ಟಿಪ್ಪು ದೀವಟಿಗೆ ಆರತಿ ರದ್ದುಗೊಳಿಸಿ, ಹಿನ್ನೆಲೆ ; ಮೇಲುಕೋಟೆಯ ಟಿಪ್ಪು ದೀವಟಿಗೂ ಹಾಕಿ ಬ್ರೇಕ್ ಡಿಸಿಗೆ ಮನವಿ!

melkote

ಮಂಡ್ಯ ಜಿಲ್ಲೆಯ(Mandya District) ಪಾಂಡವಪುರ(Pandavapura) ತಾಲೂಕಿನ ಮೇಲುಕೋಟೆಯ(Melkote) ಚೆಲುವರಾಯಸ್ವಾಮಿಗೆ(Cheluvarayaswamy) ಇಷ್ಟು ದಿನಗಳವರೆಗೂ ಪಾಲಿಸಿಕೊಂಡು ಬಂದಿರುವ ದೀವಟಿಗೆ ಸಲಾಂ ಆರತಿ ನಿಲ್ಲಿಸುವಂತೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹೌದು, ಈ ಹಿಂದೆ ಕೊಲ್ಲೂರಿನಲ್ಲಿ ಸಲಾಂ ಆರತಿಯ ವಿರುದ್ಧ ಕೇಳಿಬಂದಿದ್ದ ಮಾತಿನ ಆಧಾರದ ಮೇಲೆ ಇದೀಗ ಮಂಡ್ಯದಲ್ಲಿಯೂ ಅದೇ ರೀತಿಯ ಕೂಗು ಕೇಳಿಬಂದಿದೆ.

ಪ್ರತಿನಿತ್ಯ ಸಂಜೆ 7 ಗಂಟೆಯ ಸಮಯಕ್ಕೆ ಸರಿಯಾಗಿ ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಲಾಯದಲ್ಲಿ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಈ ಒಂದು ಪ್ರಕ್ರಿಯೇ ಎಂದಿನಂತೆ ನಡೆದುಕೊಂಡು ಬಂದಿರಬಹುದು. ಆದ್ರೆ ಇದು ಟಿಪ್ಪು ಸಲ್ತಾನ್ ಆದೇಶದ ಮೇರೆಗೆ ಮಾಡುತ್ತಿರುವ ಆರತಿಯಾಗಿದೆ. ಈ ಪ್ರಮುಖ ಕಾರಣದಿಂದ ಈ ಆಚರಣೆಯನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ವಿಚಾರಿಸಿದ ಕೆಲವರು ತಿಳಿದು ಹೇಳಿದ್ದು, ಟಿಪ್ಪು ಸುಲ್ತಾನ್ ಅವರ ಆಳ್ವಿಕೆಯ ಸಮಯದಲ್ಲಿ ತಮ್ಮ ಆಸ್ಥಾನದಲ್ಲಿ ಆನೆಗಳ ಸಾವು ನಡೆಯುತ್ತಲೇ ಇತ್ತು. ಈ ವೇಳೆ ಟಿಪ್ಪು ಗುರುಗಳು ಚೆಲುವರಾಯಸ್ವಾಮಿಗೆ ಕೊಡುಗೆ ಅರ್ಪಿಸಿ ಎಂದು ತಿಳಿಸುತ್ತಾರೆ. ಈ ಕಾರಣದಿಂದ ಚಲುವರಾಯಸ್ವಾಮಿಗೆ ಚಿನ್ನದ ಆಭರಣ, ವೈಡುರ್ಯಗಳನ್ನು ಉಡುಗೊರೆಯ ರೂಪದಲ್ಲಿ ನೀಡುತ್ತಾರೆ. ಇದೇ ಸಂಗತಿಯನ್ನು ನೆನೆದು ಇಲ್ಲಿ ದೀವಟಿಗೆ ಸಲಾಂ ಆರತಿ ಮಾಡಬೇಕು ಎಂಬ ಆದೇಶವನ್ನು ಹೊರಡಿಸುತ್ತಾರೆ.

ಇದೊಂದು ಕಾರಣದಿಂದ ಪ್ರತಿದಿನ ಚೆಲುವರಾಯಸ್ವಾಮಿಗೆ ನಡೆಯುತ್ತಿದ್ದ ಸಂಧ್ಯಾರತಿಯನ್ನಾ ದೀವಟಿಗೆ ಸಲಾಂ ಆರತಿ ಎಂದು ಪರಿವರ್ತಿಸಿಲಾಯಿತು ಎಂದು ಹೇಳಲಾಗುತ್ತದೆ. ಆದ್ರೆ, ಮೂಲಗಳ ಪ್ರಕಾರ ಇದಕ್ಕೆ ಯಾವುದೇ ಪುರಾವೆಗಳು ಇಲ್ಲ. ಈ ಬಗ್ಗೆ ಇತಿಹಾಸ ತಜÐರು ಮಾತ್ರ ತಿಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Exit mobile version