New Delhi: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ರಾಷ್ಟ್ರ ರಾಜಕೀಯದಲ್ಲಿ ಚುನಾವಣಾ ಬಾಂಡ್ (Electoral Bond) ಮಿಂಚಿನ ಸಂಚಲನ ಸೃಷ್ಟಿಸಿದ್ದು, ಯಾವ ಯಾವ ಪಕ್ಷಗಳಿಗೆ ಎಷ್ಟೆಷ್ಟು ಕೋಟಿ ರೂಪಾಯಿ ದೇಣಿಗೆ ನೀಡಲಾಗಿದೆ ಅನ್ನೋ ಮಾಹಿತಿ ಹೊರ ಬೀಳುತ್ತಿದೆ. ಈ ಮಧ್ಯೆ ಸುಪ್ರೀಂಕೋರ್ಟ್, ಸಿಜೆಐ ನ್ಯಾಯಪೀಠ ಇಂದು SBI ಅಧ್ಯಕ್ಷರಿಗೆ ಮತ್ತೆ ಮಹತ್ವದ ಸೂಚನೆ ಹೊರಡಿಸಿದೆ.

ಯಾವುದೇ ಮಾಹಿತಿಯನ್ನು ಮುಚ್ಚಿಡದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ದೇಣಿಗೆದಾರರು ಯಾವ್ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಅನ್ನೋ ಯೂನಿಕ್ ಆಲ್ಫಾ ನ್ಯೂಮರಿಕ್ ನಂಬರ್ (A Unique Alpha Numeric Number) ಹಾಗೂ ಸೀರಿಯಲ್ ನಂಬರ್ ಸಹಿತ ಮಾಹಿತಿ ನೀಡಬೇಕು ಎನ್ನಲಾಗಿದ್ದು, ಚುನಾವಣಾ ಬಾಂಡ್ ವಿವರಗಳ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (D Y Chandrachud) ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತು.
ಸುಪ್ರೀಂಕೋರ್ಟ್, ಎಲೆಕ್ಟ್ರೋರಲ್ ಬಾಂಡ್ಗಳ ಎಲ್ಲಾ ಮಾಹಿತಿ ಬಹಿರಂಗ ಪಡಿಸುವಂತೆ ಮಾರ್ಚ್ (March) 21ರ ಡೆಡ್ಲೈನ್ ನೀಡಿದ್ದು, ಇದೇ ಗುರುವಾರ ಸಂಜೆ 5ಗಂಟೆಯ ಒಳಗೆ ಎಸ್ಬಿಐ ಅಧ್ಯಕ್ಷರು ತಾವು ಯಾವುದೇ ಮಾಹಿತಿಯನ್ನು ನೀಡದೇ ಮುಚ್ಚಿಟ್ಟಿಲ್ಲ. ತಮ್ಮ ಬಳಿ ಇರುವ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಿದ್ದೇವೆ ಎಂದು ಅಫಿಡವಿಟ್ (Affidavit) ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಈ ಸೂಚನೆಗೆ ಎಸ್ಬಿಐ ಸುಪ್ರೀಂಕೋರ್ಟ್ (Supreme Court) ಆದೇಶವನ್ನು ಪಾಲಿಸುವುದಾಗಿ ಹೇಳಿದೆ.

ಈಗಾಗಲೇ ಸುಪ್ರೀಂಕೋರ್ಟ್ ಹೊರಡಿಸಿದ್ದ ಆದೇಶದ ಹಿನ್ನೆಲೆಯಲ್ಲಿ ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು? ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ ಅನ್ನೋ ಮಾಹಿತಿ ಬಯಲಾಗುತ್ತಿದೆ. ಇದೀಗ ಯಾರಿಂದ ಯಾವ ಪಕ್ಷಕ್ಕೆ ದೇಣಿಗೆ ನೀಡಲಾಗಿದೆ ಅನ್ನೋ ಮಾಹಿತಿ ಹೊರಬೀಳಬೇಕಿದೆ. ಚುನಾವಣಾ ಬಾಂಡ್ನಲ್ಲಿರುವ ಯೂನಿಕ್ ಆಲ್ಫಾ ನ್ಯೂಮರಿಕ್ ನಂಬರ್ಗಳಲ್ಲಿ ಈ ಮಾಹಿತಿ ರಹಸ್ಯವಾಗಿದೆ. ಈ ಮಾಹಿತಿಯನ್ನು ಬಹಿರಂಗ ಪಡಿಸಲು ಸುಪ್ರೀಕೋರ್ಟ್ ಸೂಚನೆ ಮಾಡಿದ್ದು, ಲೋಕಸಭಾ ಚುನಾವಣೆಯ ಸಮಯದಲ್ಲಿ ಈ ಮಾಹಿತಿ ಬಹಳಷ್ಟು ಮಹತ್ವ ಪಡೆದುಕೊಳ್ಳಲಿದೆ.