ವದಂತಿಗಳಿಗೆ ಬಲಿಯಾಗದೆ ಪೊಲೀಸ್‌ ಇಲಾಖೆಯ ಮೇಲೆ ವಿಶ್ವಾಸವಿಡಬೇಕು – ಋಷಿಕೇಶ್ ಸೋನವಾನೆ

ವದಂತಿಗಳಿಗೆ ಬಲಿಯಾಗದೆ ಪೊಲೀಸ್‌ ಇಲಾಖೆಯ ಮೇಲೆ ವಿಶ್ವಾಸವಿಡಬೇಕು – ಋಷಿಕೇಶ್ ಸೋನವಾನೆ

 ಪೊಲೀಸರನ್ನು ಬೆದರಿಕೆಯಿಂದ ಬಗ್ಗಿಸಬಹುದು ಎಂಬ ಭ್ರಮೆ ಇದ್ದರೆ ಅದನ್ನು ಇಗಲೇ ತಮ್ಮ ತಲೆಯಿಂದ ತೆಗೆದುಹಾಕಿ ಯಾವುದೇ ಕಾರಣಕ್ಕೂ ಪೊಲೀಸ್‌ ಇಲಾಖೆಯನ್ನು ಬೆದರಿಕೆಯಿಂದ ಬಗ್ಗಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್ ಸೋನವಾನೆ ತಿಳಿಸಿದರುನಗರದಲ್ಲಿ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪಶ್ಚಿಮ ವಲಯದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ದೇವಜ್ಯೋತಿ ರೇ , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ (ಎಸ್ ಪಿ )ಋಷಿಕೇಶ್ ಸೋನವಾನೆ, ಹೆಚ್ಚುವರಿ ಎಸ್ ಪಿ ಶಿವಕುಮಾರ್ ಗುನಾರೆ. ಬುಧವಾರ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಋಷಿಕೇಶ್ ಸೋನವಾನೆ ” ಮಾರಕಾಸ್ತ್ರದಿಂದ ನಡೆದ ಹಲ್ಲೆ ಮತ್ತು ದಾಳಿಯ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಪ್ರಕರಣದ ಪ್ರಮುಖ ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಜನರು ವದಂತಿಗಳಿಗೆ ಬಲಿಯಾಗದೆ ಪೋಲೀಸ್ ಇಲಾಖೆಯ ಮೇಲೆ ವಿಶ್ವಾಸವಿಡಬೇಕು, ಜನರಿಗೆ ಯಾವುದೇ ರೀತಿಯ ಗೊಂದಲ ಮತ್ತು ಸಂದೇಹವಿದ್ದರೆ ಅವರು ನೇರವಾಗಿ ಸಂಬಂಧಪಟ್ಟವರನ್ನು ಸಂಪರ್ಕಿಸಬಹುದು.. ಪೊಲೀಸರಿಗೆ ಬೆದರಿಕೆ ಹಾಗೂ ಬಲವಂತದ ಮುಖಾಂತರ ಇಲಾಖೆಯನ್ನು ಬಗ್ಗಿಸಬಹುದು ಎಂಬ ಭ್ರಮೆಯಲ್ಲಿ ಯಾರು ಇರುವುದು ಬೇಡ. ನಾವು ಈ ವಿಷಯದಲ್ಲಿ ಮುನ್ನೆಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಈ ವಿಷಯದಲ್ಲಿ ಯಾವ ಅಮಾಯಕರ ವಿರುದ್ಧವೂ ಪ್ರಕರಣ ದಾಖಲಾಗದಂತೆ ನಿಗಾವಹಿಸಿದ್ದೇವೆ ಎಂದರು.

ಹಲ್ಲೆ ನಡೆಸಿದ ನಿಖರ ಮಾಹಿತಿ ಆಧಾರದ ಮೇಲೆ ಪಿ. ಎಫ್. ಐ ನ ಮೂವರು ಕಾರ್ಯಕರ್ತರನ್ನು ವಿಚಾರಣೆ ನಡೆಸಲು ಪೊಲೀಸರು ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಇದನ್ನು ವಿರೋಧಿಸಿದ ಗುಂಪೊಂದು ನಗರದ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಲ್ಲದೇ ಠಾಣೆಗೆ ನುಗ್ಗಿ ಹಲ್ಲೆ ನಡೆಸಲು ಮುಂದಾದರು. ಇದರಿಂದ ಪೊಲೀಸರು ಆ ಪುಂಡರ ಮೇಲೆ ಲಾಠಿ ಪ್ರಹಾರ ಮಾಡಲೇಬೇಕಾದ ಪರಿಸ್ಥಿತಿ ಎದುರಾಯಿತು. ಈ ವಿಷಯವಾಗಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿದೆ ಎಂದರು

Exit mobile version