ರೈಲ್ವೆ ಇಲಾಖೆಯಿಂದ ಮೊದಲ ಪಾಡ್‌ ಹೋಟೆಲ್‌ ಪ್ರಾರಂಭ, ಏನಿದರ ವಿಶೇಷತೆ ನೀವೂ ನೋಡಿ

Kannada live news

ಮುಂಬೈ ನ 18 : ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ (Indian Railways) ಮತ್ತೊಂದು ಪ್ರಯಾಣಿಕ ಸ್ನೇಹಿ ಕ್ರಮ ಕೈಗೊಂಡಿದ್ದು, ಆರಾಮದಾಯಕ ‘ಪಾಡ್‌ ಹೋಟೆಲ್‌’ (Pod Hotel) ವ್ಯವಸ್ಥೆಗೆ ಚಾಲನೆ ನೀಡಿದೆ. ಮುಂಬೈ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ (Mumbai Central Railway Station) ಈ ಹೋಟೆಲ್‌ ಅನ್ನು ಬುಧವಾರ ರೈಲ್ವೆ ಖಾತೆ ರಾಜ್ಯ ಸಚಿವ ರಾವ್‌ಸಾಹೇಬ್‌ ದಾನ್ವೆ ಉದ್ಘಾಟಿಸಿದರು.

Kannada online news portal

ಪಾಡ್‌ ಹೋಟೆಲ್‌ (ಒಂದು ಕೊಠಡಿಯಲ್ಲಿ ಒಂದು ಬೆಡ್‌ಗೆ ಮಾತ್ರ ಅವಕಾಶ) ಎಂಬುದು ಪ್ರಯಾಣಿಕರಿಗೆ ತಂಗಲು ಇರುವ ಲಾಡ್ಜ್‌ ಮಾದರಿಯ ವ್ಯವಸ್ಥೆಯಾಗಿದೆ. ಪ್ರಯಾಣ ವಿಳಂಬದ ಸಂದರ್ಭದಲ್ಲಿ ಪ್ರಯಾಣಿಕರು ವೇಟಿಂಗ್‌ ರೂಮ್‌ನಲ್ಲಿ ಅಥವಾ ಪ್ಲಾಟ್‌ಫಾಮ್‌ ಮೇಲೆ ತಂಗುವ ಬದಲು ಅಥವಾ ದುಬಾರಿ ಲಾಡ್ಜ್‌ಗಳಲ್ಲಿ ತಂಗುವ ಬದಲು ಪಾಡ್‌ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಬಹುದಾಗಿದೆ. ಈ ಹೋಟೆಲ್‌ನಲ್ಲಿ ಆರಾಮದಾಯಕ ಐಷಾರಾಮಿ ವ್ಯವಸ್ಥೆ ಇರುತ್ತದೆ. ದರವೂ ಕಡಿಮೆ. ಇದರಿಂದಾಗಿ ಸಾಮಾನ್ಯ ಪ್ರಯಾಣಿಕರೂ ಆಧುನಿಕ ಶೈಲಿಯ ಹೋಟೆಲ್‌ಗಳಲ್ಲಿ ಉಳಿಯಲು ಅವಕಾಶ ಸಿಕ್ಕಂತಾಗಿದೆ.

ಪಾಡ್ಹೋಟೆಲ್ನಲ್ಲಿ ಸಿಗುವ  ಸೌಲಭ್ಯಗಳು

  1. ಇಲ್ಲಿ ತಂಗುವವರಿಗೆ ಉಚಿತ ವೈಫೈ ಸೇವೆ
  2. ಟೀವಿ, ಸಣ್ಣ ಲಾಕರ್‌, ಒಂದು ಮಿರರ್‌
  3. ಓದಲು ಲೈಟಿಂಗ್‌ಗಳ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯ ಗಳಿ ಇಲ್ಲಿ ದೊರೆಯುತ್ತವೆ.
Exit mobile version