ಬೈಕ್ ಕಾರು ಚಾಲಕರೇ ಹುಷಾರ್, ಮೈಸೂರು-ಬೆಂಗಳೂರು ಹೈವೇಯಲ್ಲಿ ದರೋಡೆಕೋರರಿದ್ದಾರೆ ಎಚ್ಚರ

Bengaluru: ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇನಲ್ಲಿ ಇತ್ತೀಚೆಗೆ ದರೋಡೆ (robbers in Mysore-Bangalore highway) ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಕಾರು,

ಬೈಕುಗಳಲ್ಲಿ (Bike) ಸಾಗುವವರು ಸ್ವಲ್ಪ ವಿಶ್ರಾಂತಿಗಾಗಿ ತಮ್ಮ ವಾಹನಗಳನ್ನು ನಿಲ್ಲಿಸಿದರೆ ತಕ್ಷಣವೇ ಅದೆಲ್ಲಿಂದಲೋ ಬೈಕುಗಳಲ್ಲಿ ಬಂದಿಳಿಯುವ ದರೋಡೆಕೋರರು ತಾವು ಪೊಲೀಸರೆಂದು

ಹೇಳಿಕೊಂಡು ಕಾರುಗಳ ಡೋರ್ ಗಳನ್ನು ತೆಗೆಸುತ್ತಾರೆ. ಆ ನಂತರ ಕಾರುಗಳಿಂದ ಇಳಿದ ಪ್ರಯಾಣಕರ ಬಳಿಯಿರುವ ನಗದು, ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಾರೆ. ಕಳೆದ ನಾಲ್ಕು

ತಿಂಗಳಲ್ಲಿ ನಾಲ್ಕು (robbers in Mysore-Bangalore highway) ಪ್ರಕರಣಗಳು ನಡೆದಿವೆ.

ಒಂದುವೇಳೆ ನೀವೇನಾದರೂ ಮೈಸೂರು (Mysore) ಮತ್ತು ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ ಸ್ವಂತ ವಾಹನಗಳಲ್ಲಿ ಆಗಾಗ ಓಡಾಡುವವರಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು ಅದರಲ್ಲೂ

ರಾತ್ರಿ ಹೊತ್ತು ಸಂಚಾರ ಮಾಡುವವರು ಈ ಹೈವೇಯಲ್ಲಿ (Highway) ಓಡಾಡದೇ ಇರುವುದು ಒಳ್ಳೆಯದು ಏಕೆಂದರೆ ಈ ರಸ್ತೆಯಲಿದ್ದಾರೆ ಖತರ್ನಾಕ್ ದರೋಡೆಕೋರರು.

ಈ ದರೋಡೆಕೋರರದ್ದು ಒಂದು ದೊಡ್ಡ ಗುಂಪೆ ಇದ್ದು ರಾತ್ರಿ ವೇಳೆ ನೀವು ಅಕಸ್ಮಾತ್ ಆಗಿ ಕಾರು ನಿಲ್ಲಿಸಿದರೆ ನಿಮ್ಮ ಬಳಿಇರುವ ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಾರೆ. ಅಲ್ಲದೆ ಅವರು

ನಾವು ನೀವು ಅಂದುಕೊಂಡಂತೆ ಡಕಾಯಿತರ ವೇಷದಲ್ಲಿ ಬರುವುದಿಲ್ಲ ಬದಲಾಗಿ ಅವರು ಬರೋದೇ ಪೊಲೀಸರ ವೇಷದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 7 ಪ್ರಕರಣಗಳು ನಡೆದಿವೆ.

ದಂಪತಿಯನ್ನು ದೋಚಿದ ದರೋಡೆಕೋರರು!
ಕಳೆದ ಭಾನುವಾರ (ಸೆ. 10) ಇಂಥದ್ದೇ ಘಟನೆ ಮಂಡ್ಯ ವಲಯದಲ್ಲಿ ನಡೆದಿದ್ದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಬಳಿ ಹೈವೇಗಾಗಿ ಗಂಜಾಂ ಫ್ಲೈಓವರ್ ಎಂಬ ಫ್ಲೈಓವರ್

ಕಟ್ಟಲಾಗಿದ್ದು, ಈ ಫ್ಲೈಓವರ್ (Flyover) ಮೇಲೆ ಭಾನುವಾರ ಮಧ್ಯರಾತ್ರಿ ದಂಪತಿಗಳು ತಮ್ಮ ಮಾರುತಿ 800 ಕಾರಿನಲ್ಲಿ ಸಂಚರಿಸುತ್ತಿರುವ ವೇಳೆಯಲ್ಲಿ ನಿದ್ರೆಬರದಂತೆ ತಪ್ಪಿಸಿಕೊಳ್ಳಲು ದಂಪತಿಯು

