ಶತ್ರು ದೇಶಗಳ ಪಟ್ಟಿ ಬಿಡುಗಡೆ ಮಾಡಿದ ರಷ್ಯಾ!

putin

ರಷ್ಯಾ(Russia) ಮತ್ತು ಉಕ್ರೇನ್(Ukraine) ದೇಶಗಳ ಸಂಘರ್ಷ(Conflict) ಇದೀಗ ಇಡೀ ವಿಶ್ವವನ್ನೇ ಆವರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಅದರಲ್ಲೂ ಐರೋಪ್ಯ ದೇಶಗಳ ವಿರುದ್ದ ರಷ್ಯಾ ಬಹಿರಂಗವಾಗಿಯೇ ಸಮರ ಸಾರಿದೆ. ಅಮೇರಿಕ(America) ಮತ್ತು ಅದರ ಮಿತ್ರ ರಾಷ್ಟ್ರಗಳು(Friendly Nations) ರಷ್ಯಾ ವಿರುದ್ದ ಆರ್ಥಿಕ ದಿಗ್ಬಂಧನ ಹೇರಿದ ಬಳಿಕ ರಷ್ಯಾ ಕೂಡಾ ತನ್ನ ಶತ್ರು ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ತನ್ನನ್ನು ವಿರೋಧಿಸುತ್ತಿರುವ ಮತ್ತು ಅಮೇರಿಕದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.

ಇನ್ನು ರಷ್ಯಾ ತನ್ನ ವಿರೋಧಿ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಎಚ್ಚೆತ್ತುಕೊಂಡಿರುವ ಪೋಲೆಂಡ್ ಇದೀಗ ಉಕ್ರೇನ್‍ಗೆ ಯಾವುದೇ ಯುದ್ದ ವಿಮಾನಗಳನ್ನು ನೀಡುವುದಿಲ್ಲ ಎಂದು ಘೋಷಿಸಿದೆ. ಇಷ್ಟು ದಿನಗಳ ಕಾಲ ಉಕ್ರೇನ್‍ಗೆ ಬೆಂಬಲವಾಗಿ ನಿಂತಿದ್ದ ಪೋಲೆಂಡ್ ಇದೀಗ ಹಿಂದೆ ಸರಿದಿದೆ. ಇದಕ್ಕೆ ಮುಖ್ಯ ಕಾರಣ ರಷ್ಯಾ ನೀಡಿದ ಎಚ್ಚರಿಕೆ. ಹೌದು, ಉಕೇನ್‍ನೊಂದಿಗೆ ಗಡಿ ಹಂಚಿಕೊಂಡಿರುವ ಪೋಲೆಂಡ್ ಮೇಲೆ ರಷ್ಯಾ ಯುದ್ದ ಘೋಷಣೆ ಮಾಡಬಹುದು ಎಂಬ ಭಯ ಪೋಲೆಂಡ್‍ಗೆ ಕಾಡಿದೆ. ಈಗಾಗಲೇ ನ್ಯಾಟೋ ಪಡೆಗಳು ಮತ್ತು ಐರೋಪ್ಯ ಒಕ್ಕೂಟ ಉಕ್ರೇನ್‍ಗೆ ಯಾವುದೇ ಮಿಲಿಟರಿ ಸಹಾಯ ಮಾಡಲಿಲ್ಲ. ಅಮೇರಿಕಾ ಕೂಡಾ ತಟಸ್ಥ ನಿಲುವು ತಳೆದಿದೆ. ಈ ಸಮಯದಲ್ಲಿ ರಷ್ಯಾದ ವಿರೋಧ ಕಟ್ಟಿಕೊಳ್ಳುವುದು ಮೂರ್ಖತನದ ಪರಮಾವಧಿ ಎಂದು ಪೋಲೆಂಡ್ ಭಾವಿಸಿದಂತಿದೆ.

