2 ವರ್ಷಗಳ ಕಾಲ ನಾನು ನಟಿಯಾಗಲು ಸಾಧ್ಯವಾಗದಿದ್ದಾಗ ನಾನು ಈ ಕೆಲಸ ಮಾಡಿದೆ : ಸಮೀರಾ ರೆಡ್ಡಿ

Andra Pradesh : ತಮ್ಮ ಚಿತ್ರರಂಗದ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕಿರುವ ಬಹುಭಾಷಾ ನಟಿ ಸಮೀರಾ ರೆಡ್ಡಿ(Sameera Reddy) ಅವರು, ಚಿತ್ರರಂಗದ ಆರಂಭದ ದಿನಗಳಲ್ಲಿ ಎದುರಿಸಿದ ಕೆಲ ಸಂಗತಿಗಳನ್ನು (Sameera Reddy life Experience) ಮನಬಿಚ್ಚಿ ಮಾತನಾಡಿದ್ದಾರೆ.

ಟಾಲಿವುಡ್‌(Tollywood) ಪ್ರಿನ್ಸ್‌ ಮಹೇಶ್ ಬಾಬು(Prince M,ahesh Babu) ಅವರ ಚಿತ್ರದ ಮೊದಲ ಆಡಿಯೋದಲ್ಲಿ ಪ್ರದರ್ಶನ ನೀಡಲು ನನಗೆ ಸಾಧ್ಯವಾಗಲಿಲ್ಲ ಎಂದು ಹೇಳುವ ಮೂಲಕ ತಮ್ಮ ಅನುಭವದ ಪುಟವನ್ನು ಪ್ರಾರಂಭಿಸಿದ ನಟಿ ಸಮೀರಾ ರೆಡ್ಡಿ,

ತಮ್ಮ ಮೊದಲ ಆಡಿಷನ್‌ನಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಮತ್ತು ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ತುಂಬಾ ಹೆದರುತ್ತಿದ್ದರು ಎಂಬ ಸಂಗತಿಯನ್ನು ಹಂಚಿಕೊಂಡಿದ್ದು,

ಸಮೀರಾ ರೆಡ್ಡಿ ಅವರು ಮಹೇಶ್ ಬಾಬು ಚಿತ್ರದ ಮೊದಲ ಆಡಿಷನ್ ನಲ್ಲಿ ಎದುರಾದ ಅನುಭವವನ್ನು ವಿವರಿಸಿದ್ದಾರೆ.

ನನ್ನ ಮೊದಲ ಪ್ರಯತ್ನ ನಾನು ನಿರೀಕ್ಷಿಸಿದ ರೀತಿಯಲ್ಲಿ ಇರಲಿಲ್ಲ. ಪಂಕಜ್ ಉದಾಸ್(Pankaj Udas) ಅವರ ಮ್ಯೂಸಿಕ್ ವೀಡಿಯೋದೊಂದಿಗೆ ಪರಿಚಯವಾಗುವ ಮೊದಲು ಎರಡು ವರ್ಷಗಳ ಕಾಲ ನಾನು ಡೆಸ್ಕ್ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದೆ,

ಆಡಿಷನ್(Audition) ನಂತರ ನಾನು ಎಷ್ಟು ಗಾಬರಿಯಾಗಿದ್ದೆ ಎಂದರೆ ಅದನ್ನು ಹೇಳಲು ಕಷ್ಟಸಾಧ್ಯ. ನನ್ನ ಮೊದಲ ಆಡಿಷನ್ 1998 ರಲ್ಲಿ ನಡೆಯಿತು.

ಈ ಒಂದು ಆಡಿಷನ್ ಪ್ರಿನ್ಸ್‌ ಮಹೇಶ್‌ ಬಾಬು ಅವರೊಂದಿಗಿನ ಹೊಸ ಸಿನಿಮಕ್ಕಾಗಿ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ಸುಮ್‌ ಸುಮ್ನೆ ನಿಮ್ಮುಂದೆ ಬಂದು ಕೂರಲು ನಮಗೇನು ನಾಯಿ ಕಚ್ಚಿದ್ದೀಯಾ? : ನಟ ದರ್ಶನ್‌

ನನಗೆ ವಿಪರೀತ ಭಯ ಕಾಡುತ್ತಿತ್ತು. ನಾನು ಇದನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಇದೇ ಬೇಸರದಲ್ಲಿ ಅಳುತ್ತ ಮನೆಗೆ ಹಿಂದಿರುಗಿದೆ.

