ನನ್ನನ್ನು ʼಶೂರ್ಪನಖಿʼ ಎಂದು ಅವಮಾನಿಸಿದ ಮೋದಿ ಮೇಲೆ ನಾನು ಕೇಸ್‌ ಹಾಕುತ್ತೇನೆ : ರೇಣುಕಾ ಚೌಧರಿ

New Delhi : ನನ್ನನ್ನು ʼಶೂರ್ಪನಖಿʼ ಎಂದು ಅವಮಾನಿಸಿದ ಮೋದಿ ಮೇಲೆ ನಾನು ಕೇಸ್‌ಹಾಕುತ್ತೇನೆ. ʼಶೂರ್ಪನಖಿʼ(Shurpanakhi) ಎಂದು ಕರೆಯುವ ಮೂಲಕ ನನ್ನ ಮಾನಹಾನಿ ಮಾಡಿದ್ದರು. ಅದಕ್ಕಾಗಿ ಇದೀಗ ನಾನು ಪ್ರಧಾನಿ ಮೋದಿ ವಿರುದ್ದ ಕ್ರಿಮಿನಲ್‌ಮಾನನಷ್ಟ (renuka chowdhury vs modi) ಮೊಕದ್ದಮೆ ಹೂಡುತ್ತೇನೆ ಎಂದು ಮಾಜಿ ಸಚಿವೆ ಮತ್ತು ಕಾಂಗ್ರೆಸ್‌ ನಾಯಕಿ ರೇಣುಕಾ ಚೌಧರಿ(Renuka Chowdhury) ಹೇಳಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ರಾಹುಲ್‌ ಗಾಂಧಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕಿ ರೇಣುಕಾ ಚೌಧರಿ ಈ ಹೇಳಿಕೆ ನೀಡಿದ್ದಾರೆ.

ಅಂದು ನರೇಂದ್ರ ಮೋದಿ ಹೇಳಿದ್ದೇನು?
2018ರ ರಾಜ್ಯಸಭಾ ಕಲಾಪದ ವೇಳೆ ಪ್ರಧಾನಿ ಮೋದಿ ಮಾತನಾಡುವಾಗ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಜೋರಾಗಿ ವ್ಯಂಗ್ಯವಾಗಿ ನಗುತ್ತಿರುತ್ತಾರೆ. ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಎಷ್ಟೇ ವಿನಂತಿ ಮಾಡಿದರು,

ರೇಣುಕಾ ಚೌಧರಿ ನಗುವುದನ್ನು ನಿಲ್ಲಿಸುವುದಿಲ್ಲ. ಇದರಿಂದ ಸಿಟ್ಟಾದ ಸಭಾಧ್ಯಕ್ಷ ವೆಂಕಯ್ಯ ನಾಯ್ಡು(Venkatayya Naidu) “ನಿಮ್ಮ ಸಮಸ್ಯೆ ಏನು?

ನಿಮಗೇನಾದರೂ ಸಮಸ್ಯೆ ಆಗಿದ್ದರೆ ವೈದ್ಯರ ಬಳಿ ಹೋಗಿ” ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಮಧ್ಯೆ ಪ್ರವೇಶಿಸುವ ಮೋದಿ (Modi) ಅವರು,

https://youtu.be/ALd9zAJFhSA

“ಸಭಾಪತಿಜೀ ರೇಣುಕಾಜೀ ಅವರಿಗೆ ನಗಲು ಬಿಡಿ. ರಾಮಾಯಣ ಧಾರಾವಾಹಿಯ ನಂತರ ಈ ರೀತಿಯ ನಗುವನ್ನು ಕೇಳುವ ಸೌಭಾಗ್ಯ ಇಂದು (renuka chowdhury vs modi) ನಮಗೆ ಒದಗಿ ಬಂದಿದೆ”

ಎಂದು ವ್ಯಂಗ್ಯವಾಡುತ್ತಾರೆ. ಪರೋಕ್ಷವಾಗಿ ರೇಣುಕಾ ಚೌಧರಿಯನ್ನು ಶೂರ್ಪನಕಿಗೆ ಹೋಲಿಸುತ್ತಾರೆ. ಆದರೆ ಹೆಸರನ್ನು ಮಾತ್ರ ಪ್ರಸ್ತಾಪ ಮಾಡುವುದಿಲ್ಲ.

ಇದನ್ನು ಕೇಳಿದ ಸಂಸದರೆಲ್ಲಾ ಜೋರಾಗಿ ಬಿದ್ದು ಬಿದ್ದು ನಗಲು ಶುರು ಮಾಡುತ್ತಾರೆ.

ಮಾನನಷ್ಟ ಮೊಕದ್ದಮೆ ಹೂಡಲು ಸಾಧ್ಯವೇ..?
ಸಂವಿಧಾನದ ಪ್ರಕಾರ, ಸಂಸತ್ತಿನ ಚರ್ಚೆಯ ವೇಳೆ ಮಾತನಾಡಿದ ವಿಷಯ ಮತ್ತು ವಸ್ತುವಿನ ಆಧಾರದ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಸಾಧ್ಯವಿಲ್ಲ.

ಸಂಸತ್ತಿನಲ್ಲಿ ಸದಸ್ಯರು ಏನೇ ಮಾತನಾಡಿದರೂ ಆ ಹೇಳಿಕೆಯನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಆದರೆ ಸದಸ್ಯರ ಹಕ್ಕು ಚ್ಯುತಿಯಾಗಿದ್ದರೆ ಅದನ್ನು ಸದನದಲ್ಲೇ ಪ್ರಶ್ನೆ ಮಾಡಬೇಕು.

ಈ ವಿಚಾರದಲ್ಲಿ ನಿರ್ಧಾರ ಸ್ಪೀಕರ್‌(Speaker) ತೆಗೆದುಕೊಳ್ಳಬಹುದೇ ವಿನಾ: ನ್ಯಾಯಾಧೀಶರಿಗೆ ತೆಗೆದುಕೊಳ್ಳಲು ಬರುವುದಿಲ್ಲ. ಹೀಗಾಗಿ ರೇಣುಕಾ ಚೌಧರಿ ಅವರು ಯಾವುದೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಸಾಧ್ಯವಿಲ್ಲ.

Exit mobile version