ಗೊಂದಲಗಳ ಮಧ್ಯೆ BCCI ಅಧ್ಯಕ್ಷರಾಗಿ ಆಯ್ಕೆಯಾದ ರೋಜರ್ ಬಿನ್ನಿ

bcci

Mumbai : ಭಾರತ(India) ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ(Roger Binny) ಬಿಸಿಸಿಐ ಅಧ್ಯಕ್ಷರಾಗಿ(BCCI President) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ಸೌರವ್‌ ಗಂಗೂಲಿ(Sourav Ganguly) ಅವರ ಉತ್ತರಾಧಿಕಾರಿಯಾಗಿ ರೋಜರ್ ಬಿನ್ನಿ ಕಾರ್ಯನಿರ್ವಹಿಸಲಿದ್ದಾರೆ.

ಇನ್ನು 1983ರ ವಿಶ್ವಕಪ್ ಅಭಿಯಾನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ರೋಜರ್ ಬಿನ್ನಿ ಅವರು ಮುಂಬೈನಲ್ಲಿ ಇಂದು ನಡೆದ ಎಜಿಎಂನಲ್ಲಿ ಅವಿರೋಧವಾಗಿ 36ನೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾದರು.

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸ್ಥಾನಕ್ಕೆ ಬಿನ್ನಿ ನೇಮಕಗೊಂಡರು, ಸೌರವ್ ಗಂಗೂಲಿ ಅವರ ಮೂರು ವರ್ಷಗಳ ಅಧ್ಯಕ್ಷ ಅವಧಿಯು ಇಂದಿಗೆ ಕೊನೆಗೊಂಡಿತು.

ಇನ್ನೊಂದೆಡೆ ಸೌರವ್‌ ಗಂಗೂಲಿ ಅವರು ಈಗ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಉನ್ನತ ಹುದ್ದೆಗೆ ಸ್ಪರ್ಧಿಸಲಿದ್ದಾರೆ.

https://youtu.be/j9JcNFBswz0 ಥೂ…..ಇದೂ ರಸ್ತೆನಾ? ಬೆಂಗಳೂರಿನ ಸುಂಕದಕಟ್ಟೆಯ ರಸ್ತೆ ದುಸ್ಥಿತಿ ನೋಡಿ.

ಇದೇ ವೇಳೆ ಗೃಹ ಸಚಿವ ಅಮಿತ್‌ ಶಾ(Amit Shah) ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದಾರೆ.

ಅದೇ ರೀತಿ ಆಶಿಶ್ ಶೆಲಾರ್ (ಖಜಾಂಚಿ), ರಾಜೀವ್ ಶುಕ್ಲಾ (ಉಪಾಧ್ಯಕ್ಷ) ಮತ್ತು ದೇವಜಿತ್ ಸೈಕಿಯಾ (ಜಂಟಿ ಕಾರ್ಯದರ್ಶಿ) ಅವಿರೋಧವಾಗಿ ಆಯ್ಕೆಯಾದ ಇತರ ಬಿಸಿಸಿಐ ಪದಾಧಿಕಾರಿಗಳು.

ಮುಂದಿನ ತಿಂಗಳು ಬಿರ್ಜೇಶ್ ಪಟೇಲ್ 70ನೇ ವರ್ಷಕ್ಕೆ ಕಾಲಿಡಲಿರುವ ಕಾರಣ ನಿರ್ಗಮಿತ ಖಜಾಂಚಿ ಅರುಣ್ ಧುಮಾಲ್ ಐಪಿಎಲ್ ಹೊಸ ಅಧ್ಯಕ್ಷರಾಗಲಿದ್ದಾರೆ.

ಎಲ್ಲರೂ ಅವಿರೋಧವಾಗಿ ಆಯ್ಕೆಯಾದ ಕಾರಣ ನೂತನ ಪದಾಧಿಕಾರಿಗಳ ಆಯ್ಕೆ ಔಪಚಾರಿಕವಾಗಿತ್ತು.

ಇನ್ನು ರೋಜರ್ ಬಿನ್ನಿ ಕರ್ನಾಟಕದವರಾಗಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್‌ ತಂಡದ ಪರವಾಗಿ ಅನೇಕ ಪಂದ್ಯಗಳನ್ನು ಆಡಿದ್ದಾರೆ.

ಮದ್ಯಮ ವೇಗದ ಬೌಲರ್‌ ಆಗಿದ್ದ ರೋಜರ್ ಬಿನ್ನಿ, ಭಾರತ ತಂಡವನ್ನು ಪ್ರತಿನಿಧಿಸಿದ್ದು, 1983ರ ವಿಶ್ವಕಪ್‌ ಅನ್ನು ಭಾರತ ತಂಡ ಗೆಲ್ಲುವಲ್ಲಿ ರೋಜರ್ ಬಿನ್ನಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ : https://vijayatimes.com/worry-about-5-things-of-whatsapp/

ರೋಜರ್ ಬಿನ್ನಿ 27 ಟೆಸ್ಟ್ ಮತ್ತು 72 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

Exit mobile version