ನಿಮಗಿದು ಗೊತ್ತೇ: ಬಾಲಿವುಡ್​ನ ಶ್ರೀಮಂತ ನಟಿಯರು ಯಾರೆಂದು ತಿಳಿದಿದೀಯಾ? ಸಂಪೂರ್ಣ ವಿವರ ಹೀಗಿದೆ.

ಬಾಲಿವುಡ್(Bollywood)​ನಲ್ಲಿ ಕೆಲ ಹೀರೋಯಿನ್​ಗಳು (Heroines) ಹೀರೋಗಿಂತಲೂ ಹೆಚ್ಚು ಸಂಭಾವನೆ (Richest Actresses in Bollywood) ಪಡೆಯುತ್ತಿದ್ದು, ಅನೇಕ ಶ್ರೀಮಂತ ನಟಿಯರಿದ್ದಾರೆ.

ಅವರ ಬಳಿ ನೂರಾರು ಕೋಟಿ ರೂಪಾಯಿ ಆಸ್ತಿ ಇದ್ದು, ಅನೇಕ ಉದ್ಯಮಗಳನ್ನು ಅವರು ಹೊಂದಿದ್ದಾರೆ. ಹಾಗಾದ್ರೆ ಆ ನಟಿಯರ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ.

ಐಶ್ವರ್ಯಾ ರೈ ಬಚ್ಚನ್


ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರು ಮೂಲತಃ ಕರ್ನಾಟಕದವರಾದರು ಬಾಲಿವುಡ್​ನಲ್ಲಿ ಶ್ರೀಮಂತ ನಟಿಯರ ಪೈಕಿ ಟಾಪ್​ನಲ್ಲಿದ್ದಾರೆ. ಅವರು ಪ್ರತಿ ಚಿತ್ರಕ್ಕೆ

10 ಕೋಟಿ ರೂಪಾಯಿ ಪಡೆಯುತ್ತಾರೆ. ಹಲವು ಸೂಪರ್ ಹಿಟ್ (Super Hit) ಚಿತ್ರಗಳನ್ನು ಅವರು ನೀಡಿದ್ದು, ಜಾಹೀರಾತು ಲೋಕದಲ್ಲೂ ಅವರಿಗೆ ಬೇಡಿಕೆ ಇದೆ. ಬ್ರ್ಯಾಂಡ್ (Brand) ಪ್ರಚಾರಕ್ಕೆ

ಅವರು 7-8 ಕೋಟಿ ರೂಪಾಯಿ ಪಡೆಯುತ್ತಾರೆ. ಇನ್ನು ಅವರ ಆಸ್ತಿ 800 ಕೋಟಿ (Richest Actresses in Bollywood) ರೂಪಾಯಿಗೂ ಅಧಿಕವಾಗಿದೆ.

ಪ್ರಿಯಾಂಕಾ ಚೋಪ್ರಾ


ನಟಿ ಪ್ರಿಯಾಂಕಾ ಚೋಪ್ರಾ (Priyanka Chopra)ಗೂ ಬಾಲಿವುಡ್​ಗೂ ಈಗ ಯಾವುದೇ ಸಂಬಂಧ ಉಳಿದುಕೊಂಡಿಲ್ಲ. ಅವರು ಹಿಂದಿ ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆದಿದ್ದು, ಅವರಿಗೆ

ಹಾಲಿವುಡ್ (Hollywood) ನಟಿ ಎನ್ನುವ ಬಿರುದು ಸಿಕ್ಕಿದೆ. ಆದರೆ, ಅವರು ಬಣ್ಣದ ಬದುಕು ಕಟ್ಟಿಕೊಂಡಿದ್ದು ಹಿಂದಿ ಚಿತ್ರರಂಗದ ಮೂಲಕವೇ. ಇನ್ನುಇವರು 600 ಕೋಟಿ ರೂಪಾಯಿ ಆಸ್ತಿಯ

ಒಡತಿಯಾಗಿದ್ದು, ನ್ಯೂಯಾರ್ಕ್​ನಲ್ಲಿ (New York) ಅವರು ಹೋಟೆಲ್ ಉದ್ಯಮ ಆರಂಭಿಸಿದ್ದರು. ಈಗ ಅದರಿಂದ ಹೊರ ಬಂದಿದ್ದಾರೆ.

