ಬೆಳಕಿನ ಹಬ್ಬ ದೀಪಾವಳಿ: ಜಿಲ್ಲಾಡಳಿತದಿಂದ ಪಟಾಕಿ ಬಳಕೆಗೆ ಹಲವು ನಿಯಮ

BENGALURU: ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ್ದ ಎರಡು ಪಟಾಕಿ ದುರಂತದಿಂದ (rules for use Firecrackers) ಸಾವು-ನೋವುಗಳಾಗಿದ್ದವು. ಇದರಿಂದ ಎಚ್ಚತ್ತ ರಾಜ್ಯ

ಸರ್ಕಾರ ದೀಪಾವಳಿ ಹೊರತುಪಡಿಸಿ ಉಳಿದ ಯಾವುದೇ ಸಭೆ-ಸಮಾರಂಭ, ರಾಜಕೀಯ ಕಾರ್ಯಕ್ರಮ, ರ‍್ಯಾಲಿಗಳಲ್ಲಿ ಪಟಾಕಿ ಹಾರಿಸುವುದನ್ನು ನಿಷೇಧಿಸಿದ್ದು, ಪಟಾಕಿ ದುರಂತದ ಬಳಿಕ ಸರ್ಕಾರ

ಪಟಾಕಿ ವ್ಯಾಪರಕ್ಕೆ ಕಟ್ಟುನಿಟ್ಟನ ಕ್ರಮಗಳನ್ನು ಜಾರಿ ಮಾಡಿದೆ. ಇದರಿಂದ ಪಟಾಕಿ (rules for use Firecrackers) ವ್ಯಾಪಾರಸ್ಥರಿಗೆ ಸಂಕಷ್ಟ ಶುರುವಾಗಿದೆ.

ಇನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿ ಹಾರಿಸಲು ಮಾತ್ರ ಅವಕಾಶ ನೀಡಿದ್ದು, ಒಂದು ವೇಳೆ ನಿಯಮ ಮೀರಿದರೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಬೆಂಗಳೂರು

ನಗರ ಪೊಲೀಸ್​ ಇಲಾಖೆ 320 ಪಟಾಕಿ ಅಂಗಡಿಗಳಿಗೆ ಮಾತ್ರ ಅನುಮತಿ ನೀಡಿದೆ. ಇಲಾಖೆ ನಿಗದಿಪಡಿಸಿದ 62 ಮೈದಾನಗಳಲ್ಲಿ ಮಾತ್ರ ಅಂಗಡಿಗಳನ್ನು ಹಾಕಬೇಕು.

ಈ ಪೈಕಿ 263 ಜನರಿಗೆ ಲಾಟರಿ ಮೂಲಕ ಲೈಸೆನ್ಸ್ ನೀಡಲಾಗಿದ್ದು, ಒಟ್ಟು 964 ಜನರು ಲೈಸೆನ್ಸ್​​ಗಾಗಿ ಅರ್ಜಿ ಹಾಕಿದ್ದರು. ಉಳಿದವರು ಈ ಹಿಂದೆ (ಪಿಸೋ) ಮೂಲಕ ಲೈಸೆನ್ಸ್​​​​​ ಪಡೆದಿದ್ದರು. ಅತ್ತಿಬೆಲೆ

ಹಾಗೂ ಹೊಸೂರು ರಸ್ತೆಯಲ್ಲಿ 140 ಪಟಾಕಿ ಅಂಗಡಿಗಳಿಗೆ ಮಾರಾಟಕ್ಕೆ ಅವಕಾಶ ಸಿಕ್ಕಿಲ್ಲ. ಪೊಲೀಸ್​​ರು ಅಂಗಡಿಗಳಿಗೆ ನೋಟಿಸ್ ನೀಡಿ ಸೀಜ್ ಮಾಡಿದ್ದಾರೆ.

ಆದರೆ ಮಾರಟಗಾರರು ಕಳೆದ ಆರು ತಿಂಗಳ ಮೊದಲೆ, ಲಕ್ಷಂತಾರ ರೂಪಾಯಿ ಹೂಡಿಕೆ ಮಾಡಿ ಪಟಾಕಿ ಖರೀದಿ ಮಾಡಿದ್ದಾರೆ. ಆದರೆ ಈಗ ಸರ್ಕಾರ ಪಟಾಕಿ ಮಾರಟಕ್ಕೆ ಬ್ರೇಕ್ ಹಾಕಿದೆ. ಈ ಹಿನ್ನೆಲೆಯಲ್ಲಿ

ವ್ಯಾಪರಸ್ಥರು ತಮಿಳುನಾಡಿಗೆ ಹೋಗಿ ಪಟಾಕಿ ಮಾರಟ ಮಾಡುತ್ತಿದ್ದು, ಪಟಾಕಿ ಮಾರಟ ಮಾಡಲು ತಮಿಳನಾಡಿನ ವ್ಯಾಪರಸ್ಥರು ಬಿಡುತ್ತಿಲ್ಲ. ಹೀಗಾಗಿ ಸದ್ಯ ಖರೀದಿ ಮಾಡಿರುವ ಸ್ಟಾಕ್ ಕ್ಲೀಯರ್

ಮಾಡೋದಕ್ಕೆ ಆದರೂ ಮೂರೇ ಮೂರು ದಿನಗಳ ಕಾಲ ಅವಕಾಶ ನೀಡುವಂತೆ ಸರ್ಕಾರಕ್ಕೆ ಪಟಾಕಿ ವ್ಯಾಪಾರಸ್ಥರು ಮನವಿ ಸಲ್ಲಿಸಲಿದ್ದಾರೆ.

ಇದನ್ನು ಓದಿ: ಅಮೇರಿಕಾದ ಈ ನಗರದಲ್ಲಿ ಮೊಬೈಲ್​, ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿದರೆ ಜೈಲು ಗ್ಯಾರಂಟಿ!

Exit mobile version