6 ಭಾರತೀಯ ಷೇರುಗಳಲ್ಲಿ ಕೆನಡಾ ₹16000 ಕೋಟಿ ಹೂಡಿಕೆ ; ಹೂಡಿಕೆದಾರರ ಗತಿ ಏನು..?

Mumbai : ಕೆನಡಾ-ಭಾರತದ ರಾಜತಾಂತ್ರಿಕ ಸಂಬಂಧಗಳು ಕೆಳಮಟ್ಟಕ್ಕೆ ತಲುಪುವುದರೊಂದಿಗೆ, ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ವ್ಯವಹಾರಗಳ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿಗೆ ಕಾರಣವಾಗುತ್ತಿದೆ. ಪ್ರಮುಖವಾಗಿ ಭಾರತದ ಷೇರು ಮಾರುಕಟ್ಟೆಯ ಮೇಲೆ ಇದರ ಪರಿಣಾಮ ಉಂಟಾಗಲಿದೆ ಎನ್ನಲಾಗುತ್ತಿದೆ.

ಕಾರ್ಪೊರೇಟ್ ಡೇಟಾಬೇಸ್ AceEquity ಪ್ರಕಾರ, ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್, ಝೊಮಾಟೊ ಲಿಮಿಟೆಡ್ (Zomato Ltd) ಮತ್ತು ದೆಹಲಿವೆರಿ ಲಿಮಿಟೆಡ್, ಇಂಡಸ್ ಟವರ್ಸ್ ಲಿಮಿಟೆಡ್ ಸೇರಿದಂತೆ ಕನಿಷ್ಠ ಆರು ಭಾರತೀಯ ಷೇರುಗಳಲ್ಲಿ ಕೆನಡಾದ ಪಿಂಚಣಿ ನಿಧಿಯು ಈ ಕಂಪನಿಗಳಲ್ಲಿ 1.5-6 ಶೇಕಡಾ ಪಾಲನ್ನು ಹೊಂದಿದೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಪ್ರಮುಖ ದೇಶಗಳ ಸಾಲಿನಲ್ಲಿ ಕೆನಡಾ 7ನೇ ಸ್ಥಾನದಲ್ಲಿದೆ. ಸಿಂಗಾಪುರ ಮತ್ತು ಅಮೇರಿಕಾ (Amercia) ದೇಶಗಳು ಭಾರತದಲ್ಲಿ ಹೂಡಿಕೆ ಮಾಡಿರುವ ಅಗ್ರ ದೇಶಗಳಾಗಿವೆ.

ಕೆನಡಾ ಪಿಂಚಣಿ ನಿಧಿಯು ಜೂನ್ 30 ರ ಹೊತ್ತಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ 4,38,81,500 ಷೇರುಗಳನ್ನು ಅಥವಾ ಶೇಕಡಾ 2.68 ರಷ್ಟು ಷೇರುಗಳನ್ನು ಹೊಂದಿದೆ. ಅದೇ ರೀತಿ 2.37 ರಷ್ಟು ಪಾಲನ್ನು ಜೊಮಾಟೊದಲ್ಲಿ, ಡೆಲ್ಲಿವೆರಿ ಲಿಮಿಟೆಡ್ನಲ್ಲಿ ಶೇಕಡಾ 6 ರಷ್ಟು ಹೊಂದಿದೆ. ಇದೀಗ ಭಾರತ ಮತ್ತು ಕೆನಡಾ ನಡುವಿನ ಸಂಘರ್ಷದಿಂದಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್, ಜೊಮಾಟೊ ಮತ್ತು ಡೆಲ್ಲಿವೆರಿ ಲಿಮಿಟೆಡ್ನಲ್ಲಿ (Delivery Limited) ಷೇರುಗಳ ಬೆಲೆಗಳು ಇಳಿಕೆ ಕಂಡಿವೆ. ಇದು ಅಲ್ಪಾವಧಿ ಪರಿಣಾಮವಾಗಿದ್ದು, ದೀರ್ಘಕಾಲದಲ್ಲಿ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಎಲ್ಲ ದೇಶಗಳ ಪಿಂಚಣಿ ನಿಧಿಗಳು ದೀರ್ಘಾವಧಿಯ ಹೂಡಿಕೆಯ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದೆ. ಹೀಗಾಗಿ ಅಂತಹ ಭೌಗೋಳಿಕ ರಾಜಕೀಯ ಘಟನೆಗಳಿಗೆ ಅವರು ಆತುರದಿಂದ ಪ್ರತಿಕ್ರಿಯಿಸುವುದಿಲ್ಲ ಎಂದು ಟ್ರೇಡಿಂಗೋ ಸಂಸ್ಥಾಪಕ ಪಾರ್ಥ್ ನ್ಯಾತಿ ಹೇಳಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Tru) ಅವರು ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಯಲ್ಲಿ ಭಾರತ ಸರ್ಕಾರವು ಭಾಗಿಯಾಗಿದೆ ಎಂದು ಆರೋಪಿಸಿದ ನಂತರ ಕೆನಡಾ-ಭಾರತ ನಡುವಿನ ಸಂಬಂಧಗಳಿಗೆ ಹೊಡೆತ ಬಿದ್ದಿದೆ. ಭಾರತವು ಆಧಾರರಹಿತ ಆರೋಪಗಳನ್ನು ತಿರಸ್ಕರಿಸಿದ್ದು, ಕೆನಡಾದಲ್ಲಿನ ತನ್ನ ವೀಸಾ ಸೇವೆಗಳನ್ನು ರದ್ದುಗೊಳಿಸಿದೆ.

Exit mobile version