ಕಾರನ್ನು ಫ್ಲೈಓವರ್ ಮೇಲೆ ನಿಲ್ಲಿಸಿದ್ದರು ಆಗ ಕೆಲವೇ ನಿಮಿಷಗಳಲ್ಲಿ ಬೈಕಿನಲ್ಲಿ ಬಂದ ದರೋಡೆಕೋರರು ಕಾರಿನಲ್ಲಿದ್ದ ದಂಪತಿಯನ್ನು ಮಾತನಾಡಿಸಿ ತಾವು ಹೈವೇ ಪೊಲೀಸರೆಂದು ಪರಿಚಯಿಸಿಕೊಂಡು

ಕಾರನ್ನು ಏಕೆ ನಿಲ್ಲಿಸಿದ್ದೀರಿ ಎಂದು ಕೇಳಿದ್ದಾರೆ.

ಅದಕ್ಕೆ ದಂಪತಿ ಸೂಕ್ತ ಉತ್ತರ ನೀಡುತ್ತಿದ್ದಂತೆ, ದಂಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಕೊಂಚ ವಿಚಲಿತರಾದ ದಂಪತಿಯನ್ನು ಬೆದರಿಸಿದ ದರೋಡೆಕೋರರು,

ಅವರ ಬಳಿಯಿದ್ದ ನಗದು, 30 ಗ್ರಾಂ ಚಿನ್ನಾಭರಣಗಳನ್ನು ಪಡೆದು ಅಲ್ಲಿಂದ ಬೈಕಿನಲ್ಲಿ ಪರಾರಿಯಾಗಿದ್ದಾರೆ ನಂತರ ದಂಪತಿಯು ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾರೆ.

ಸೈಡಿಗೆ ಹಾಕಿದ್ದೇ ತಪ್ಪಾಯ್ತು!
ಕಳೆದ ನಾಲ್ಕು ತಿಂಗಳನಿಂದ 7ನೇ ಪ್ರಕರಣವಾಗಿದ್ದು ಆ ಪ್ರಕರಣಗಳಲ್ಲಿ ಕೆಲವು ಘಟನೆಗಳನ್ನು ಇಲ್ಲಿ ವಿವರಿಸಲಾಗಿದ್ದು ಜು. 1ರ ಮಧ್ಯರಾತ್ರಿ ಬೆಂಗಳೂರಿನಿಂದ ಕೊಡಗಿಗೆ ತೆರಳುತ್ತಿದ್ದ ಮುತ್ತಪ್ಪ ಎಂಬುವರು

ತಮ್ಮ ಕಾರನ್ನು ಮದ್ದೂರಿನ ಸಮೀಪದ ಹೈವೇ ಸರ್ವೀಸ್ ರಸ್ತೆಯಲ್ಲಿ ಹಾಕಿ ನಿದ್ರೆಗೆ,ಜಾರುವಷ್ಟರಲ್ಲಿ ದರೋಡೆಕೋರರ ಗುಂಪೊಂದು ಮುತ್ತಪ್ಪನವರ ಕುತ್ತಿಗೆಗೆ ಮಾರಕಾಸ್ತ್ರವನ್ನಿಟ್ಟು ಸುಮಾರು 3.50

ಲಕ್ಷ ರೂ. ಬೆಲೆ ಬಾಳುವ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಘಟನೆ ನಡೆದುಹೋಗಿದೆ.

ಜು. 7ರ ಮಧ್ಯರಾತ್ರಿ, ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಧನುಷ್ ಎಂಬುವರ ಕಾರನ್ನು ಕನ್ನಮಂಗಳ ಬ್ರಿಡ್ಜ್ ಬಳಿ ತಡೆದ ನಾಲ್ವರು ದರೋಡೆಕೋರರು, ಚಾಕು ತೋರಿಸಿ ಬೆದರಿಸಿ ಅವರಿಂದ

ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಧನುಷ್ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಹಾಗಾಗಿ ನೀವೆನಾದರೂ ಹೈವೇಯಲ್ಲಿ ಸಂಚರಿಸುವಾಗ ಎಚ್ಚರವಾಗಿರಿ.

ಇದನ್ನು ಓದಿ: ಸಮುದ್ರಯಾನಕ್ಕೆ ಸಜ್ಜಾಗುತ್ತಿರುವ ಭಾರತೀಯ ವಿಜ್ಞಾನಿಗಳು, ಜಲಾಂತರ್ಗಾಮಿ ನೌಕೆಯ ವೈಶಿಷ್ಟ್ಯತೆಗಳೇನು?

Exit mobile version