ಆರ್‍ಎಸ್‍ಎಸ್ ಮುಖ್ಯಸ್ಥರ ಹೇಳಿಕೆ ಸ್ವಾಗತಾರ್ಹ!

RSS

ಆರ್‍ಎಸ್‍ಎಸ್(RSS) ಮುಖ್ಯಸ್ಥರಾದ ಮೋಹನ್ ಭಾಗವತ್(Mohan Bhagawat) ಅವರು ದೆಹಲಿಯಲ್ಲಿ(NewDelhi) ಮಾತನಾಡಿ, ಕೆಲವು ಪ್ರದೇಶಗಳ ಬಗ್ಗೆ ನಮಗೆ ಭಕ್ತಿ ಇರುತ್ತದೆ. ಅದರ ಬಗ್ಗೆ ನಾವು ಮಾತನಾಡುತ್ತಿರುತ್ತೇವೆ.

ಆದರೆ ಪ್ರತಿದಿನ ಹೊಸ ಹೊಸ ಸ್ಥಳಗಳ ಬಗ್ಗೆ ಪ್ರಸ್ತಾಪಿಸುವುದು ಸರಿಯಾಗಲಾರದು. ನಾವು ಪ್ರತಿದಿನ ಹೊಸ ಹೊಸ ವಿವಾದಗಳನ್ನು ಹುಟ್ಟುಹಾಕಬಾರದು ಎಂದು ನೀಡಿರುವ ಹೇಳಿಕೆ ಸಾಗತಾರ್ಹವಾಗಿದೆ. ನಾವು ಬದಲಾಯಿಸಲಾಗದ ಇತಿಹಾಸವಿದೆ. ನಾವು ಆ ಇತಿಹಾಸವನ್ನು ಬರೆದಿಲ್ಲ, ಈಗಿನ ಹಿಂದೂಗಳೂ ಅಲ್ಲ, ಮುಸ್ಲಿಮರೂ ಅಲ್ಲ. ಇದು ಹಿಂದೆ ಸಂಭವಿಸಿತು ಎನ್ನುವ ಭಾಗವತ್ ಅವರ ಮಾತುಗಳು ಇತಿಹಾಸವನ್ನು ಒಪ್ಪಿಕೊಂಡು ಭವಿಷ್ಯದ ಕುರಿತು ನಾವು ಆಲೋಚಿಸಬೇಕಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ.

ಜ್ಞಾನವಾಪಿ ಮಸೀದಿ(Gyanvapi Mosque) ವಿವಾದವನ್ನು ಮತ್ತೊಂದು ಅಯೋಧ್ಯೆ ವಿವಾದವಾಗಿಸಬೇಕು ಎನ್ನುವ ಪ್ರಯತ್ನಗಳಿಗೆ ಭಾಗವತ್ ಅವರ ಈ ಹೇಳಿಕೆ ತಣ್ಣೀರು ಎರಚಿದೆ. ಇಂಥ ಪ್ರಯತ್ನಗಳನ್ನು ಆರ್‍ಎಸ್‍ಎಸ್ ಸಮರ್ಥಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಶಾಂತಿ ಮತ್ತು ಸಹಬಾಳ್ವೆಯೇ ನಮ್ಮ ಮೂಲಮಂತ್ರ ಎಂಬುದನ್ನು ಆರ್‍ಎಸ್‍ಎಸ್ ಪ್ರತಿಪಾದಿಸುತ್ತಲೇ, ಇತಿಹಾಸದಲ್ಲಾದ ಪ್ರಮಾದಗಳಿಗೆ, ವರ್ತಮಾನದಲ್ಲಿ ಪರಿಹಾರ ಕಂಡುಕೊಳ್ಳುವುದು ಮೂರ್ಖತನವಾದಿತು ಎಂಬುದನ್ನು ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ ಮೋಹನ್ ಭಾಗವತ್ ಅವರ ಈ ಹೇಳಿಕೆ ಸಂಘದ ಒಟ್ಟು ಪ್ರಗತಿಪರ ಮತ್ತು ವಿಶಾಲ ಮನೋಭಾವದ ಸಂಕೇತವಾಗಿದೆ. ಹಿಂದೂ ಸಮಾಜ ಭವಿಷ್ಯದಲ್ಲಿ ಸಾಗಬೇಕಾದ ಮತ್ತು ಈ ದೇಶವನ್ನು ಹೇಗೆ ಕಟ್ಟಬೇಕು ಎನ್ನುವ ನಿಟ್ಟಿನಲ್ಲಿ ಭಾಗವತ್ ಅವರು ನೀಡಿರುವ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ‘ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಅಗತ್ಯವಿಲ್ಲ’ ಎನ್ನುವ ಅವರ ಹೇಳಿಕೆ,

ಹಿಂದೂ ಸಮಾಜ ಅನಗತ್ಯ ವಿವಾದಗಳನ್ನು ಕೈಬಿಟ್ಟು, ಪ್ರಗತಿಯೆಡೆಗೆ ಹೆಜ್ಜೆ ಹಾಕಬೇಕೆಂದು ಮತ್ತು ಅನಗತ್ಯ ವಿವಾದಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವ ಸಂಘದ ನಿಲುವನ್ನು ಸ್ಪಷ್ಟಪಡಿಸಿದೆ.

Exit mobile version