ಪ್ರತಿಭಟಿಸುವ ಹಕ್ಕಿದೆ, ರಸ್ತೆ ತಡೆ ನಡೆಸುವ ಹಕ್ಕಿಲ್ಲ – ಸುಪ್ರೀಂ ಕೋರ್ಟ್

ನವದೆಹಲಿದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಸ್ತೆತಡೆ ನಡೆಸುವಂತಿಲ್ಲ. ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.ನ್ಯಾಯಮೂರ್ತಿ ಎಸ್ ಕೆ ಕೌಲ್ ನೇತೃತ್ವದ ನ್ಯಾಯಪೀಠವು ಸಾರ್ವಜನಿಕರಿಗೆ  ಪ್ರತಿಭಟಿಸುವ ಹಕ್ಕಿದೆ ಆದರೆ ಅವರು ಅದಕ್ಕೆ ಕೆಲವು ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹೇಳಿದೆ.

ರೈತರಿಗೆ ಪ್ರತಿಭಟಿಸುವ ಹಕ್ಕಿದೆ, ಆದರೆ ಅವರು ರಸ್ತೆಗಳನ್ನು ತಡೆ ನಡೆಸಿ ಜನರಿಗೆ ತೊಂದರೆ ಕೊಡುವಂತಿಲ್ಲ. ಯಾವುದೇ ರೀತಿಯಲ್ಲಿ ಆಂದೋಲನ ಮಾಡುವ ಹಕ್ಕನ್ನು ನೀವು ಹೊಂದಿರಬಹುದು, ಆದರೆ ರಸ್ತೆಗಳನ್ನು ಈ ರೀತಿ ನಿರ್ಬಂಧಿಸಬಾರದು. ಜನರಿಗೆ ರಸ್ತೆಗಳಲ್ಲಿ ಹೋಗಲು ಹಕ್ಕಿದೆ, ಆದರೆ ಅದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಪಿಟಿಐ ಉಚ್ಚ ನ್ಯಾಯಾಲಯವನ್ನು ಉಲ್ಲೇಖಿಸಿದೆ.

ಈ ಪ್ರಕರಣದ ವಿಚಾರಣೆಯನ್ನು, ಡಿಸೆಂಬರ್ 7 ರಂದು  ಮೂಂದೂಡಿದ್ದು  ಈ ಪ್ರಕರಣದಲ್ಲಿರುವ ರೈತ ಸಂಘಗಳು, ಈ ವಿಷಯದ ಬಗ್ಗೆ ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಪೀಠ ಹೇಳಿತು.ನೋಯ್ಡಾ ನಿವಾಸಿ ಮೊನಿಕ್ಕಾ ಅಗರ್‌ವಾಲ್ ಅವರು ಪಿಐಎಲ್ ಅನ್ನು ಸಲ್ಲಿಸಿದ್ದು, ಅವರು ರೈತರ ಪ್ರತಿಭಟನೆಗಳಿಂದಾಗಿ ರಸ್ತೆ ನಿರ್ಬಂಧದಿಂದಾಗಿ ದೈನಂದಿನ ಪ್ರಯಾಣದಲ್ಲಿ ವಿಳಂಬವಾಗುತ್ತಿದೆ ಎಂದು ಪಿಐಎಲ್‌ ಸಲ್ಲಿಸಿದ್ದರು

Exit mobile version