“ಬುದ್ಧಿವಂತಿಕೆಯಿಂದ ಕೆಲಸ ಮಾಡು, ಪರಿಶುದ್ಧತೆಯಿಂದ ಬದುಕು” : ಮೋದಿ ಭಾವುಕ ಟ್ವೀಟ್

Ahmedabad:  ಅಹಮದಾಬಾದ್ನ ಯುಎನ್ ಮೆಹ್ತಾ ಆಸ್ಪತ್ರೆಗೆ(RIP Heeraben Modi) ದಾಖಲಾದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ತಾಯಿ ಹೀರಾಬೆನ್ ಮೋದಿ ಅವರು ಶುಕ್ರವಾರ 99ನೇ ವಯಸ್ಸಿನಲ್ಲಿ ನಿಧನರಾದರು.

ತಾಯಿಯ ನಿಧನದ ಕುರಿತು ಭಾವುಕ ಟ್ವೀಟ್(Tweet) ಮಾಡಿರುವ ಅವರು, ನಾನು ಯಾವಾಗಲೂ ನನ್ನ ತಾಯಿಯಲ್ಲಿ ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅದು ತಪಸ್ವಿಯ ಪ್ರಯಾಣ,

ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ.

ಅವಳ 100ನೇ ಹುಟ್ಟುಹಬ್ಬದಂದು ನಾನು ಅವಳನ್ನು ಭೇಟಿಯಾದಾಗ, ಅವಳು ಒಂದು ವಿಷಯವನ್ನು ನನಗೆ ಹೇಳಿದಳು,

“ನನ್ನ ಈ ಮಾತನ್ನು ಯಾವಾಗಲೂ ನೆನಪಿಟ್ಟುಕೋ.. ಬುದ್ಧಿವಂತಿಕೆಯಿಂದ ಕೆಲಸ ಮಾಡು, ಪರಿಶುದ್ಧತೆಯಿಂದ ಬದುಕು” ಎಂದು ಹೇಳಿದ್ದರು ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/amit-shah-visit-to-karnataka/

ಈ ವರ್ಷದ ಜೂನ್ನಲ್ಲಿ 99ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಧಾನಿ ಮೋದಿಯವರ ತಾಯಿಯನ್ನು ಬುಧವಾರ ಗುಜರಾತ್ನ(Gujarat) ಅಹಮದಾಬಾದ್ ನಲ್ಲಿರುವ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಾಯಿಯನ್ನು ಭೇಟಿ ಮಾಡಲು ಪ್ರಧಾನಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಇನ್ನು ಜೂನ್ 18, 1923 ರಂದು ಜನಿಸಿದ ಹೀರಾಬೆನ್ ಮೋದಿ(Heeraben Modi) ಅವರ ಹುಟ್ಟೂರು ಗುಜರಾತ್ನ ಮೆಹ್ಸಾನಾದ ವಡ್ನಗರ. ಅವರಿಗೆ ಐದು ಗಂಡು ಮಕ್ಕಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಪಂಕಜ್ ಮೋದಿ, ಸೋಮಾ ಮೋದಿ, ಅಮೃತ್ ಮೋದಿ ಮತ್ತು ಪ್ರಹ್ಲಾದ್ ಮೋದಿ ಮತ್ತು ಒಬ್ಬ ಪುತ್ರಿ ವಸಂತಿಬೆನ್ ಹಸ್ಮುಖ್ಲಾಲ್ ಮೋದಿ. ಹೀರಾಬೆನ್ ಮೋದಿ ಅವರು ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ಸಮೀಪದ ರೇಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ : https://vijayatimes.com/announcing-new-year-guidelines/

ಹೀರಾಬೆನ್ಅವರ ಈ ವರ್ಷದ ಜನ್ಮದಿನದಂದು ಪ್ರಧಾನಿ ಅವರು ತಮ್ಮ ಬ್ಲಾಗ್ನಲ್ಲಿ ‘ತಾಯಿ’ ಎಂಬ ಬ್ಲಾಗ್ ಬರೆದುಕೊಂಡಿದ್ದರು. ನನ್ನ ತಾಯಿಯ ಶತಮಾನೋತ್ಸವ ವರ್ಷ ಪ್ರಾರಂಭವಾಗುತ್ತಿರುವ ಕಾರಣ 2022 ವಿಶೇಷ ವರ್ಷವಾಗಿದೆ. ನನ್ನ ಜೀವನದಲ್ಲಾದ ಎಲ್ಲ ಒಳ್ಳೆಯ ಕಾರ್ಯಗಳಿವೆ ನನ್ನ ಹೆತ್ತವರು ಕಾರಣವೆಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಇಂದು ನಾನು ದೆಹಲಿಯಲ್ಲಿ ಕುಳಿತಿದ್ದೇನೆ. ಆದರೆ ನನ್ನ ಮನಸ್ಸು  ಹಿಂದಿನ ನೆನಪುಗಳಿಂದ ತುಂಬಿದೆ” ಎಂದಿದ್ದರು.

Exit mobile version