ಮೆಟ್ರೋ ಒಳಗೆ ರೀಲ್ಸ್‌ ಮಾಡುವವರಿಗೆ ಅಧಿಕಾರಿಗಳಿಂದ ಖಡಕ್‌ ಎಚ್ಚರಿಕೆ

New delhi : ದೆಹಲಿ ಮೆಟ್ರೋ(Metro) ರೈಲ್ವೆ ಸಂಸ್ಥೆಯು ದಿನನಿತ್ಯ ಪ್ರಯಾಣಿಸುವ ರೈಲಿನೊಳಗೆ ರೀಲ್ಸ್‌(Reels) ಮಾಡುವ ಯುವಕ-ಯುವತಿಯರಿಗೆ ಇದೀಗ ಅಚ್ಚರಿ ಸುದ್ದಿಯೊಂದನ್ನು ಮೀಮ್‌ (reels inside the metro) ಮುಖಾಂತರ ಪ್ರಕಟಿಸಿದೆ!

ಹೌದು, ದೆಹಲಿ ಮೆಟ್ರೋ ರೈಲ್ವೆ ಕಾರ್ಪೊರೇಷನ್ (DMRC) ನಗರದ ಅತ್ಯಂತ ಅನುಕೂಲಕರ ಸಾರಿಗೆ ವಿಧಾನಗಳಲ್ಲಿ ಪ್ರಮುಖಾಗಿದ್ದು, ಮೆಟ್ರೋ ಸಾರಿಗೆಯಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ.

ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ದೆಹಲಿ ಮೆಟ್ರೋದಲ್ಲಿ ಅನೇಕ ಯುವಕ-ಯುವತಿಯರು ತಮ್ಮ ಸ್ಮಾರ್ಟ್‌ಫೋನ್‌(Smart phone) ಹಿಡಿದು ರೀಲ್ಸ್‌ ಮಾಡುವ ಪ್ರವೃತ್ತಿ ಕಂಡುಬಂದಿದೆ.

ಪ್ರತಿನಿತ್ಯ ಜನಸಂದಣಿ ಇರುವ ನಗರಗಳ ಮಧ್ಯೆ ಪ್ರಯಾಣಿಸುವ ಮೆಟ್ರೋ ರೈಲ್ವೆಗಳಲ್ಲಿ ಡ್ಯಾನ್ಸ್‌ ಮಾಡುವ ಮುಖೇನ ರೀಲ್ಸ್‌ (reels inside the metro) ಮಾಡುವವರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಈ ಒಂದು ಅಭ್ಯಾಸ ಹಲವು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ್ದು, ಹಲವು ಪ್ರಯಾಣಿಕರು ಈ ಕುರಿತು ದೆಹಲಿ ಮೆಟ್ರೋ ರೈಲ್ವೆ ಇಲಾಖೆಗೆ ದೂರನ್ನು ಕೂಡ ದಾಖಲಿಸಿದ್ದಾರೆ.

ಇದನ್ನೂ ಓದಿ: ಮಿಂತ್ರಾ ಆಪ್‌ನಲ್ಲಿ ಫುಟ್‌ಬಾಲ್ ಸಾಕ್ಸ್‌ ಆರ್ಡರ್‌ ಮಾಡಿದವನಿಗೆ ಸಿಕ್ಕ ವಸ್ತು ಕಂಡು ಬೆಚ್ಚಿಬಿದ್ದ ನೆಟ್ಟಿಗರು!

ಈ ಸಮಸ್ಯೆಯನ್ನು ಸಲುಭ ಮಾರ್ಗದಲ್ಲಿ ಪರಿಹರಿಸಲು, ದೆಹಲಿ ಮೆಟ್ರೋ ಒಂದು ಸರಳ ಉಪಾಯ ಹುಡುಕಿದ್ದು, ಅದನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಂ(Instagram) ಖಾತೆಯಲ್ಲಿ ಹಾಸ್ಯಸ್ಪದವಾಗಿ ಪೋಸ್ಟ್ ಮಾಡಿ ಹಂಚಿಕೊಂಡಿದೆ.

ಪೋಸ್ಟರ್‌ ನಲ್ಲಿ ದೆಹಲಿ ಮೆಟ್ರೋ ಸಂಸ್ಥೆ ಉಲ್ಲೇಖಿಸಿರುವ ಮೀಮ್‌ ಈ ರೀತಿ ಇದೆ.

ಗೋಲ್ಡನ್ ಗ್ಲೋಬ್-ವಿಜೇತ ಹಾಡು RRR ಸಿನಿಮಾದ ನಾಟು-ನಾಟು(Naatu Naatu) ಹಾಡಿನ ಸಾಲನ್ನು ಬರೆದು,

ನಟ ಜೂ. ಎನ್‌ಟಿಆರ್‌(Jr NTR) ಮತ್ತು ರಾಮಚರಣ್‌ ತೇಜಾ(Ramcharan Teja) ಅವರ ಡ್ಯಾನ್ಸಿಂಗ್‌ ಸ್ಟೆಪ್‌ ಅನ್ನು ಹಾಕುವ ಮೂಲಕ ಪೋಸ್ಟ್‌ ಮಾಡಿದೆ.

ಮಹಾನಗರಗಳಲ್ಲಿ ರೀಲ್ಸ್‌ಗಳು ಅಥವಾ ಡ್ಯಾನ್ಸ್ ವೀಡಿಯೊಗಳನ್ನು ಚಿತ್ರೀಕರಿಸುವುದನ್ನು ಮಾಡದಂತೆ ಈ ಪೋಸ್ಟರ್‌ ಮೂಲಕ ಒತ್ತಾಯಿಸಿದೆ.

ರೈಲಿನಲ್ಲಿ ಮಾಡುವ ರೀಲ್ಸ್‌ಗಳು ನಿಮ್ಮ ಸಹ ಪ್ರಯಾಣಿಕರಿಗೆ ಮುಜುಗರ ಉಂಟು ಮಾಡುತ್ತಿದೆ.

ನಿಮ್ಮ ಪ್ರಯಾಣಿಕರನ್ನು ಗೌರವಿಸಲು ಮರೆಯದಿರಿ – ದೆಹಲಿ ಮೆಟ್ರೋ ಎಂದು ಬರೆದು ಪೋಸ್ಟ್‌ ಮಾಡಿದೆ.

ಸದ್ಯ ದೆಹಲಿ ಮೆಟ್ರೋ ಸಂಸ್ಥೆಯ ಈ ಒಂದು ಮೀಮ್ ಪೋಸ್ಟರ್‌ಗೆ ಅನೇಕ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು,

ಕೆಲವರಿಗೆ ಈ ರೀತಿಯಲ್ಲೇ ಹೇಳಬೇಕು ಇಲ್ಲದಿದ್ದರೇ ಬುದ್ದಿ ಬರುವುದಿಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಸೆಕ್ಷನ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version