ಸಚಿನ್ ವಾಜೆ ಪ್ರಕರಣ: ಪ್ರತಿ ತಿಂಗಳು ಲಂಚ ಸ್ವೀಕರಿಸುತ್ತಿದ್ದ ಬಗ್ಗೆ ಎನ್​ಐಎಗೆ ಸಿಕ್ಕಿದೆ ಮಹತ್ವದ ದಾಖಲೆಗಳು

ನವದೆಹಲಿ, ಏ.05: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಉದ್ಯಮಿ ಮನ್​ಸುಖ್ ಹಿರೇನ್ ಪ್ರಕರಣಕ್ಕೆ ಸಂಬಂಧಿಸಿ ಹೊಸ ತನಿಖಾ ಮಾಹಿತಿಯೊಂದು ಇದೀಗ ಬಹಿರಂಗವಾಗಿದೆ. ಸದ್ಯ ಗೃಹ ರಕ್ಷಕ ದಳದ ಪೊಲೀಸ್ ಅಧಿಕಾರಿ ಆಗಿರುವ ಹಾಗೂ ಈ ಹಿಂದೆ ಮುಂಬೈ ಪೊಲೀಸ್ ಅಧಿಕಾರಿಯಾಗಿದ್ದ ಪರಮ್​ವೀರ್ ಸಿಂಗ್, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ತಿಂಗಳಿಗೆ ಮುಂಬೈ ನಗರದ ಬಾರ್, ಪಬ್​ಗಳಿಂದ 100 ಕೋಟಿ ಲಂಚ ಸಂಗ್ರಹಿಸುವಂತೆ ಈಗ ಅಮಾನತು ಆಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಗುರಿ ನೀಡಿದ್ದರು ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಅಧಿಕಾರಿಗಳು ಹೇಳುವಂತೆ, ಹಣ ಪಾವತಿಯ ದಾಖಲೆಗಳು ಲಂಚದ ಹಣ ಆಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಗುರುವಾರ ದಕ್ಷಿಣ ಮುಂಬೈನ ಗಿರ್​ಗಾಂವ್​ನ ಕಲ್ಬ್ ಒಂದಕ್ಕೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದ ಎನ್​ಐಎ ಈ ಮಾಹಿತಿ ಬಹಿರಂಗಪಡಿಸಿದೆ. ಕ್ಲಬ್​ನಿಂದ ಎನ್​ಐಎ ವಶಪಡಿಸಿಕೊಂಡಿರುವ ದಾಖಲೆಯು, ಕಚೇರಿಯ ಹೆಸರು ಹಾಗೂ ಸಿಬ್ಬಂದಿಯ ಹೆಸರು ಮತ್ತು ಸ್ಥಾನವನ್ನು ಹಾಗೂ ಅವರ ಹೆಸರಿನ ಬಳಿ ಪಡೆದ ಹಣದ ವಿವರಗಳನ್ನು ತೋರಿಸುತ್ತದೆ ಎಂದು ತಿಳಿದುಬಂದಿದೆ.

ಅಗತ್ಯವಿದ್ದರೆ, ಉನ್ನತ ತನಿಖೆಗಾಗಿ ದಾಖಲೆಗಳನ್ನು ಆದಾಯ ತೆರಿಗೆ ಅಥವಾ ಸಿಬಿಐ ಅಧಿಕಾರಿಗಳ ಬಳಿಯೂ ಹಂಚಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ಸದ್ಯ ಸಚಿನ್ ವಾಜೆ ಅಮಾನತು ಆಗಿದ್ದು, ತನಿಖೆ ಎದುರಿಸುತ್ತಿದ್ದಾರೆ. ಅವರ ಸಹ ಸಿಬ್ಬಂದಿ ನರೇಶ್ ಗೋರ್ ಹಾಗೂ ವಿನಾಯಕ್ ಶಿಂಧೆ ಕೂಡ ಎನ್​ಐಎ ತನಿಖೆ ಎದುರಿಸುತ್ತಿದ್ದಾರೆ.

Exit mobile version