ಮಕ್ಕಳಿಗೆ ಮತ್ತು ಗರ್ಭಿಣಿಯಾರಿಗೆ ಕೊಳೆತ ಮೊಟ್ಟೆ ವಿತರಣೆ : 4 ದಿನಗಳಲ್ಲಿ 2ನೇ ಪ್ರಕರಣ ಬಯಲು

ಹಾಸನ: ಹಾಸನ (Hassan) ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಲಕ್ಷ್ಮಿಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ (Anganwadi) ಪುಟ್ಟ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಕೊಳೆತ ಮೊಟ್ಟೆಗಳನ್ನು (Rotten Eggs) ವಿತರಣೆ ಮಾಡಿರುವ ಘಟನೆ ನಡೆದಿದೆ. ಅಂಗನವಾಡಿ ಕೇಂದ್ರದಲ್ಲಿ ನೀಡಿರುವ ಮೊಟ್ಟೆಗಳನ್ನು(Egg) ತೆಗೆದುಕೊಂಡು ಮನೆಗೆ ಹೋಗಿ ಬೇಯಿಸಿ ಸಿಪ್ಪೆ ಸುಲಿದಾಗ ಮೊಟ್ಟೆಗಳು ಕೊಳೆತಿರುವುದು ಇದೀಗ ಬೆಳಕಿಗೆ ಬಂದಿದೆ. ಗರ್ಭಿಣಿಯರು ಕೂಡಲೇ ಅಂಗವಾಡಿ ಕೇಂದ್ರಕ್ಕೆ ಬಂದು ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಕೆ ಮಾಡುತ್ತಿರುವ ಗುತ್ತಿದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಪೆ ಗುಣಮಟ್ಟದ ಮತ್ತು ಹಳೆಯ ಮೊಟ್ಟೆಗಳನ್ನು ಇವರು ವಿತರಣೆ ಮಾಡುತ್ತಿದ್ದಾರೆ.ಏನಾದರೂ ಮೊಟ್ಟೆಯನ್ನು ಒಂದು ವೇಳೆ ಸಣ್ಣ ಮಕ್ಕಳು ತಿಂದಿದ್ದರೆ ಇದರಿಂದ ಭಾರೀ ಅನಾಹುತ ಸಂಭವಿಸುತ್ತಿತ್ತು. ಮೊಟ್ಟೆ ಪೂರೈಕೆ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳಬೇಕು, ಬ್ಲಾಕ್ ಲಿಸ್ಟ್‌ಗೆ(Black list) ಅವರನ್ನು ಕೂಡಲೇ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಇಲ್ಲಿ ಗುತ್ತಿಗೆದಾರರೊಂದಿಗೆ ಇಲ್ಲಿನ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ.ಅಂಗನವಾಡಿ ಕೇಂದ್ರಗಳಿಗೆ ಬರುವ ಮೊಟ್ಟೆಗಳನ್ನು ಪರಿಶೀಲನೆ ಮಾಡದೆ ಇವರು ತೆಗೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಈ ಕೂಡಲೇ ಸೂಕ್ತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹೊಳೆನರಸೀಪುರದಲ್ಲಿ(Holenarasipura) ಕೇವಲ 4 ದಿನಗಳ ಅಂತರದಲ್ಲಿ ಇದೀಗ 2ನೇ ಪ್ರಕರಣ ನಡೆದಿದೆ. ಹೊಳೆನರಸೀಪುರ ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಕಳೆದ ಗುರುವಾರ ಸಹ ಕೆಟ್ಟ ಮೊಟ್ಟೆಗಳನ್ನು ಗರ್ಭಿಣಿಯರಿಗೆ ಹಾಗೂ ಪುಟಾಣಿ ಮಕ್ಕಳಿಗೆ ವಿತರಿಸಲಾಗಿತ್ತು. ಇದೀಗ ಹೊಳೆನರಸೀಪುರ ತಾಲೂಕಿನಲ್ಲಿ ಕೊಳೆತ ಮೊಟ್ಟೆಯನ್ನು ಮತ್ತೊಂದು ಅಂಗನವಾಡಿ ಕೇಂದ್ರದಲ್ಲಿ ವಿತರಣೆ ಮಾಡಿದ್ದಾರೆ. ಈ ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಶ್ಮಿತಾ ಅನೀಶ್

Exit mobile version