ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ!

sharemarket

ಮುಂಬಯಿ: ವಾರದ ಮೊದಲ ದಿನವೇ ಮುಂಬೈನ ಷೇರುಪೇಟೆ ಸೂಚ್ಯಂಕದಲ್ಲಿ ಭಾರೀ ಕುಸಿತ ಕಂಡಿದ್ದು, ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್‌ ಷೇರುಗಳ ಮಾರಾಟದಲ್ಲಿ ಕುಸಿತ ಕಂಡ ಪರಿಣಾಮ ಸೋಮವಾರ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1024 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಎಚ್ ಡಿಎಫ್ ಸಿ ಬ್ಯಾಂಕ್, ಬಜಾಜ್ ಫೈನಾನ್ಸ್ ಎಲ್ ಆ್ಯಂಡ್ ಟಿ, ಎಚ್ ಡಿಎಫ್ , ಬಜಾಜ್ ಫಿನ್ ಸರ್ವ್ ಮತ್ತು ಕೋಟಕ್ ಬ್ಯಾಂಕ್ ಷೇರುಗಳು ಕುಸಿತ ಕಂಡಿದೆ. ಮತ್ತೊಂದೆಡೆ ಪವರ್ ಗ್ರಿಡ್, ಎನ್ ಟಿಪಿಸಿ, ಟಾಟಾ ಸ್ಟೀಲ್, ಎಸ್ ಬಿಐ ಮತ್ತು ಆಲ್ಫಾಟಿಕ್ ಸಿಮೆಂಟ್ ಷೇರುಗಳು ಲಾಭಗಳಿಸಿದೆ.


ಟೋಕಿಯೋ ಮತ್ತು ಸಿಯೋಲ್ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಕುಸಿತ ಕಂಡಿದ್ದು, ಹಾಂಗ್ ಕಾಂಗ್ ಮತ್ತು ಶಾಂ ಷೇರುಪೇಟೆ ಸೆನ್ಸೆಕ್ಸ್ ಏರಿಕೆಯಲ್ಲಿರುವುದಾಗಿ ವರದಿ ತಿಳಿಸಿದೆ. ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಮಧ್ಯಾಹ್ನ 1,300ಕ್ಕೂ ಅಧಿಕ ಅಂಕಗಳಷ್ಟು ಇಳಿಕೆ ಕಂಡಿತ್ತು. ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,023,63 ಅಂಕಗಳಷ್ಟು ಇಳಿಕೆಯಾಗಿದ್ದು, 57,621.19 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 302,70 ಅಂಕ ಕುಸಿತವಾಗಿದ್ದು, 17,213,60 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.

Exit mobile version