ನಿದ್ದೆಯ ರಹಸ್ಯ

ನಮ್ಮೆಲ್ಲ ನಿರುತ್ಸಾಹ ಗಳನ್ನು ದೂರ ಮಾಡಿ ನಮ್ಮನ್ನು ಮತ್ತಷ್ಟು ಉಲ್ಲಾಸಗೊಳಿಸುವ ಶಕ್ತಿ  ನಿದ್ದೆಗಿದೆ ಹಾಗಾಗಿ ನಿದ್ದೆಯು ಆರೋಗ್ಯಕರ ಬದುಕಿಗೆ ಬಹು ಮುಖ್ಯವೆನಿಸಿದೆ. ಮೊದಲೆಲ್ಲಾ ನಮ್ಮ ಪೂರ್ವಿಕರು ಹಗಲೆಲ್ಲಾ ದೇಹ ದಂಡಿಸಿ ಕೆಲಸ ಮಾಡಿ ರಾತ್ರಿ ನೆಮ್ಮದಿ ಯಲ್ಲಿ ನಿದ್ರೆ ಮಾಡಿ ಆರೋಗ್ಯಕರವಾಗಿದ್ದರು. ಆದರೆ ಈ ನವಯುಗದ ದಿನಗಳಲ್ಲಿ ಜೀವನ ಶೈಲಿ ಬದಲಾಗಿದೆ. ದಿನವಿಡಿ ಸಾಮಾಜಿಕ  ಜಾಲತಾಣಗಳಲ್ಲಿ, ಟಿವಿ ಮತ್ತು ಮೊಬೈಲ್‌ಗಳ ಮೂಲಕ ಮನರಂಜನೆಯಲ್ಲಿ ತೊಡಗಿಸಿ ಸಾಕಷ್ಟು ಕಾಲಹರಣ  ಮಾಡಿ ನಿದ್ರಾಹೀನರಾಗುವವರ ಸಂಖ್ಯೆ ಹೆಚ್ಚಾಗಿದೆ.

ನಿದ್ದೆಗೆ ಸೂಕ್ತ ಸಮಯ ಯಾವುದು  ?

 ಆರೋಗ್ಯ ತಜ್ಞರ ಅಧ್ಯಯನಗಳ ಪ್ರಕಾರ ಆರರಿಂದ ಏಳು ಗಂಟೆಗಳಷ್ಟು ಮಲಗಿದರೆ ಹೆಚ್ಚುಕಾಲ ಜೀವಿಸುತ್ತಾರೆ ಎಂದು ಹೇಳಲಾಗುತ್ತಿದೆ.  ಎಂಟು ಗಂಟೆಗಿಂತ ಹೆಚ್ಚು ಅಥವಾ ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡುವ  ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಕೂಡ ತಜ್ಞರು ಉಲ್ಲೇಖಿಸಿದ್ದಾರೆ.

 ಅಧ್ಯಯನಗಳು ಹೇಳಿದಂತೆ ಒಂದು ತಿಂಗಳ ಮಗುವಿಗೆ 21 ಗಂಟೆ, 6 ತಿಂಗಳ ಮಗುವಿಗೆ 18 ಗಂಟೆ, ಒಂದು ವರ್ಷದ ಮಗುವಿಗೆ 12 ಗಂಟೆ, ಹನ್ನೆರಡು ವರ್ಷ ಮೇಲ್ಪಟ್ಟವರಿಗೆ 9 ಗಂಟೆ, 16 ವರ್ಷ ಮೇಲ್ಪಟ್ಟವರಿಗೆ  8ಗಂಟೆ ಹಾಗೂ 50 ವರ್ಷ ಮೇಲ್ಪಟ್ಟವರಿಗೆ 6ರಿಂದ 8 ಗಂಟೆ ಕಾಲ ನಿದ್ರೆ ಅವಶ್ಯಕತೆ ಇದೆ ಎಂದು ಹೇಳಲಾಗಿದೆ.

ನಾವು ಸದಾಕಾಲ ಚಟುವಟಿಕೆ ಇಂದ ಇರಲು ನಿದ್ರೆಯು ಅತ್ಯಮೂಲ್ಯ, ಹಾಗಾಗಿ ನಿದ್ದೆಯ ಸೂಕ್ತ ಸಮಯವನ್ನು ಪಾಲಿಸೋಣ .

Exit mobile version