ಚೆನ್ನಪಟ್ಟಣದಲ್ಲಿ ಡಿಕೆಶಿ ವಿರುದ್ದವೇ ಬಂಡಾಯ ಸಾರಿದ ಭಾವ ಶರತ್‍ಚಂದ್ರ!

sharath chandra

ಚನ್ನಪಟ್ಟಣದಲ್ಲಿ(Chennapatna) ಕಾಂಗ್ರೆಸ್ ಅಧ್ಯಕ್ಷ(Congress President) ಡಿ.ಕೆ.ಶಿವಕುಮಾರ್(DK Shivkumar) ಅವರ ಭಾವ ಶರತ್‍ಚಂದ್ರ ಡಿಕೆಶಿ ವಿರುದ್ದವೇ ಬಹಿರಂಗವಾಗಿ ಬಂಡಾಯ ಸಾರಿದ್ದಾರೆ.


ಕೆಪಿಸಿಸಿ ಸದಸ್ಯರಾಗಿರುವ(KPCC Member) ಶರತ್‍ಚಂದ್ರ(Sharath Chandra) ಅವರು ಕಳೆದ ಅನೇಕ ವರ್ಷಗಳಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಚೆನ್ನಪಟ್ಟಣ ಕ್ಷೇತ್ರದಿಂದ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿಕೆ ಸಹೋದರರು ರಣತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಶರತ್‍ಚಂದ್ರ ಅವರು ಡಿಕೆ ಸಹೋದರರ ಮೇಲೆ ಕಿಡಿಕಾರಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಹೀನಾಯ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಕಳೆದ ಐದು ವರ್ಷಗಳಿಂದ ಸಂಘಿಟಿಸಿದ್ದೇನೆ. ಈಗ ದಿಢೀರನೇ ಯಾರನ್ನೋ ಅಭ್ಯರ್ಥಿ ಎಂದು ಕರೆದುಕೊಂಡು ಬಂದಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕೆ ನನ್ನ ಸಂಬಂಧಿಗಳೇ ಮುಳುವಾಗಿದ್ದಾರೆ. ಇನ್ನು ನನಗೆ ಟಿಕೆಟ್ ಕೇಳಿದರೆ “ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ” ಎನ್ನುತ್ತಾರೆ. ಆದರೆ ಅವರ ಸಂಬಂಧಿ ಎಸ್.ರವಿಯನ್ನು ಎಂಎಲ್‍ಸಿ ಮಾಡಿದ್ದಾರೆ. ಅದೇ ರೀತಿ ಇನ್ನೊರ್ವ ಸಂಬಂಧಿ ಡಾ. ರಂಗನಾಥ್‍ಗೆ ಕಳೆದ ಚುನಾವಣೆಯಲ್ಲಿ ಕುಣಿಗಲ್‍ನಿಂದ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದಿದ್ದಾರೆ.

ಆದರೆ ಈಗ ನನಗೆ ಟಿಕೆಟ್ ನೀಡಲು ಕುಟುಂಬ ಅಡ್ಡಿ ಬರುತ್ತದೆಯೇ ಎಂದು ಡಿಕೆ ಸಹೋದರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. 2013ರಲ್ಲಿ ಚೆನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಠೇವಣಿ ಇರಲಿಲ್ಲ. ಆದರೆ 2018ರ ನಂತರ ನಾನು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದೇನೆ. 2018ರಲ್ಲೇ ನಾನು ಅಭ್ಯರ್ಥಿಯಾಗಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ಎಚ್.ಎಂ.ರೇವಣ್ಣಗೆ ಟಿಕೆಟ್ ನೀಡಲಾಯಿತು. ಆದರೆ ಈ ಬಾರಿ ನಾನು ಹಿಂದೆ ಸರಿಯುವುದಿಲ್ಲ. ನಾನು ಸನ್ಯಾಸಿಯಲ್ಲ. ನನ್ನ ಕುಟುಂಬಕ್ಕೂ ರಾಜಕೀಯ ಹಿನ್ನಲೆಯಿದೆ.

ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ಶತಸಿದ್ದ. ಕಾಂಗ್ರೆಸ್ ಟಿಕೆಟ್ ಸಿಗದಿದ್ರೆ, ಪಕ್ಷೇತರ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

Exit mobile version