SBI Jobs 2023 : ಭಾರತೀಯ ಸ್ಟೇಟ್ ಬ್ಯಾಂಕ್ 5280 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಇದೀಗ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು
ವಿಸ್ತರಣೆ ಮಾಡಿ, ಆದೇಶ ಹೊರಡಿಸಿದೆ. ಡಿಸೆಂಬರ್ 17ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪದವಿ (SBI Jobs 2023) ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ CBO ಹುದ್ದೆಗಳ ವಿವರ
ಸರ್ಕಲ್ ಬೇಸ್ಡ್ ಆಫೀಸರ್ ಒಟ್ಟು ಹುದ್ದೆಗಳ ಸಂಖ್ಯೆ : 5280
ಕರ್ನಾಟಕದಲ್ಲಿ ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳ ಸಂಖ್ಯೆ: 380.
ವಿದ್ಯಾರ್ಹತೆ : ಮಾನ್ಯತೆ ಹೊಂದಿರುವ ಯಾವುದೇ ಪದವಿ ಪಾಸ್ ಮಾಡಿರಬೇಕು.
ವಯೋಮಿತಿ : ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.
ವೇತನ : ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗೆ ಮಾಸಿಕ ರೂ.36000
ಆಯ್ಕೆ ವಿಧಾನ : ಪ್ರಿಲಿಮ್ಸ್ ಪರೀಕ್ಷೆ, ಮೇನ್ಸ್ ಪರೀಕ್ಷೆ, ಸಂದರ್ಶನ
ಅರ್ಜಿ ಶುಲ್ಕ :
GM / EWS / OBC ಅಭ್ಯರ್ಥಿಗಳಿಗೆ ರೂ.750.
SC, ST, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17-12-2023
ಇದನ್ನು ಓದಿ: ನಾನು ಸಚಿವನಾದರೂ ಲೋಕಸಭೆಗೆ ಹೋಗಲು ಸಾಧ್ಯವಾಗಿಲ್ಲ, ಅವರಿಗೆಲ್ಲ ಪಾಸ್ ಕೊಟ್ಟವರು ಯಾರು: ಜಮೀರ್ ಅಹ್ಮದ್ ಖಡಕ್ ಪ್ರಶ್ನೆ