ಚೇತರಿಕೆ ಕಂಡ ಷೇರು ಮಾರುಕಟ್ಟೆ

share market

ರಷ್ಯಾ ಮತ್ತು ಉಕ್ರೇನ್‌ ನಡುವುನ ಯುದ್ದ ಭೀತಿ ಹಿನ್ನಲೆಯಲ್ಲಿ ನಿನ್ನೆ ಷೇರು ಮಾರುಕಟ್ಟೆಯಲ್ಲಿ ಏಕಾಏಕಿ ಷೇರುಗಳ ಮೌಲ್ಯ ಕುಸಿತಕಂಡಿತ್ತು. ಆದರೆ ಇಂದು ಷೇರು ಮಾರುಕಟ್ಟೆ ಕೊಂಚ ಸುಧಾರಿಸಿಕೊಂಡು 1600 ಅಂಕಗಳ ಹೆಚ್ಚುವರಿ ಪಡೆದುಕೊಂಡಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭಿಸಿದ ಬಳಿಕ  ಪಿಎಸ್‌ಯು ಬ್ಯಾಂಕ್‌ಗಳು, ಲೋಹಗಳು ಮತ್ತು ರಿಯಾಲ್ಟಿ ವಲಯದ ಷೇರುಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 1,631 ಅಂಕ ಮೇಲೇರಿದ್ದು 55,601.03 ಮಟ್ಟದಲ್ಲಿದೆ. ಇಂದಿನ ವಹಿವಾಟಿನಲ್ಲಿ ಗರಿಷ್ಠ ಗಳಿಕೆ ದಾಖಲಿಸಿದ ಷೇರುಗಳೆಂದರೆ ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಮತ್ತು ಟಿಸಿಎಸ್. ಬಿಎಸ್‌ಇ ಮಿಡ್‌ಕ್ಯಾಪ್ 938 ಅಂಕ ಏರಿಕೆ ಕಂಡು 23,194.93 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ, ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ 1,102 ಅಂಕ ಏರಿಕೆ ಕಂಡು 26,493.53 ಮಟ್ಟದಲ್ಲಿ ನಿಂತಿದೆ

 ನಿಫ್ಟಿ 50 ಸೂಚ್ಯಂಕ ಕೂಡ 486 ಅಂಕಗಳ ಏರಿಕೆ ಕಂಡು 17,734.80 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಬ್ಯಾಂಕ್ 1,391 ಅಂಕ ಜಿಗಿತ ಕಂಡಿದ್ದು 36,619.45 ಮಟ್ಟದಲ್ಲಿ ಮತ್ತು ನಿಫ್ಟಿ ಮಿಡ್‌ಕ್ಯಾಪ್ 310 ಅಂಕ ಏರಿಕೆ ಕಂಡು 6,970.30 ಮಟ್ಟದಲ್ಲಿ ವಹಿವಾಟು ಮುಂದುವರಿಸಿವೆ. ನಿಫ್ಟಿ 50 ಸೂಚ್ಯಂಕದಲ್ಲಿ ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್ ಮತ್ತು ಇಂಡಸ್‌ಇಂಡ್‌ ಬ್ಯಾಂಕ್ ಷೇರುಗಳು ತಲಾ ಶೇ. 5ಕ್ಕಿಂತ ಹೆಚ್ಚು ಲಾಭ ಗಳಿಸಿದ್ದು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಮತ್ತೊಂದೆಡೆ, ಬ್ರಿಟಾನಿಯಾ ಮತ್ತು ನೆಸ್ಲೆ ಇಂಡಿಯಾ ಷೇರುಗಳು ಇಂದು ತಲಾ ಶೇ. 0.10ಕ್ಕಿಂತ ಹೆಚ್ಚು ಕುಸಿತ ಕಂಡಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು

ಟಾಟಾ ಮೋಟಾರ್ಸ್ ಶೇ 7.96

ಅದಾನಿ ಪೋರ್ಟ್ಸ್ ಶೇ 5.96

ಟಾಟಾ ಸ್ಟೀಲ್ ಶೇ 5.39

ಇಂಡಸ್​ಇಂಡ್ ಬ್ಯಾಂಕ್ ಶೇ 5.12

ಕೋಲ್ ಇಂಡಿಯಾ ಶೇ 4.97

Exit mobile version