ನಾನು ಪ್ರಧಾನಿಯಾದ್ರೆ ಚೀನಾ ವಿರುದ್ದ ಅತ್ಯಂತ ಕಠಿಣ ಕ್ರಮ : ರಿಷಿ ಸುನಕ್

Britan

ಲಂಡನ್ : ಇಂಗ್ಲೆಂಡ್‌ನಲ್ಲಿ(England) ಬೋರಿಸ್‌ ಜಾನ್ಸನ್‌ ಅವರಿಂದ ತೆರವಾದ ಪ್ರಧಾನಿ(PrimeMinister) ಹುದ್ದೆಗಾಗಿ ಭಾರೀ ಪೈಪೋಟಿ ಸೃಷ್ಟಿಯಾಗಿದೆ. ಅನೇಕ ರಾಷ್ಟ್ರೀಯ(National) ಮತ್ತು ಅಂತರಾಷ್ಟ್ರೀಯ(International) ವಿಷಯಗಳ ಕುರಿತು ಪ್ರಧಾನಿ ಅಭ್ಯರ್ಥಿಗಳು ತಮ್ಮ ನಿಲುವುಗಳನ್ನು ಸಾರ್ವಜನಿಕವಾಗಿ ಪ್ರಸ್ತುತ ಪಡಿಸುತ್ತಿದ್ದಾರೆ. ಹೀಗಾಗಿ ಇದೇ ಮೊದಲ ಬಾರಿ ಚೀನಾದ(China) ಕುರಿತು ಮಾತನಾಡಿರುವ ಪ್ರಧಾನಿ ರೇಸ್‌ನಲ್ಲಿರುವ ಭಾರತೀಯ ಮೂಲದ ರಿಷಿ ಸುನಕ್‌(Rishi Sunak),

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಚೀನಾದ ವಿರುದ್ದ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅವರ ಪ್ರತಿಸ್ಪರ್ಧಿ ಚೀನಾ ಮತ್ತು ರಷ್ಯಾ(Russia) ವಿಚಾರದಲ್ಲಿ ರಿಷಿ ಸುನಕ್ ದುರ್ಬಲಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಮಾತನಾಡಿರುವ ರಿಷಿ, ನಾನು ಆಧಿಕಾರಕ್ಕೆ ಬಂದರೆ ಇಂಗ್ಲೆಂಡ್‌ನಲ್ಲಿರುವ ಎಲ್ಲ ೩೦ ಚೀನಾದ ಕಂಪನಿಗಳನ್ನು ಮುಚ್ಚುತ್ತೇವೆ.

ಚೀನಾ, ಏಷ್ಯಾ ಮತ್ತು ಜಾಗತಿಕ ಶಾಂತಿಗೆ ನಂಬರ್‌ ಒನ್‌ ಬೆದರಿಕೆಯಾಗಿದೆ. ಈ ವಿಚಾರದಲ್ಲಿ ರಾಜೀಯಾಗುವ ಮಾತಿಲ್ಲ. ನನ್ನ ನಿಲುವು ಸ್ಪಷ್ಟವಾಗಿದ್ದು, ಚೀನಿ ಸಂಸ್ಕೃತಿ ಹಾಗೂ ಭಾಷಾ ಪ್ರಭಾವ ಹರಡುವುದನ್ನು ತಡೆಯುತ್ತೇವೆ ಎಂದರು. ಇನ್ನು ಸೈಬರ್‌ ತಂತ್ರಜ್ಞಾನ ಬಳಸಿಕೊಂಡು ಚೀನಾ ಅನೇಕ ಕೃತ್ಯಗಳನ್ನು ಮಾಡುತ್ತಿದೆ. ಹೀಗಾಗಿ ಸೈಬರ್ ತಂತ್ರಜ್ಞಾನದಲ್ಲಿ ಚೀನಾದ ಬೆದರಿಕೆಗಳನ್ನು ನಿಭಾಯಿಸಲು ನ್ಯಾಟೋ ಶೈಲಿಯ ಅಂತಾರಾಷ್ಟ್ರೀಯ ಸಹಕಾರವನ್ನು ನಿರ್ಮಿಸಲು ಉದ್ದೇಶಿಸಿದ್ದೇವೆ. ಇನ್ನು ಚೀನಾ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕದಿಯುತ್ತಿದೆ.

ಕಳ್ಳ ಮಾರ್ಗಗಳ ಮೂಲಕ ನಮ್ಮ ವಿಶ್ವವಿದ್ಯಾಲಯಗಳಿಗೆ ನುಸುಳುತ್ತಿದೆ ಎಂದು ಆರೋಪಿಸಿದರು. ಇದಕ್ಕೂ ಮುನ್ನ ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ “ಯುಕೆ-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುವ ಏಕೈಕ ವ್ಯಕ್ತಿ ರಿಷಿಕ್ ಸುನಕ್” ಎಂದು ವರದಿ ಮಾಡಿತ್ತು. ಆದರೆ ಇದೀಗ ರಿಷಿ ಸುನಕ್‌ನೀಡಿರುವ ಹೇಳಿಕೆ ಚೀನಾವನ್ನು ಕೆರಳಿಸಿದೆ. ಆದರೆ ಇದಕ್ಕೆ ಚೀನಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Exit mobile version