ಹೀಗಾಗಿ ಪೋಲೆಂಡ್ ಕೇವಲ ನಿರಾಶ್ರಿತರಿಗೆ ನೆಲೆ ನೀಡುವ ಕಾರ್ಯವನ್ನು ಮಾತ್ರ ಮಾಡುವುದಾಗಿ ಹೇಳಿದೆ. ಈ ಮೂಲಕ ಉಕ್ರೇನ್‍ಗೆ ಇಷ್ಟು ದಿನ ನೀಡುತ್ತಿದ್ದ ಮಿಲಿಟರಿ ನೆರವನ್ನು ಸ್ಥಗಿತಗೊಳಿಸುವ ಚಿಂತನೆ ನಡೆಸಿದೆ. ಇನ್ನು ರಷ್ಯಾದ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ರಷ್ಯಾ ವಿರೋಧಿ ರಾಷ್ಟ್ರಗಳ ಪಟ್ಟಿಯಲ್ಲಿ ಒಟ್ಟು 31 ರಾಷ್ಟ್ರಗಳಿವೆ. ಏಷ್ಯಾ ಭಾಗದಲ್ಲಿ ಜಪಾನ್ ಮತ್ತು ಸಿಂಗಪುರ ದೇಶಗಳನ್ನು ತನ್ನ ಪರಮ ಶತ್ರು ಎಂದು ರಷ್ಯಾ ಹೇಳಿಕೊಂಡಿದೆ. ಅದೇ ರೀತಿ ಐರೋಪ್ಯ ಒಕ್ಕೂಟದ ಮೊನಾಕೊ, ನಾರ್ವೆ, ಸ್ಯಾನ್ ಮರಿಯೋ, ಉತ್ತರ ಮೆಸಿಡೋನಿಯಾ, ಮಾಂಟೆನೆಗ್ರೊ, ಸ್ವಿರ್ಜಲ್ಯಾಂಡ್, ಅಲ್ಬೇನಿಯಾ, ಅಂಡೋರಾ, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಗ್ರೀಸ್, ಬ್ರಿಟನ್, ಫ್ರಾನ್ಸ್, ಅಮೇರಿಕಾ ಸೇರಿದಂತೆ 27 ದೇಶಗಳನ್ನು ಶತ್ರುಗಳ ಪಟ್ಟಿಗೆ ಸೇರಿಸಿದೆ.

ಇನ್ನು ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ವಿಶ್ವದ ಅನೇಕ ರಾಷ್ಟ್ರಗಳು ರಷ್ಯಾ ಮೇಲೆ ಕಠಿಣ ನಿರ್ಬಂಧ ಹೇರಿದರು ರಷ್ಯಾ ಯಾವುದಕ್ಕೂ ತಲೆ ಕಡೆಸಿಕೊಂಡಿಲ್ಲ. ಈ ನಡುವೆ ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ದ ನಿರ್ಣಯ ಅಂಗೀಕರಿಸಿರುವ ಬೆನ್ನಲ್ಲೇ, ಕೆಲ ರಾಷ್ಟ್ರಗಳಿಗೆ ರಷ್ಯಾ ಯುದ್ದದ ಎಚ್ಚರಿಕೆಯನ್ನು ನೀಡಿದೆ. ರಷ್ಯಾ ಮತ್ತು ಉಕ್ರೇನ್ ಯುದ್ದದ ವಿಚಾರದಲ್ಲಿ ವಿಶ್ವದ ಯಾವುದೇ ದೇಶ ಮಧ್ಯಪ್ರವೇಶ ಮಾಡುವುದನ್ನು ರಷ್ಯಾ ಒಪ್ಪುವುದಿಲ್ಲ. ಹಾಗೇ ಮಧ್ಯಪ್ರವೇಶ ಮಾಡಿದರೆ, ಯುದ್ದ ಉಕ್ರೇನ್ ಗಡಿಯನ್ನು ದಾಟಬಹುದು ಎಂದು ಉಕ್ರೇನ್‍ಗೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ ನೀಡಿದ್ದಾರೆ.

Exit mobile version