ಆಲಿಯಾ ಭಟ್


ಇವರು ಒಂದು ಚಿತ್ರಕ್ಕೆ 9-10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲದೆ, ನೆಪೋಟಿಸಂ (Nepotism) ಆರೋಪದ ನಡುವೆಯೂ ಆಲಿಯಾ ಭಟ್ (Alia Bhatt) ಅವರು ಚಿತ್ರರಂಗದಲ್ಲಿ

ಮಿಂಚಿದ್ದಾರೆ. ಇವರ ಆಸ್ತಿ 550 ಕೋಟಿ ರೂಪಾಯಿಗೂ ಅಧಿಕವಾಗಿದ್ದು, ತಮ್ಮದೇ ಬಟ್ಟೆ ಬ್ರ್ಯಾಂಡ್ (Cloth Brand) ಕೂಡ ಹೊಂದಿದ್ದಾರೆ. ವರ್ಷಕ್ಕೆ ಇದರ ಟರ್ನ್​ಓವರ್ 150 ಕೋಟಿ ರೂಪಾಯಿಗೂ ಹೆಚ್ಚಾಗಿದೆ.

ದೀಪಿಕಾ ಪಡುಕೋಣೆ


ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಪ್ರತಿ ಚಿತ್ರಕ್ಕೆ ಬರೋಬ್ಬರಿ 25-30 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇದು ಅಚ್ಚರಿ ಎನಿಸಿದರೂ ನಿಜ. ಇವರಿಗೆ ಜಾಹೀರಾತುಗಳಿಂದ

ಕೋಟ್ಯಾಂತರ ರೂಪಾಯಿ ಹರಿದು ಬರುತ್ತಿದ್ದು, ಹಲವು ಸಿನಿಮಾ ಒಪ್ಪಿ ನಟಿಸುತ್ತಿರುವ ಇವರ ಆಸ್ತಿ 500 ಕೋಟಿ ರೂಪಾಯಿಗೂ ಅಧಿಕ ಇದೆ.

ಕರೀನಾ ಕಪೂರ್


ಕರೀನಾ ಕಪೂರ್ (Kareena Kapoor) ಅವರು ಇತ್ತೀಚೆಗೆ ನಟನೆಯಿಂದ ಅಂತರ ಕಾಯ್ದುಕೊಂಡಿದ್ದು, ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಾರೆ. ಇವರು ಒಂದು ಚಿತ್ರಕ್ಕೆ 6 ಕೋಟಿ ರೂಪಾಯಿ ಸಂಭಾವನೆ

ಪಡೆಯುತ್ತಾರೆ. ಇವರ ಆಸ್ತಿ 485 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಕತ್ರಿನಾ ಕೈಫ್


ನಟಿ ಕತ್ರಿನಾ ಕೈಫ್ (Katrina Kaif) ಅವರು ಕತ್ರಿನಾ ಅವರು ಬ್ರ್ಯಾಂಡ್ ಪ್ರಚಾರಕ್ಕೆ 7 ಕೋಟಿ ರೂಪಾಯಿ ಪಡೆಯುತ್ತಾರೆ ಮತ್ತು ಪ್ರತಿ ಚಿತ್ರಕ್ಕೆ 7-8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ಇವರು

ತಮ್ಮದೇ ಆದ ಬ್ಯೂಟಿ ಬ್ರ್ಯಾಂಡ್ (Beauty Brand) ಹೊಂದಿದ್ದು, ಇವರ ಆಸ್ತಿ 264 ಕೋಟಿ ರೂಪಾಯಿಗೂ ಮೀರಿದೆ. ಹಲವಾರು ಉದ್ಯಮಗಳಿಗೆ ಇವರು ಹೂಡಿಕೆಯನ್ನು ಸಹ ಮಾಡಿದ್ದಾರೆ.

ಇದನ್ನು ಓದಿ: ಅಯ್ಯಪ್ಪನ ದರ್ಶನಕ್ಕೆ ಭಕ್ತರ ಪರದಾಟ: ಶಬರಿಮಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಭಕ್ತಾದಿಗಳ ಗೋಳಾಟ

Exit mobile version