ಶಾಲೆ-ಕಾಲೇಜ್ ಆರಂಭದ ಬಗ್ಗೆ ಸಚಿವರಿಂದ ಮಾಹಿತಿ

ಬೆಂಗಳೂರು, ಡಿ. 12: ಈ ಕೊರೊನಾ ಮಹಾಮಾರಿಯಿಂದ ಹಲವು ಕೆಲಸ ಕಾರ್ಯಗಳು ನಿಂತಿ ಹೋಗಿವೆ. ಅದರ ಜೊತೆ ಶಿಕ್ಷಣ ಸಂಸ್ಥೆಗಳು ಸಹ ಯಾವ ರೀತಿ ನಡೆಸಬೇಕೆಂದು ದಿಕ್ಕು ತೊಚದಂತೆ ಇದೆ.ಹಾಗೇ ಯಾವಾಗ ಶಾಲೆ,ಕಾಲೇಜುಗಳು ಆರಂಭವಾಗುತ್ತದೆ ಎಂದು ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿದೆ. ಯಾಕೆಂದರೆ ಶೈಕ್ಷಣಿಕ ಕಾಲಾವಧಿ ಸಮಯ ಮೀರಿ ಹೋಗುತ್ತಿರುವುದೇ ಮುಖ್ಯ ಕಾರಣವಾಗಿದೆ.

ಆದ್ದರಿಂದ ಶಾಲೆ ಆರಂಭದ ಬಗ್ಗೆ ತಿಂಗಳ ಅಂತ್ಯಕ್ಕೆ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಡಿಸೆಂಬರ್ ಅಂತ್ಯಕ್ಕೆ ವಿವಿಧ ಇಲಾಖೆಗಳ ಸಭೆ ನಡೆಯಲಿದೆ, ಈ ಸಭೆಯಲ್ಲಿ ಶಾಲೆ, ಕಾಲೇಜು ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಾ. ಕೆ. ಸುಧಾಕರ್ ರವರು ತಿಳಿಸಿದ್ದಾರೆ. ಇದರ ಜೊತೆ ಈ ತಿಂಗಳಿನ ಅಂತ್ಯದಲ್ಲಿ ಸೋಂಕಿತರ ಸಂಖ್ಯೆಗಳನ್ನು ಪರಿಶೀಲಿಸಿ ,ಹತ್ತನೇ ಮತ್ತು ಪಿ.ಯು.ಸಿ ತರಗತಿಗಳನ್ನು ಆರಂಭಿಸಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಆದ ಕಾರಣ ಯಾವುದೇ ಗೊಂದಲಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳು ಒಳಗಾಗಬಾರದು ಎಂದು ಸಚಿವರು ತಿಳಿಸಿದ್ದಾರೆ.

Exit mobile version