ಈ ರಾಜಕಾರಣಿಯ ಆಸ್ತಿ ಮೌಲ್ಯ 1,609 ಕೋಟಿ ರೂ. : ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತಾ?

Bengaluru : ಇತ್ತೀಚೆಗೆ ವಿಧಾನಸಭಾ ಚುನಾವಣೆಗೆ (Assembly election) ಸ್ಪರ್ಧಿಸಲು ಸೋಮವಾರ ನಾಮಪತ್ರ ಸಲ್ಲಿಸಿದ ಎಂ.ಟಿ.ಬಿ ನಾಗರಾಜ್ (MTB Nagaraj) ಅವರು ತಾವು ಸಲ್ಲಿಸಿದ ಅಫಿಡವೀಟ್ ಮೂಲಕ (Richest candidate in the state) ತಮ್ಮ ಕುಟುಂಬದ ಆಸ್ತಿ 1609 ಕೋಟಿ ರೂ. ಎಂಬುದಾಗಿ ಬಹಿರಂಗಪಡಿಸಿದ್ದಾರೆ.


ಮೇ 10, 2023 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸಲು ಪ್ರಾರಂಭಿಸಿದ್ದು,

ಕರ್ನಾಟಕದ ಸಚಿವ ಎಂಟಿಬಿ ನಾಗರಾಜ್ ಅವರು 1,609 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬಹಿರಂಗಪಡಿಸುವ ಮೂಲಕ ರಾಜ್ಯದ ಶ್ರೀಮಂತ ಅಭ್ಯರ್ಥಿಯಾಗಿ ಮುಂದುವರೆದಿದ್ದಾರೆ ಎಂಬ ಸಂಗತಿ ಇಲ್ಲಿ ಗಮನಾರ್ಹ.


ಬೆಂಗಳೂರು ಹೊರವಲಯದ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ (Hoskote Assembly Constituency) ಆಡಳಿತಾರೂಢ ಬಿಜೆಪಿ (BJP)

ಅಭ್ಯರ್ಥಿಯಾಗಿ ಸೋಮವಾರ ಎಂಟಿಬಿ ನಾಗರಾಜ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ, ತಮ್ಮ ಉದ್ಯೋಗ ಅಥವಾ ವೃತ್ತಿಯನ್ನು ಕೃಷಿ ಮತ್ತು ವ್ಯಾಪಾರ ಎಂದು ಉಲ್ಲೇಖಿಸಿರುವ ನಾಗರಾಜು,

ಇದನ್ನೂ ಓದಿ : https://vijayatimes.com/sudeep-campaign-for-bommai/

ಗೃಹಿಣಿಯಾಗಿರುವ ತಮ್ಮ ಪತ್ನಿ ಎಂ. ಶಾಂತಕುಮಾರಿ ಜೊತೆಗೆ ಒಟ್ಟು 536 ಕೋಟಿ ರೂ. ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ.

ದಂಪತಿಗಳ ಸ್ಥಿರ ಆಸ್ತಿ ಮೌಲ್ಯ 1,072 ಕೋಟಿ ರೂ.! ನಾಗರಾಜು ಅವರು ಜೂನ್ 2020 ರಲ್ಲಿ ವಿಧಾನ ಪರಿಷತ್ತಿನ (Richest candidate in the state) ಚುನಾವಣೆಗೆ ಸ್ಪರ್ಧಿಸಿದಾಗ,

ತಮ್ಮ ಪತ್ನಿಯೊಂದಿಗೆ ಸುಮಾರು 1,220 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು.

ಸೋಮವಾರ ನಾಮಪತ್ರದ ಜೊತೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ದಂಪತಿ ಒಟ್ಟು 98.36 ಕೋಟಿ ರೂ. ಹೊಣೆಗಾರಿಕೆಯನ್ನು ಘೋಷಿಸಿದ್ದಾರೆ.

ನಾಗರಾಜು ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೊಸಕೋಟೆಯಿಂದ ಗೆದ್ದಿದ್ದರು.

ಇದನ್ನೂ ಓದಿ : https://vijayatimes.com/state-high-court-order/

2019 ರಲ್ಲಿ ಕಾಂಗ್ರೆಸ್ (Congress) -ಜೆಡಿಎಸ್ (JDS) ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಪಕ್ಷದಿಂದ ಪಕ್ಷಾಂತರಗೊಂಡ 17 ಶಾಸಕರಲ್ಲಿ ಅವರು ಕೂಡ ಒಬ್ಬರು.

ನಂತರ ನಡೆದ ಉಪಚುನಾವಣೆಯಲ್ಲಿ ಅವರು ಹೊಸಕೋಟೆಯಿಂದ ಕಾಂಗ್ರೆಸ್‌ನಲ್ಲಿರುವ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು.

ಇಬ್ಬರೂ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Sivakumar) ಅವರ ಅಫಿಡವಿಟ್ 2018 ರಲ್ಲಿ ಅವರ ಅಫಿಡವಿಟ್‌ಗೆ ಹೋಲಿಸಿದರೆ ಅವರ ಆಸ್ತಿ 68% ಹೆಚ್ಚಾಗಿದೆ ಎಂದು ತೋರಿಸಿದೆ. ಅವರು ತಮ್ಮ ಮತ್ತು ಅವರ ಕುಟುಂಬದ ಒಟ್ಟು ಆಸ್ತಿಯನ್ನು 1,414 ಕೋಟಿ ರೂ. ಎಂದು ಘೋಷಿಸಿದ್ದಾರೆ.

Exit mobile version