದ್ರೆ ಶೆರ್ಫೇನ್ ರುದರ್‌ಫೋರ್ಡ್ ಉತ್ಸಾಹಭರಿತ ಆಟ ಪುನಶ್ಚೇತನಕ್ಕೆ ಕಾರಣವಾಯಿತು.

ಆರ್‌ಸಿಬಿ ಪರ ವನಿಂದು ಹಸರಂಗ 20ಕ್ಕೆ 4 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ 4 ಓವರ್‌ಗಳಲ್ಲಿ 11ಕ್ಕೆ 2 ವಿಕೆಟ್ ಪಡೆದರು. 2021 ರಲ್ಲಿ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್, ಕೆಕೆಆರ್ ಸ್ಪೋಟಕ ಬ್ಯಾಟರ್ಸಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಕಳಿಸಿದರು. ಇದಕ್ಕೆ ಪ್ರತಿಯಾಗಿ ಎಂಬಂತೆ ಆರ್‌ಸಿಬಿ ಕೂಡ ಪ್ರಾರಂಭದಲ್ಲಿ ಕಳಪೆ ಆರಂಭ ಕಂಡಿತು. ಅನುಜ್ ರಾವತ್ ಮೊದಲ ಓವರ್‌ನಲ್ಲಿ ಉಮೇಶ್ ಯಾದವ್‌ಗೆ ಬೋಲ್ಡ್ ಆದರು. ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ಟ್ರೆಂಟ್ ಬೌಲ್ಟ್ ಪೆವಿಲಿಯಲನ್ ಕಡೆ ಹೋಗಲು ದಾರಿ ಮಾಡಿಕೊಟ್ಟರು.

ಡೇವಿಡ್ ವಿಲ್ಲಿ ಮತ್ತು ಶೆರ್ಫೇನ್ ರುದರ್‌ಫೋರ್ಡ್ 4 ನೇ ವಿಕೆಟ್‌ಗೆ ಘನ ಜೊತೆಯಾಟದೊಂದಿಗೆ RCB ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸುವ ಮೊದಲು ಉಮೇಶ್ ಯಾದವ್ ಮಾಜಿ ನಾಯಕ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸಿದರು. ಕೊನೆಯವರೆಗೂ ಆಟವನ್ನು ತೆಗೆದುಕೊಂಡು ಹೋದ ಆರ್.ಸಿ.ಬಿ ತಂಡದ ಬ್ಯಾಟ್ಸ್‍ಮನ್ಗಳು ಕ್ರಿಕೆಟ್ ಅಭಿಮಾನಿಗಳನ್ನು ಕಾತುರದಲ್ಲಿ ಸೀಟಿನ ತುತ್ತ ತುದಿಗೆ ಬರುವಂತೆ ಮಾಡಿದರು.

ಕೊನೆಯ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಭಾರಿಸುವ ಮೂಲಕ ಭರ್ಜರಿ ಗೆಲ್ಲುವನ್ನು ಸಾಧಿಸಿದ ಆರ್.ಸಿ.ಬಿ ತಂಡ ಅಂಕಪಟ್ಟಿಯಲ್ಲಿ ೭ನೇ ಸ್ಥಾನವನ್ನು ಅಲಂಕರಿಸಿದೆ. ಬೆಂಗಳೂರು ತಂಡ ಗೆಲ್ಲುತ್ತಿದ್ದಂತೆ ಹಬ್ಬದಂತೆ ಸಂಭ್ರಮಿಸಿದ್ದಾರೆ ಆರ್.ಸಿ.ಬಿ ಅಭಿಮಾನಿಗಳು.

Exit mobile version