‘ಸಾಲ’ಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸೋ ಮುನ್ನ, ಎಚ್ಚರ…

ಬೆಂಗಳೂರು, ಡಿ. 24: ಇತ್ತೀಚೆಗೆ ಹಲವಾರು ಜನರು ವಿವಿಧ ರೀತಿಯ ಆ್ಯಪ್, ವೆಬ್ ಸೈಟ್ ಗಳ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಏಕೆಂದರೆ ಇದು ಡಿಜಿಟಲ್‌ ಯುಗ. ಆದರೆ ಈ ಅರ್ಜಿ ಸಲ್ಲಿಸುವಿಕೆ ಎಷ್ಟು ಸೇಫ್‌? ಇದರಿಂದ ನಿಮ್ಮ ಖಾತೆ ಸುರಕ್ಷಿತವೂ ಅಲ್ಲ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಸಾಲಕ್ಕಾಗಿ ಅರ್ಜಿ ಸಲ್ಲಿಸೋ ಮುನ್ನಾ, ಈ ಸುದ್ದಿಯನ್ನು ನೋಡೋಣ…

ಅನಧಿಕೃತ ಡಿಜಿಟಲ್ ಪ್ಲಾಟ್ ಫಾರ್ಮ್ ಅಥವಾ ಮೊಬೈಲ್ ಆ್ಯಪ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ, ತ್ವರಿತ ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಜನರು ಡಿಜಿಟಲ್ ಸಾಲ ಹಗರಣಕ್ಕೆ ಬಲಿಯಾಗುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದೆ.

ಅನಧಿಕೃತ ಡಿಜಿಟಲ್ ಪ್ಲಾಟ್ ಫಾರ್ಮ್ ಅಥವಾ ಮೊಬೈಲ್ ಆ್ಯಪ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸುವವರು, ದಾಖಲೆಗಳನ್ನು ವಂಚನೆ ಮಾಡುವ ಸಾಧ್ಯತೆ ಇರುವುದರಿಂದ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ ಎಂದು ಆರ್‌ಬಿಐ ಎಚ್ಚರಿಸಿದೆ.

ಕಾಗದಪತ್ರಗಳಿಲ್ಲದೆ ತ್ವರಿತ ಸಾಲಗಳನ್ನು ಒದಗಿಸುವುದಾಗಿ ಹೇಳಿಕೊಳ್ಳುವ ಡಿಜಿಟಲ್ ವೇದಿಕೆಗಳು ಮತ್ತು ಮೊಬೈಲ್ ಆ್ಯಪ್‌ಗಳಿಂದ ಜನರು ಸಾಲ ತೆಗೆದುಕೊಳ್ಳಬಾರದು ಎಂದು ಕೇಂದ್ರೀಯ ಬ್ಯಾಂಕ್ ಒತ್ತಿ ಹೇಳಿದೆ. ಅಂತಹ ಸಾಲ ನೀಡುವ ಕಂಪನಿಗಳ ಹಿಂದಿನ ಎಲ್ಲ ದಾಖಲೆಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಇಂತಹ ಕಂಪನಿಗಳು ಗ್ರಾಹಕರಿಂದ ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತಿದ್ದು, ಅವುಗಳಲ್ಲಿ ಲೋನ್‌ಗಳನ್ನು ಪಡೆದುಕೊಂಡ ಬಳಿಕ ಅನೇಕ ಇತರ ಶುಲ್ಕಗಳನ್ನು ಜನರಿಂದ ತೆಗೆದುಕೊಳ್ಳುತ್ತವೆ. ಇದು ಗ್ರಾಹಕರಿಗೆ ಆರಂಭದಲ್ಲಿ ತಿಳಿದಿರುವುದಿಲ್ಲ . ಗ್ರಾಹಕರ ವೈಯಕ್ತಿಕ ಡೇಟಾವನ್ನು ಫೋನ್ ಮೂಲಕ ದುರ್ಬಳಕೆ ಮಾಡಿಕೊಳ್ಳಬಹುದಾದ ಸಾದ್ಯತೆಗಳು ಕೂಡಾ ನಡೆಯುತ್ತಿವೆ  ಎಂದು ಆರ್‌ಬಿಐ ಎಚ್ಚರಿಸಿದೆ.

ಇಂತಹ ಅನಧಿಕೃತ ವ್ಯಕ್ತಿಗಳು ಅಥವಾ ಆಯಪ್ ಗಳ ಜೊತೆ ಕೆವೈಸಿ ಯ ಪ್ರತಿಯನ್ನು ಹಂಚಿಕೊಳ್ಳಬಾರದು ಎಂದು ರಿಸರ್ವ್ ಬ್ಯಾಂಕ್ ಜನರಿಗೆ ಸೂಚಿಸಿದೆ. ಅನಧಿಕೃತ ಚಟುವಟಿಕೆಗಳು ನಡೆದಲ್ಲಿ, ಜನರು ಸಿಯುಚ್ ನಕಲಿ ಆಪ್ ಗಳು ಮತ್ತು ಪ್ಲಾಟ್ ಫಾರ್ಮ್ ಗಳ ಬಗ್ಗೆ ಜಾರಿ ಏಜೆನ್ಸಿಗಳಿಗೆ ದೂರು ನೀಡಬಹುದು. ಈ ದೂರನ್ನು ಸಹ ಆನ್ ಲೈನ್ ಮೂಲಕ ಸಚೇಟ್ ಪೋರ್ಟಲ್ ಮೂಲಕ https://sachet.rbi.org.in/

ಆರ್‌ಬಿಐನಲ್ಲಿ ನೋಂದಣಿ ಯಾಗಿರುವ ಬ್ಯಾಂಕ್ ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (ಎನ್‌ಬಿಎಫ್‌ಸಿ) ಜನರು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದರೊಂದಿಗೆ, ರಾಜ್ಯ ಸರ್ಕಾರಗಳು ಕಾನೂನು ನಿಬಂಧನೆಗಳ ಅಡಿಯಲ್ಲಿ ನಿಯಂತ್ರಿಸಲ್ಪಡುವ ಘಟಕಗಳು ಸಾಲ ನೀಡುವ ಕೆಲಸವನ್ನು ಮಾಡಬಹುದು.

ಬ್ಯಾಂಕ್ ಗಳು ಮತ್ತು ಎನ್ ಬಿಎಫ್ ಸಿಗಳ ಪರವಾಗಿ ಡಿಜಿಟಲ್ ಸಾಲ ನೀಡುವ ವೇದಿಕೆಗಳನ್ನು ನಿರ್ವಹಿಸುವವರು ಗ್ರಾಹಕರ ಮುಂದೆ ಆಯಾ ಹಣಕಾಸು ಸಂಸ್ಥೆಗಳ ಹೆಸರನ್ನು ಸ್ಪಷ್ಟವಾಗಿ ಹೆಸರಿಸಬೇಕು ಎಂದು ರಿಸರ್ವ್ ಬ್ಯಾಂಕ್ ಕಡ್ಡಾಯಗೊಳಿಸಿದೆ. ನೋಂದಾಯಿತ ಎನ್‌ಬಿಎಫ್‌ಸಿಗಳ ಹೆಸರು ಮತ್ತು ವಿಳಾಸಗಳನ್ನು ಆರ್‌ಬಿಐ ವೆಬ್ ಸೈಟ್ ನಿಂದ ನೋಡಬಹುದು. ಇದರ ಬಗ್ಗೆ ಜನ ಜಾಗೃತರಾಗಬೇಕೆಂದು ತಿಳಿಸಿದೆ.

Exit mobile version