ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಕುಸಿತ

Mumbai : ಅಮೇರಿಕಾದ ಡಾಲರ್ (Rupee depreciated against dollar) ಎದುರು ಭಾರತದ ರೂಪಾಯಿ ಮೌಲ್ಯ 11 ಪೈಸೆ ಕುಸಿದು 82.73 ಕ್ಕೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರೂಪಾಯಿ ಇದೀಗ ಮತ್ತಷ್ಟು ಕುಸಿದಿದ್ದು,

ವಿದೇಶಿ ವ್ಯಾಪಾರದ ಮೇಲೆ ಇದರ ನೇರ ಪರಿಣಾಮ ಉಂಟಾಗಲಿದೆ ಎಂದು ಆರ್ಥಿಕ (Rupee depreciated against dollar) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರದಂದು ಇಂಟರ್ಬ್ಯಾಂಕ್ ವಿದೇಶಿ ವಿನಿಮಯದ ಆರಂಭಿಕ ವಹಿವಾಟಿನಲ್ಲಿ ರೂಪಾಯಿ(Rupees) ಮೌಲ್ಯ 82.69ಕ್ಕೆ ಪ್ರಾರಂಭವಾಯಿತು, ದಿನದ ಅಂತ್ಯಕ್ಕೆ 11 ಪೈಸೆಗಳಷ್ಟು ಕುಸಿಯಿತು.

ಆದರೆ ಸೋಮವಾರ, ದೇಶೀಯ ಕರೆನ್ಸಿ ಡಾಲರ್ ವಿರುದ್ಧ 11 ಪೈಸೆ ಏರಿಕೆಯಾಗಿ 82.62 ಕ್ಕೆ ಸ್ಥಿರವಾಗಿತ್ತು. ಸೋಮವಾರ, ರೂಪಾಯಿ ಮೌಲ್ಯ 82.80 ನಲ್ಲಿ ಪ್ರಾರಂಭವಾಗಿ, 82.69 ತಲುಪಿ 82.57 ರ ದಿನದ ಗರಿಷ್ಠ ಮಟ್ಟವನ್ನು ಕಂಡಿತ್ತು. ಶುಕ್ರವಾರದ ಮುಕ್ತಾಯಕ್ಕೆ 82.75 ಕ್ಕಿಂತ ಆರು ಪೈಸೆ ಏರಿಕೆಯಾಗಿತ್ತು.

http://ಇದನ್ನೂ ನೋಡಿ:https://fb.watch/hxiQQuFhlw/

ಇನ್ನು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಬೆಂಚ್ಮಾರ್ಕ್ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 393.68 ಪಾಯಿಂಟ್ಗಳನ್ನು ಕುಸಿದು 61,412.51 ಕ್ಕೆ ತಲುಪಿದ ನಂತರ ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ಪ್ರಾರಂಭವಾದವು.

https://vijayatimes.com/chandrababu-2024-last-election/

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಬಿಎಸ್ಇ) ನಿಫ್ಟಿ 123.1 ಪಾಯಿಂಟ್ ಕುಸಿದು 18,297.35ಕ್ಕೆ ತಲುಪಿದೆ.

ಈ ನಡುವೆ ಬ್ಯಾಂಕ್ ಆಫ್ ಜಪಾನ್ ದೀರ್ಘಾವಧಿಯ ಬಡ್ಡಿದರಗಳನ್ನು ಹೆಚ್ಚಿಸುವುದಾಗಿ ಘೋಷಿಸಿದ ನಂತರ ಜಪಾನಿನ ಯೆನ್ ಮೌಲ್ಯ ಏರಿಕೆ ಕಂಡರೆ, ಏಷ್ಯನ್ ಷೇರುಗಳು ಕುಸಿತ ಕಂಡಿವೆ.ಇನ್ನು ಭಾರತೀಯ ರೂಪಾಯಿ(Indian Rupees) ಮತ್ತು ಅಮೇರಿಕಾದ ಡಾಲರ್ನ ವಿದೇಶಿ ವಿನಿಮಯ ದರವನ್ನು ನಿರ್ಧರಿಸುವ ಹಲವಾರು ಅಂಶಗಳಿವೆ.

ಹಣದುಬ್ಬರ, ಬಡ್ಡಿದರಗಳು, ಸಾರ್ವಜನಿಕ ಸಾಲಗಳು, ಆರ್ಥಿಕತೆಯ ಮತ್ತು ರಾಜಕೀಯ ಅಸ್ಥಿರತೆಯ ಇದು ಪ್ರಭಾವಗಳನ್ನು ಒಳಗೊಂಡಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಕುಸಿತ ಉಂಟಾದಾಗ, ಅಮೆರಿಕನ್ ಡಾಲರ್ ಖರೀದಿಸಲು ಹೆಚ್ಚು ರೂಪಾಯಿ ವೆಚ್ಚವಾಗುತ್ತದೆ.

ರೂಪಾಯಿ ಮತ್ತು ಡಾಲರ್ ವಿನಿಮಯ ದರವು ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತದೆ. ಆಮದುಗಳು ಅಗ್ಗವಾಗುವುದರಿಂದ ರೂಪಾಯಿ ಮೌಲ್ಯವರ್ಧನೆಯು ಸಾಮಾನ್ಯವಾಗಿ ಹಣದುಬ್ಬರವನ್ನು ಕಡಿಮೆ ಮಾಡುತ್ತದೆ.

-ಮಹೇಶ್.ಪಿ.ಎಚ್

Exit mobile version