ಹಲಾಲ್ ಉತ್ಪನ್ನಗಳ ಬ್ಯಾನ್: ಉತ್ತರಪ್ರದೇಶ ಸರ್ಕಾರಕ್ಕೆ ನೊಟೀಸ್‌ ಜಾರಿ ಮಾಡಿದ ಸುಪ್ರೀಂಕೋರ್ಟ್‌

New Delhi : ಉತ್ತರಪ್ರದೇಶ ಸರ್ಕಾರದಲ್ಲಿ(UP Government) ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ವಿತರಣೆ ನಿಷೇಧಿಸಿದ ಕುರಿತು ವಿವರಣೆ ಕೋರಿ ಸುಪ್ರೀಂಕೋರ್ಟ್‌(Supream Court) ನೊಟೀಸ್‌ ಜಾರಿಗೊಳಿಸಿದೆ.

ನವೆಂಬರ್ 18ರಂದು ಉತ್ತರಪ್ರದೇಶ ಸರ್ಕಾರ ಹಲಾಲ್-ಪ್ರಮಾಣೀಕೃತ ಉತ್ಪನ್ನಗಳ ಕುರಿತು ಆದೇಶಿಸಿತ್ತು. ಆದೇಶವು ವಿವಾದಕ್ಕೆ ಕಾರಣವಾಗಿತ್ತು. ರಾಜ್ಯಾದ್ಯಂತ ಮಾಲ್‌ಗಳ ಮೇಲೆ ಪೊಲೀಸರು, ಹಲಾಲ್ ಉತ್ಪನ್ನಗಳನ್ನು(Halal) ವಶಪಡಿಸಿಕೊಳ್ಳಲು ದಾಳಿ ನಡೆಸಿದ್ದರು. ಹಲಾಲ್‌ ಉತ್ಪನ್ನಗಳ ನಿಷೇಧವು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ.

ಇದು ಚಿಲ್ಲರೆ ವ್ಯಾಪಾರಿಗಳಿಗೆ ಗೊಂದಲವನ್ನು ಉಂಟುಮಾಡುವ ಮತ್ತು ಕಾನೂನುಬದ್ಧ ವ್ಯಾಪಾರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿತ್ತು. ನಾವು ಆರ್ಟಿಕಲ್ 32ರ ಅಡಿಯಲ್ಲಿ ಅದನ್ನು ಏಕೆ ಪರಿಗಣಿಸಬೇಕು? ಎಂದು ವಿಚಾರಣೆಯ ಆರಂಭದಲ್ಲಿ ನ್ಯಾಯಮೂರ್ತಿ ಗವಾಯಿ ಅವರು ಹಲಾಲ್ ಇಂಡಿಯಾವನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಿದ್ಧಾರ್ಥ್ ಅಗರ್ವಾಲ್ ಅವರಿಗೆ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲರು (Lawey) ಹಲಾಲ್ ನಿಷೇಧದಿಂದಾಗುವ ವ್ಯಾಪಾರ ಮತ್ತು ವಾಣಿಜ್ಯದ ಮೇಲೆ ಅದರ ಪ್ರಭಾವವನ್ನು ಉಲ್ಲೇಖಿಸಿದ್ದು, ಒಂದು ನಿರ್ದಿಷ್ಟ ಆದೇಶವನ್ನು ಉಚ್ಚ ನ್ಯಾಯಾಲಯವು ತಡೆಹಿಡಿದರೆ ಆ ತಡೆಯಾಜ್ಞೆಯು ದೇಶಾದ್ಯಂತ ಅನ್ವಯಿಸುತ್ತದೆ ಎಂದು ಕೋರ್ಟ್‌ ಹೇಳಿದೆ.

ಈ ತರಹದ ಅಧಿಸೂಚನೆಯನ್ನು ನೀಡಬಹುದೇ ಮತ್ತು ಎರಡನೆಯದಾಗಿ ವಾಣಿಜ್ಯ ಸಚಿವಾಲಯದ (Ministry of Commerce) ಅಡಿಯಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳ ಘಟಕಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬಹುದೇ ಎಂಬುದರ ಕುರಿತು ನಿಮ್ಮ ಗಮನವು ಅಗತ್ಯವಿದೆ ಎಂದು ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.

ಏನಿದು ಪ್ರಕರಣ: What is the case
ಉತ್ತರಪ್ರದೇಶ ಸರ್ಕಾರ ಹಲಾಲ್ ಟ್ಯಾಗ್ ಹೊಂದಿರುವ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನ.18ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ರಫ್ತಿಗಾಗಿ ತಯಾರಿಸಿದ ಉತ್ಪನ್ನಗಳು ಈ ನಿರ್ಬಂಧಗಳಿಗೆ ಒಳಪಟ್ಟಿರುವುದಿಲ್ಲ.

ಉತ್ತರಪ್ರದೇಶದೊಳಗೆ ಹಲಾಲ್ ಪ್ರಮಾಣೀಕೃತ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಖರೀದಿ ಮತ್ತು ಮಾರಾಟದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಅಧಿಕೃತ ಆದೇಶ ತಿಳಿಸಲಾಗಿತ್ತು.

ಭವ್ಯಶ್ರೀ ಆರ್ ಜೆ

Exit mobile version