ಜಪಾನಿನ ಈ ಪ್ರಸಿದ್ಧ ಚಿತ್ರದ ಬಗ್ಗೆ ನಿಮಗೆ ಗೊತ್ತಿದೆಯೇ? ಇಲ್ಲಿದೆ ಮಾಹಿತಿ!

1945ರಲ್ಲಿ ನಡೆದ ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದ ಚಿತ್ರವಿದು.

ಜಪಾನಿ ಬಾಲಕನೊಬ್ಬ ತನ್ನ ತಮ್ಮನ ಶವವನ್ನು ಬೆನ್ನ ಮೇಲೆ ಹೊತ್ತುಕೊಂಡು ನಿಂತಿರುವ ಚಿತ್ರ. ಇದು ಸುಮ್ಮನೆ ನಿಂತ ಚಿತ್ರವಾಗಿದ್ದರೆ ಅಷ್ಟೊಂದು ಪ್ರಸಿದ್ಧಿ ಪಡೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಶವಗಳನ್ನು ಸುಡುವ ಚಿತಾಗಾರದ ಬಳಿ ತನ್ನ ತಮ್ಮನ ಶವದ ಸರದಿಗಾಗಿ ಈ ಬಾಲಕ ಸಾಲಿನಲ್ಲಿ ನಿಂತ ಚಿತ್ರವಿದು. ಈ ಕುರಿತು ಈ ಚಿತ್ರವನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕನನ್ನು ಸಂದರ್ಶಿಸಿ ಕೇಳಿದಾಗ ಆತ ನೀಡಿದ ಹೇಳಿಕೆಯ ಅನುಸಾರ,

ಆ ಸಂದರ್ಭದಲ್ಲಿ ಬಾಲಕ ತನ್ನ ಅಳುವನ್ನು ತಡೆಹಿಡಿಯಲು ತನ್ನ ತುಟಿಗಳನ್ನು ಕಚ್ಚಿಕೊಂಡಿದ್ದ, ಅದರಿಂದಾಗಿ ಅವನ ತುಟಿಯಿಂದ ರಕ್ತ ಜಿನುಗುತ್ತಿತ್ತು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿಯ ಕಾವಲುಗಾರ ಬಾಲಕನ್ನು ಕೇಳಿದನಂತೆ, ನಿನ್ನ ಬೆನ್ನ ಮೇಲಿನ ಭಾರವನ್ನು ನನಗೆ ಕೊಡು ಎಂದು. ಆದ್ರೆ, ಬಾಲಕ ಇಲ್ಲ ನಾನು ಕೊಡುವುದಿಲ್ಲ..ಅವನು ನನಗೆ ಭಾರವಿಲ್ಲ, ಅವನು ನನ್ನ ತಮ್ಮ ಎಂದು ಹೇಳಿದನಂತೆ.
ನಂತರ ತನ್ನ ಸರದಿ ಬಂದಾಗ ತಮ್ಮನ ಶವವನ್ನು ಕೊಟ್ಟು ಮರಳಿದನಂತೆ.

ಇಂದಿಗೂ ಜಪಾನ್ ನಲ್ಲಿ ಈ ಚಿತ್ರ ಸ್ಥೈರ್ಯದ ಸಂಕೇತವಾಗಿ ಬಳಸಲಾಗುತ್ತಿದೆ. ನೋವಿನ ಭಾರವನ್ನು ಹೊತ್ತು ತರುವಂತ ಚಿತ್ರ ಇದ್ದಾಗಿದ್ದು, ಇದೊಂದು ಸ್ಫೂರ್ತಿಯ ಚಿತ್ರ ಎಂದು ಹೇಳಲಾಗುತ್ತದೆ. ಅಂದ ಹಾಗೆ ಈ ಚಿತ್ರವನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕ ಅಮೆರಿಕನ್ ಛಾಯಾಗ್ರಾಹಕರಾದ ಜೋ ಓ ಡೋನೆಲ್ ಎಂದು ಹೇಳಲಾಗಿದೆ.

Exit mobile version