ರೋಹಿತ್‌ ಶರ್ಮಾ ವಿರುದ್ದ ಆರೋಪ: ಟಾಸ್‌ ವೇಳೆ ಮೋಸ ಎಂದು ಸಿಕಂದರ್‌ ಬಖ್ತ್‌ ಗಂಭೀರ ಆರೋಪ

Mumbai: 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು ಭಾರತದ (Rohit Sharma vs Sikander Bakht) ಆತಿಥ್ಯದಲ್ಲಿ ನಡೆಯುತ್ತಿದ್ದು, ನಿರ್ಣಾಯಕ ಹಂತ ತಲುಪಿದೆ. ಇದರ ನಡುವೆ ಪಾಕಿಸ್ತಾನ

ಮಾಜಿ ಕ್ರಿಕೆಟಿಗರು (Cricket) ಭಾರತ ತಂಡದ ವಿರುದ್ದ ಸಾಲು-ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಪಾಕ್‌ ಮಾಜಿ ಆಟಗಾರ ಸಿಕಂದರ್‌ ಬಖ್ತ್‌ ಕೂಡ ಹಸನ್‌ ರಾಜಾ ಬಳಿಕ ಭಾರತದ

ವಿರುದ್ದ ಗಂಭೀರ ಆರೋಪ (Rohit Sharma vs Sikander Bakht) ಮಾಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ (Match Toss) ವೇಳೆ ರೋಹಿತ್‌ ಶರ್ಮಾ ನಾಣ್ಯವನ್ನು ಮೇಲಕ್ಕೆ ಚಿಮ್ಮಿದ್ದರು. ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ (Vakhande Stadium) ನಡೆದಿದ್ದ 2023ರ ಐಸಿಸಿ ಏಕದಿನ

ವಿಶ್ವಕಪ್‌ ಟೂರ್ನಿಯ ಮೊದಲನೇ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಿದ್ದವು. ಅದರಂತೆ ಟಾಸ್‌ ಗೆದ್ದಿದ್ದ ರೋಹಿತ್‌ ಶರ್ಮಾ ಮೊದಲು ಬ್ಯಾಟಿಂಗ್‌ ಆಯ್ಕೆ

ಮಾಡಿಕೊಂಡಿದ್ದರು.

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಿಕಂದರ್ ಬಖ್ತ್ ಅವರು ರೋಹಿತ್‌ ಶರ್ಮಾ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಟಾಸ್‌ ವೇಳೆ ರೋಹಿತ್‌ ಶರ್ಮಾ ನಾಣ್ಯವನ್ನು ದೂರ ಚಿಮ್ಮುತ್ತಿದ್ದಾರೆ.

ಇದರಿಂದ ಹೆಡ್‌ ಅಥವಾ ಟೈಲ್‌ ನೋಡಲು ಇತರೆ ನಾಯಕನಿಗೆ ಸಾಧ್ಯವಾಗುತ್ತಿಲ್ಲ. ಇದು ಭಾರತದ ನಾಯಕ (India) ಮಾಡುತ್ತಿರುವ ವಂಚನೆ ಎಂದು ಸಿಕಂದರ್‌ ಬಖ್ತ್‌ ಆರೋಪಿಸಿದ್ದಾರೆ.

ರೋಹಿತ್ ಶರ್ಮಾ ಟಾಸ್‌ ವೇಳೆ ನಾಣ್ಯವನ್ನು ಎಸೆಯುವ ರೀತಿ ತುಂಬಾ ವಿಚಿತ್ರವಾಗಿದೆ. ಈ ವಿಶ್ವಕಪ್ (ICC World Cup 2023) ಟೂರ್ನಿಯಲ್ಲಿ ಇತರೆ ನಾಯಕರಿಗೆ ಹೋಲಿಕೆ ಮಾಡಿದರೆ, ಬೇರೆ

ನಾಯಕರು ನಾಣ್ಯದ ಮುಖವನ್ನು ನೋಡಲು ಸಾಧ್ಯವಾಗದಂತೆ ರೋಹಿತ್‌ ಶರ್ಮಾ ಬಹಳಾ ದೂರ ಚಿಮ್ಮುತ್ತಿದ್ದಾರೆ. ಇದಕ್ಕೆ ಏನಾದರೂ ಕಾರಣವಿದೆಯಾ?” ಎಂದು ಸಿಕಂದರ್‌ ಬಖ್ತ್‌ ಟ್ವೀಟ್‌ ಮಾಡಿ

ಗಂಭೀರ ಆರೋಪ ಮಾಡಿದ್ದಾರೆ.

ಈ ಟೂರ್ನಿಯಲ್ಲಿ ಡಿಆರ್‌ಎಸ್‌ ತಂತ್ರಜ್ಞಾನವನ್ನು ಭಾರತ ತಂಡದ ಪರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹಸನ್‌ ರಾಜಾ (Hassan Raja) ಆರೋಪ ಮಾಡಿದ್ದರು. ಹಸನ್‌ ರಾಜಾ ಅವರು

ಯಾವುದೇ ಆಧಾರವಿಲ್ಲದೆ ಆರೋಪ ಮಾಡುತ್ತಿದ್ದಾರೆ. ಇವರ ಆರೋಪಗಳಿಂದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಹೇಳಿದ್ದರು. ಆದರೆ, ಪಾಕಿಸ್ತಾನ ಮಾಜಿ ವೇಗಿ ವಸೀಮ್‌

ಅಕ್ರಮ್‌ ಅವರು, ಹಸನ್‌ ರಾಜಾ ಅವರ ಆರೋಪಗಳನ್ನು ತಳ್ಳಿ ಹಾಕಿದ್ದರು. ಐಸಿಸಿ ಕಣ್ಗಾವಲಿನಲ್ಲಿ ವಿಶ್ವಕಪ್‌ ಪಂದ್ಯಗಳು ನಡಯುತ್ತಿವೆ.

ಇದನ್ನು ಓದಿ: ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಪಾರ್ಕಿಂಗ್ ಚಾರ್ಜ್ ನಲ್ಲಿ ಭಾರೀ ಹೆಚ್ಚಳ!

Exit mobile version