ಆ ಬಳಿಕ ನಾನು ಓಮೆಗಾ ವಾಚ್(Omega watch) ಕಂಪನಿಯೊಂದಿಗೆ 2 ವರ್ಷಗಳ ಕಾಲ ಡೆಸ್ಕ್ ಕೆಲಸವನ್ನು ಮಾಡಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ.

2002 ರಲ್ಲಿ ಮೈನೆ ದಿಲ್ ತುಜ್ಕೋ ದಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಮೀರಾ,

2013 ರಲ್ಲಿ ಕನ್ನಡ ಭಾಷೆಯಲ್ಲಿ ವರದನಾಯಕ(Varada Nayaka) ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.

ತದನಂತರ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ ಅವರು, 2014 ರಲ್ಲಿ ಉದ್ಯಮಿ ಅಕ್ಷಯ್ ವರ್ಡೆ ಅವರನ್ನು ವಿವಾಹವಾದರು. ಈ ದಂಪತಿಗೆ ಹ್ಯಾನ್ಸ್ ಮತ್ತು ನೈರಾ ಎಂಬ ಇಬ್ಬರು ಮಕ್ಕಳಿದ್ದಾರೆ.

2019 ರಲ್ಲಿ, ಸಮೀರಾ ಅವರು ತಮ್ಮ ಮಗ ಹ್ಯಾನ್ಸ್ ಹುಟ್ಟಿದ ಸಮಯದಲ್ಲಿ 100 ಕೆಜಿ ದಾಟಿದಾಗ ಅದು

ತನ್ನ ಆತ್ಮವಿಶ್ವಾಸವನ್ನು ಹೇಗೆ ಕಸಿಯಿತು ಮತ್ತು ಮನೆಯಿಂದ ಹೊರಗೆ ಬರಲು ಎಷ್ಟು ತೊಂದರೆ ಕೊಟ್ಟಿತ್ತು ಎಂಬುದರ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.

ನಾನು ಮೇ 2015 ರಲ್ಲಿ 102 ಕೆಜಿ ಇದ್ದೆ, ಆಗ ನನ್ನ ತಲೆಯ ತುಂಬ ಭಯದ ಭೀತಿಯೇ ತುಂಬಿತ್ತು. ನನ್ನ ಆತ್ಮವಿಶ್ವಾಸ ಛಿದ್ರವಾಗಿತ್ತು.

ಒಂದು ವರ್ಷದ ನಂತರ ನಾನು ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ನಾನು ಹೊರಬರಲು ತುಂಬಾ ಹೆದರುತ್ತಿದ್ದೆ.

ಇಷ್ಟು ವರ್ಷಗಳ ಕಾಲ ಗ್ಲಾಮ್ ಮತ್ತು ಫಿಟ್ ಆಗಿ ತೆರೆಮೇಲೆ ಬಂದ ನಂತರ ಜಗತ್ತು ನಿರ್ಣಯಿಸುವ ಶಕ್ತಿ ಇಲ್ಲದ ಕಾರಣ ಕೆಲ ಕಾಲ ನಾನು ಕಣ್ಮರೆಯಾದೆ.


ಯೋಗದ(Yoga) ಸಹಾಯದಿಂದ ನಾನು ನನ್ನ ತೂಕ ಮತ್ತು ಆತ್ಮವಿಶ್ವಾಸವನ್ನು ಇಳಿಸಿಕೊಳ್ಳಲು ಎರಡು ವರ್ಷ ತೆಗೆದುಕೊಂಡೆ. ನಾವು ನಮ್ಮನ್ನು ಗಟ್ಟಿಯಾಗಿಸಿಕೊಳ್ಳಬೇಕು. ಆಗ ಮಾತ್ರ ಆ ಭಯದ ಹಳಿಯಿಂದ ಹೊರಬರಲು ಸಾಧ್ಯ!

ನಿಮ್ಮನ್ನು ಬದಲಾಯಿಸಿಕೊಳ್ಳುವ ಸಾಮರ್ಥ್ಯ ನಿಮ್ಮೊಳಗಿದೆ ಧೈರ್ಯವಾಗಿರಿ. ನೀವು ಬಯಸಿದರೆ ನೀವು ಏನು ಬೇಕಾದರೂ ಸಾಧಿಸಬಹುದು ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುವ ಮಧ್ಯೆ ಈ ಸಂಗತಿಯನ್ನು ಕೂಡ ಹೇಳಿದ್ದಾರೆ.

Exit mobile version