ಉಗ್ರ ಯಾಸಿನ್ ಮಲಿಕ್ ಪರ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬ್ಯಾಟಿಂಗ್!

ಕಾಶ್ಮೀರಿ(Kashmiri) ಪ್ರತ್ಯೇಕತವಾದಿ ಯಾಸಿನ್ ಮಲಿಕ್‍ಗೆ(Yasin Malik) ನ್ಯಾಯಾಲಯ ಜೀವಾವಧಿ(Death Sentence) ಶಿಕ್ಷೆ ನೀಡಿದೆ. ಈ ಕುರಿತು ಟ್ವೀಟ್(Tweet) ಮೂಲಕ ಪಾಕಿಸ್ತಾನದ(Pakistan) ಕ್ರಿಕೆಟಿಗ ಶಾಹಿದ್ ಅಫ್ರಿದಿ(Shaid Afridi) ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಭಯೋತ್ಪಾದನಾ(Terrorism) ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದ ಮೇಲೆ ಯಾಸಿನ್ ಮಲಿಕ್‍ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಶಾಹಿದ್ ಅಫ್ರಿದಿ, “ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ. ಕಾಶ್ಮೀರದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಭಾರತ ಮಾಡುತ್ತಿದೆ. ಮಾನವ ಹಕ್ಕುಗಳ ವಿರುದ್ದದ ವಿಮರ್ಶಾತ್ಮಕ ಧ್ವನಿಗಳನ್ನು ಮೌನಗೊಳಿಸಲು ಭಾರತ ನಡೆಸುವ ಪ್ರಯತ್ನಗಳು ಫಲ ನೀಡುವುದಿಲ್ಲ.

ಯಾಸಿನ್ ಮಲಿಕ್ ಮೇಲಿರುವ ಆರೋಪಗಳು ಕಾಶ್ಮೀರ ಸ್ವಾತಂತ್ರ್ಯ ಹೋರಾಟಕ್ಕೆ ಅಡ್ಡಿಯಾಗದಿರಲಿ. ನಮ್ಮ ಕಾಶ್ಮೀರಿ ನಾಯಕರ ವಿರುದ್ದ ಅನ್ಯಾಯ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ನಿಗಾ ಇಡುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸುತ್ತೇವೆ” ಎಂದು ಉಗ್ರ ಯಾಸಿನ್ ಮಲಿಕ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಕಾಶ್ಮೀರ ಪ್ರತ್ಯೇಕತವಾದಿ ಯಾಸಿನ್ ಮಲಿಕ್ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ತನ್ನ ವಿರುದ್ದ ದಾಖಲಾಗಿರುವ ಪ್ರಕರಣಗಳ ಸಂಬಂಧ ಯಾಸಿನ್ ಮಲಿಕ್ ಮೇ 10ರಂದು ನ್ಯಾಯಾಲಯದ ಮುಂದೆ ತಪ್ಪೋಪ್ಪಿಗೆ ನೀಡಿದ್ದನು. ಹೀಗಾಗಿ ಈತನಿಗೆ ಮರಣ ದಂಡನೆ ನೀಡಬೇಕೆಂದು ರಾಷ್ಟ್ರೀಯ ತನಿಖಾ ದಳ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಈತನಿಗೆ 10 ಲಕ್ಷ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ನೀಡಿದೆ.
ಇನ್ನು 2017ರಲ್ಲಿ ಯುಎಪಿಎ ಕಾಯ್ದೆಯಡಿ ಈತನನ್ನು ಎನ್‍ಐಎ ಬಂಧಿಸಿತ್ತು.

ಯುಎಪಿಎ ಕಾಯ್ದೆಯ ಸೆಕ್ಷನ್ 16 ( ಭಯೋತ್ಪಾದನ ಕೃತ್ಯ) ಸೆಕ್ಷನ್ 20 ( ಭಯೋತ್ಪಾದನ ಸಂಘಟನೆಯ ಸದಸ್ಯನಾಗಿರುವುದು) ಸೆಕ್ಷನ್ 17 ( ಭಯೋತ್ಪಾದನ ಚಟುವಟಿಕೆಗೆ ಹಣಕಾಸು ಸಂಗ್ರಹ) ಸೆಕ್ಷನ್ 18 ( ಭಯೋತ್ಪಾದನ ಕೃತ್ಯ ಎಸಗಲು ಸಂಚು) ಐಪಿಸಿ ಸೆಕ್ಷನ್ 20 ( ದೇಶದ್ರೋಹ) 120 ( ಅಪರಾಧ ಸಂಚು) ಪ್ರಕರಣಗಳನ್ನು ಈತನ ಮೇಲೆ ದಾಖಲಿಸಲಾಗಿತ್ತು.

Exit mobile version