ಆರ್‌ಸಿಬಿ ನಾಯಕತ್ವಕ್ಕೆ ಕೊಹ್ಲಿ ಗುಡ್ ಬೈ, ಇದು ಕೊಹ್ಲಿ ನಾಯಕತ್ವದ ಕೊನೆಯ ಐಪಿಎಲ್

ಬೆಂಗಳೂರು ಸೆ 20 : ಇತ್ತೀಚೆಗಷ್ಟೇ  ಮುಂಬರುವ ವಿಶ್ವಕಪ್‌ ಟಿ20 ನಂತರ ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಘೋಷಿಸಿದ ವಿರಾಟ್ ಕೊಹ್ಲಿ ಈಗ ಐಪಿಎಲ್‌ನಲ್ಲಿ ಮುಂಬರುವ ಆವೃತ್ತಿಯಿಂದ ಆರ್‌ಸಿಬಿ ತಂಡದ ನಾಯಕತ್ವಕ್ಕೂ ಕೂಡ ಗುಡ್‌ ಬೈ ಹೇಳಿದ್ದಾರೆ.
“ಆರ್‌ಸಿಬಿ ತಂಡದ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್. ಆದರೆ ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ನಾನು ಆರ್‌ಸಿಬಿ ಆಟಗಾರನಾಗಿ ಮುಂದುವರಿಯುತ್ತೇನೆ. ನನ್ನನ್ನು ನಂಬಿದ್ದಕ್ಕಾಗಿ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಪ್ರಸಕ್ತ ಸಾಲಿನ ಐಪಿಎಲ್‌ ಮುಕ್ತಾಯದ ಬಳಿಕ ರಾಯಲ್‌ ಚಾಲೆಂಜರ್ಸ್‌ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಖುದ್ದು ಘೋಷಣೆಯನ್ನು ಮಾಡಿದ್ದಾರೆ.

2008ರಿಂದಲೂ ಆರ್‌ಸಿಬಿ ಆಟಗಾರ: ಐಪಿಎಲ್ ಮೊದಲ ಅವೃತ್ತಿ 2008ರಲ್ಲಿ ಪ್ರಾರಂಭವಾಗಿತ್ತು,  ವಿರಾಟ್ ಕೊಹ್ಲಿ 2008ರಿಂದ ಆರ್‌ಸಿಬಿ ಆಟಗಾರನಾಗಿ ತಮ್ಮ ಐಪಿಎಲ್ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅಂದಿನಿಂದ ಸತತವಾಗಿ 14ನೇ ಆವೃತ್ತಿಯವರೆಗೂ ವಿರಾಟ್ ಆರ್‌ಸಿಬಿ ತಂಡದ ಆಟಗಾರನಾಗಿ ಮುಂದುವರಿದಿದ್ದಾರೆ ಡೇನಿಯಲ್‌ ವೆಟ್ಟೋರಿ ರಾಜೀನಾಮೆಯ ಬೆನ್ನಲ್ಲೇ ವಿರಾಟ್‌ ಕೊಯ್ಲಿ ಅವರನ್ನು 2013ರಲ್ಲಿ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ವಿರಾಟ್‌ ಕೊಯ್ಲಿ ನಾಯಕತ್ವದಲ್ಲಿ ಆರ್‌ಸಿಬಿ ತಂಡ ಒಟ್ಟು 132 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 62 ಪಂದ್ಯಗಳಲ್ಲಿ ಗೆಲುವು ಕಂಡಿದ್ದು, 66 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. 2016ರಲ್ಲಿ ಆರ್‌ಸಿಬಿ ಫೈನಲ್‌ ಪ್ರವೇಶಿಸಿತ್ತು. ವಿರಾಟ್ ಕೊಹ್ಲಿ ಈ ಮೂಲಕ ಐಪಿಎಲ್‌ನಲ್ಲಿ ಆರಂಭಿಕ ಆವೃತ್ತಿಯಿಂದಲೂ ಒಂದೇ ತಂಡದ ಪರವಾಗಿ ಆಡಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ

Exit mobile version