ಆಕಾಶಕ್ಕೆ ಜಿಗಿದ ಚಿಲ್ಲರೆ ಹಣದುಬ್ಬರ ; ಆಹಾರ ಹಣದುಬ್ಬರ 8.4%, 22 ತಿಂಗಳುಗಳಲ್ಲಿ ಇದೇ ಹೆಚ್ಚು!

Inflation

New Delhi : ಆಹಾರ ವಸ್ತುಗಳ(Food Products) ಬೆಲೆ ಏರಿಕೆಯು ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ (Retail Inflation Effects) ದರವನ್ನು, ಐದು ತಿಂಗಳ ಗರಿಷ್ಠ ಮಟ್ಟವಾದ ಶೇಕಡ 7.4ಕ್ಕೆ ಹೆಚ್ಚಿಸಿದೆ.

ಈ ನಡುವೆ ದೇಶದ ಕೈಗಾರಿಕಾ ಉತ್ಪಾದನೆಯ ಪ್ರಮಾಣವು 18 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕುಸಿದಿದೆ.

ಆಹಾರ ಪದಾರ್ಥಗಳ ಬೆಲೆ ಏರಿಕೆ ಪರಿಣಾಮ ದೇಶದ ರಿಟೇಲ್‌ ಹಣದುಬ್ಬರ(Retail Inflation Effects) ದರವು ಸೆಪ್ಟೆಂಬರ್‌ನಲ್ಲಿ ಐದು ತಿಂಗಳ ಗರಿಷ್ಠ ಮಟ್ಟವಾದ ಶೇ.7.41ಕ್ಕೆ ಏರಿದೆ.

ಆಗಸ್ಟ್‌ನಲ್ಲಿ ಶೇ.7ರಷ್ಟಿತ್ತು, 2021ರ ಸೆಪ್ಟೆಂಬರ್‌ನಲ್ಲಿ ಶೇ.4.35 ರಷ್ಟಿತ್ತು. ಈ ಹಣದುಬ್ಬರ ನಿಯಂತ್ರಣಕ್ಕೆ ರಿಸರ್ವ್‌ ಬ್ಯಾಂಕ್‌ (Reserve Bank) ಬಡ್ಡಿ ದರ (Interest rate) ಏರಿಕೆ ಮಾಡುತ್ತಿದ್ದು, ಈ ಯಾವ ಪ್ರಯತ್ನಗಳೂ ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎನ್ನುವುದು ಸಾಬೀತಾಗಿದೆ.


ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಬಡ್ಡಿ ದರವನ್ನು ರಿಸರ್ವ್‌ ಬ್ಯಾಂಕ್‌ ಮತ್ತಷ್ಟು ಏರಿಕೆ ಮಾಡುವ ಸಾಧ್ಯತೆಗಳಿದ್ದು, ಈ ಪರಿಣಾಮ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲಿವೆ.

ಇದರಿಂದಾಗಿ ಸಾಲಗಾರರ ಮೇಲಿನ ಇಎಂಐ (EMI) ಹೊರೆ ಇನ್ನಷ್ಟು ಅಧಿಕಗೊಳ್ಳಲಿದೆ. ಒಂಬತ್ತನೇ ತಿಂಗಳಾದ ಸೆಪ್ಟೆಂಬರ್‌ನಲ್ಲೂ ಹಣದುಬ್ಬರದ ಮಟ್ಟವು ಆರ್‌ಬಿಐನ (RBI) ಸಹಿಷ್ಣುತೆ ಮಿತಿ ಶೇ.6ಕ್ಕಿಂತಲೂ ಮೇಲ್ಮಟ್ಟದಲ್ಲಿದೆ.

ಇದನ್ನೂ ಓದಿ : https://vijayatimes.com/unknown-facts-of-india/

ರಾಷ್ಟ್ರೀಯ(National) ಅಂಕಿ-ಅಂಶಗಳ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಆಗಸ್ಟ್‌ಗೆ ಹೋಲಿಸಿದರೆ, 7.41 ಶೇಕಡಾದಷ್ಟು ಏರಿಕೆಯಾಗಿದೆ.

ಗ್ರಾಹಕ ದರ ಸೂಚ್ಯಂಕ(ಸಿಪಿಐ) (CPI)ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ.7ರಷ್ಟಿತ್ತು.


ಈಗಾಗಲೇ, ಗೋಧಿ, ಅಕ್ಕಿ ಮತ್ತು ಬೇಳೆಕಾಳುಗಳಂತಹ ಅಗತ್ಯ ಬೆಳೆಗಳ ಬೆಲೆಗಳು ಗಗನಕ್ಕೇರಿರುವುದು ಬಡವರ ಮೇಲೆ ಬರೆ ಎಳೆದಂತಾಗಿದೆ.

https://youtu.be/B17BlX9yaF8

ವಾಸ್ತವವಾಗಿ, ಸಿರಿಧಾನ್ಯಗಳು ಮತ್ತು ತರಕಾರಿಗಳಂತಹ ಮೂಲ ಸರಕುಗಳ ಬೆಲೆ ಹಣದುಬ್ಬರದ ಪರಿಣಾಮದಲ್ಲಿ ಹೆಚ್ಚಿನ ಭಾಗವನ್ನು ಹೊಂದಿರುತ್ತವೆ, ಕಳೆದ ಎರಡು ವರ್ಷಗಳಲ್ಲಿ ಮಳೆಯ ವ್ಯತ್ಯಯ ಮತ್ತು ಉಕ್ರೇನ್‌ ರಷ್ಯಾ ಯುದ್ಧದ ಪರಿಣಾಮದಿಂದ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.


ಇನ್ನು, ಭಾರತದ ಬಡ ಮತ್ತು ಮಧ್ಯಮ ವರ್ಗಗಳು, ಈಗಾಗಲೇ #COVID-19 ಸಾಂಕ್ರಾಮಿಕ-ಸಂಬಂಧಿತ ಆರ್ಥಿಕ ಆಘಾತಗಳಿಂದ ಬಳಲುತ್ತಿದ್ದಾರೆ,

ಅಲ್ಲದೇ ಜನರು ತಮ್ಮ ಆದಾಯದ ಗಮನಾರ್ಹ ಭಾಗವನ್ನು ಆಹಾರಕ್ಕಾಗಿ ಖರ್ಚು ಮಾಡುವುದರಿಂದ ವಿಶೇಷವಾಗಿ ಹಣದುಬ್ಬರ ಏರಿಕೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಇದನ್ನೂ ಓದಿ : https://vijayatimes.com/i-renamed-tippu-express-says-prathap-simha/


“ಮಳೆ ನಿಗದಿತ ಪ್ರಮಾಣದಲ್ಲಿ ಸುರಿಯದೇ ಇದ್ದುದೇ ತರಕಾರಿ ಮತ್ತು ಹಣ್ಣುಗಳ ಬೆಲೆ ಏರಿಕೆಗೆ ಕಾರಣ.

ಹಣದುಬ್ಬರ ತುಸು ಹೆಚ್ಚಾಗಿರುವುದು ಮತ್ತು ಕೈಗಾರಿಕಾ ಉತ್ಪಾದನೆ ಕುಸಿದಿರುವುದು ಕಳವಳ ಮೂಡಿಸುವಂಥದ್ದು” ಎಂದು ಮೋತಿಲಾಲ್ ಓಸ್ವಾಲ್‌ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ನಿಖಿಲ್ ಗುಪ್ತ ಹೇಳಿದ್ದಾರೆ.
Exit mobile version