Bengaluru : ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ (Santro Ravi BJP worker) ಹೆಸರು ಇದೀಗ ಭಾರಿ ಚರ್ಚೆಯಾಗುತ್ತಿದ್ದು, ದಿನೇ ದಿನೇ ಒಂದೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ.
`ತಾನೊಬ್ಬ ಬಿಜೆಪಿ ಕಾರ್ಯಕರ್ತ’ ಎಂದು ಸ್ಯಾಂಟ್ರೋ ರವಿ ನೀಡಿರುವ ಹೇಳಿಕೆ ಈಗ ರಾಜಕೀಯ ನಾಯಕರ ವಾಗ್ಬಾಳಿಗೆ ವಾಗ್ಬಾಣವಾಗುತ್ತಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ,
ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಸ್ಯಾಂಟ್ರೋ ರವಿಯ ಹೇಳಿಕೆಯನ್ನು ಎತ್ತಿಹಿಡಿದು ರಾಜ್ಯ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ(BJP) ವಿರುದ್ಧ ಸರಣಿ ಆರೋಪ ಮಾಡಿದ್ದು, ಬಿಜೆಪಿ ನಾಯಕರ ಜೊತೆಗಿನ ಸಾಮೀಪ್ಯಕ್ಕಾಗಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಂತದಲ್ಲಿರುವ ಮಾನವ ಕಳ್ಳಸಾಗಣೆಯ ದೊರೆ ಸ್ಯಾಂಟ್ರೋ ರವಿ ಮುಚ್ಚಳಿಕೆ ಪತ್ರ ಬರೆದಿದ್ದಾರೆ.
ಈ ಹಿಂದೆ ಜಗದೀಶ್ ಎಂಬ ವ್ಯಕ್ತಿ ಸ್ಯಾಂಟ್ರೋ ರವಿಯ ವಿರುದ್ಧ ರಾಜರಾಜೇಶ್ವರಿನಗರ (Raja rajeshwari nagar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬೆಂಗಳೂರು ವರ್ಗಾವಣೆ ವಂಚನೆಗೆ ಪ್ರತಿಯಾಗಿ ಸ್ಯಾಂಟ್ರೋ ರವಿ ಪೊಲೀಸರಿಗೆ ಮುಚ್ಚಳಿಕೆ ಪತ್ರ ಬರೆದು ಅದರಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಸ್ಥಳೀಯ ಸುದ್ದಿಗಾರರ ಬಳಿ ಆರೋಪಿಸಿದ್ದಾರೆ.
ಇದನ್ನೂ ಓದಿ: https://vijayatimes.com/does-modi-have-morals/
ತಾನು ವರ್ಗಾವಣೆ ಮಾಡಿರುವ ಪೊಲೀಸ್ ಅಧಿಕಾರಿಗಳ ಹೆಸರನ್ನು ಮುಚ್ಚಳಿಕೆ ಪತ್ರದಲ್ಲಿಯೇ ಉಲ್ಲೇಖಿಸಿದ್ದಾರೆ. ಈ ಪತ್ರವನ್ನು ಕುಮಾರಸ್ವಾಮಿ ಅವರೇ ಓದಿ ತಿಳಿಸಿದ್ದು,
ಈ ಪತ್ರ ಏನನ್ನು ಸೂಚಿಸುತ್ತದೆ ಅಂದರೇ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಹಾಜರಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
“ನಾನು ಮೂರ್ನಾಲ್ಕು ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನಮ್ಮ ಪಕ್ಷದ ಶಾಸಕರು ಮತ್ತು ಸಚಿವರೊಂದಿಗೆ (Santro Ravi BJP worker) ನನಗೆ ಒಡನಾಟವಿದೆ.
ಹಾಗಾಗಿ ನಾನು ಅನೇಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದೇನೆ” ಎಂದು ಮುಚ್ಚಳಿಕೆ ಪತ್ರದಲ್ಲಿ ಸ್ಯಾಂಟ್ರೋ ರವಿ ಉಲ್ಲೇಖಿಸಿರುವುದನ್ನು ಹೆಚ್.ಡಿ ಕುಮಾರಸ್ವಾಮಿ ಅವರು ಓದಿ ಬಹಿರಂಗಪಡಿಸಿದ್ದಾರೆ.
ಇನ್ನು ಆಡಳಿತ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸ್ಯಾಂಟ್ರೋ ರವಿ, ಸೈಲೆಂಟ್ ಸುನೀಲ್, ಫೈಟರ್ ರವಿ ಅವರಂತಹವರ ಹೆಗಲ ಮೇಲೆ ಪವಿತ್ರ ಕೇಸರಿ ಬಟ್ಟೆಯನ್ನು ಹಾಕಿಕೊಂಡು ಬಿಜೆಪಿಯವರು ಕೇಸರಿ ಬಣ್ಣದ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ!
ಸ್ಯಾಂಟ್ರೋ ರವಿ ಅಲಿಯಾಸ್ ಕೆ.ಎಸ್ ಮಂಜುನಾಥ್ ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಕಾಂಗ್ರೆಸ್ (Congress) ಪಕ್ಷ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: https://vijayatimes.com/anganwadi-workers-burst-again/
ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಹಾಗೂ ರಾಜ್ಯ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದು, ಬಿಜೆಪಿಯ ಎಲ್ಲಾ ಸಚಿವರು ಸ್ಯಾಂಟ್ರೋ ರವಿಯೊಂದಿಗೆ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯಲ್ಲಿ ನಿಕಟ ಸಂಬಂಧ ಹೊಂದಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಕೂಡ ಇವರ ದಂಧೆಯ ಫಲಾನುಭವಿಯೇ? ಬಿಜೆಪಿ ಸರ್ಕಾರವೇ? ಸರಕಾರ ಪಿಂಪ್‌ಗಳಿಂದ ನಿಯಂತ್ರಿಸಲ್ಪಟ್ಟಿದೆಯೇ? ಆಯೋಗದ ಸರ್ಕಾರಕ್ಕೆ ಇನ್ನೂ ಎಷ್ಟು ದಲ್ಲಾಳಿಗಳು ಇದ್ದಾರೆ?
ಸ್ಯಾಂಟ್ರೋ ರವಿ ನನಗೆ ಗೊತ್ತೇ ಇಲ್ಲ ಎಂದು ಹೇಳಿರುವ ಸಿಎಂ ಮಾತಿನಲ್ಲಿ ಸತ್ಯವಿದೆ! ಏಕೆಂದರೆ ಬಸವರಾಜ ಬೊಮ್ಮಾಯಿ ಅವರಿಗೆ ಆತ ಪರಿಚಯವಿರುವುದು “ಮಂಜುನಾಥ್” ಆಗಿ! ಸ್ಯಾಂಟ್ರೋ ರವಿಯನ್ನು ಪೊಲೀಸರು ಬೊಮ್ಮಾಯಿಯವರ ಮನೆಯಲ್ಲೇ ಹುಡುಕಿದರೇ ಸಿಗುವ ಸಾಧ್ಯತೆ ಇದೆ.
ಆತನನ್ನು ಹುಡುಕಲಾಗದಷ್ಟು ಪೊಲೀಸರು ಅಸಮರ್ಥರಾಗಿದ್ದಾರೆಯೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ (Araga jnanendra)? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.