Bengaluru : ಒಂದು ಸಂಸ್ಕೃತಿ (Rishab Slams Chethan Statement) ಮತ್ತು ಪರಂಪರೆಯ ಬಗ್ಗೆ ಮಾತನಾಡಲು ಸಾಕಷ್ಟು ಅನುಭವ ಮತ್ತು ಅಧ್ಯಯನ ಬೇಕಾಗುತ್ತದೆ.
ನಾನು ಕಾಂತಾರ (Kantara) ಚಿತ್ರದಲ್ಲಿ ಭೂತಾರಾಧನೆ ಕುರಿತು ಹೇಳುವಾಗ ಭೂತಾರಾಧನೆ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವವರು ಮತ್ತು ಅನೇಕ ವರ್ಷಗಳಿಂದ ಅದನ್ನು ನಂಬಿ,
ಆ ಪದ್ದತಿಯನ್ನು ಅನುಸರಿಸುತ್ತಿರುವವರನ್ನು ಜೊತೆಯಲ್ಲಿ ಇಟ್ಟುಕೊಂಡು, ಅವರ ಸಲಹೆ, ಸೂಚನೆ ಮೇರೆಗೆ (Rishab Slams Chethan Statement) ಭೂತಾರಾಧನೆಗೆ ಯಾವುದೇ ಚ್ಯುತಿ ಬರದಂತೆ ಸಿನಿಮಾ ಮಾಡಿದ್ದೇನೆ.
ಅದರ ಬಗ್ಗೆ ಮಾತನಾಡುವ ಅರ್ಹತೆ ನನಗೂ ಇಲ್ಲ, ಆದರೆ ಅದರ ಬಗ್ಗೆ ಮಾತನಾಡುತ್ತಿರುವವರು ಕೂಡಾ, ಆ ಬಗ್ಗೆ ಮಾತನಾಡುವ ಅರ್ಹತೆ ನನಗಿದೆಯೇ? ಎಂದು ಅವರೇ ಪ್ರಶ್ನಿಸಿಕೊಳ್ಳಬೇಕು ಎಂದು ಕಾಂತಾರ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ Rishab Shetty) ಪರೋಕ್ಷವಾಗಿ ನಟ ಚೇತನ್ (Chethan Ahimsa) ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : https://vijayatimes.com/kantara-hits-in-bollywood/
ಇದಕ್ಕೂ ಮುನ್ನ ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.
ಇದು ನಿಜವಲ್ಲ, ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು.
ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ನಟ ಚೇತನ್ ವಿವಾದಾತ್ಮಕ ಹೇಳಿಕೆ (Controversial Statement) ನೀಡಿದ್ದರು. ಅವರ ಈ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಚೇತನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ರಿಷಬ್ ಶೆಟ್ಟಿ, ನಾನು ನನ್ನದೇ ವ್ಯಾಪ್ತಿಯಲ್ಲಿ ಸಂಶೋಧನೆ ನಡೆಸಿ, ಸಿನಿಮಾ ಮಾಡಿದ್ದೇನೆ. ಈಗ ಸಿನಿಮಾ ಪ್ರೇಕ್ಷಕರ ಮುಂದಿದೆ. ಅದರ ಸರಿ-ತಪ್ಪುಗಳ ಬಗ್ಗೆ ನಾನು ಮಾತನಾಡಲು ಸಾಧ್ಯವಿಲ್ಲ. ಪ್ರೇಕ್ಷಕರೇ ಅದನ್ನು ನಿರ್ಧರಿಸುತ್ತಾರೆ.
ಇದನ್ನೂ ಓದಿ : https://vijayatimes.com/rohit-chakratheertha-likes-kantara/
ಸರಿ-ತಪ್ಪುಗಳ ಬಗ್ಗೆ ಮಾತನಾಡುವ ಅರ್ಹತೆ ನನಗಿಲ್ಲ, ಅದೇ ರೀತಿ ಪ್ರಶ್ನಿಸುವವರಿಗೂ ಆ ಅರ್ಹತೆ ಇದೆಯೇ? ಎಂಬುದನ್ನು ಅವರೇ ಕೇಳಿಕೊಳ್ಳಬೇಕು. ಈ ಟೀಕೆಗಳಿಗೆ ನಾನು ಉತ್ತರಿಸಲಾರೆ, ಅದರ ಬಗ್ಗೆ ಉತ್ತರಿಸುವ ಅರ್ಹತೆ ಇರುವವರು ಅದಕ್ಕೆ ಉತ್ತರಿಸುತ್ತಾರೆ ಎಂದು ಪರೋಕ್ಷವಾಗಿ ನಟ ಚೇತನ್ ಅವರಿಗೆ ಟಾಂಗ್ ನೀಡಿದ್ದಾರೆ.
- ಮಹೇಶ್.ಪಿ.ಎಚ್