ಕೊಂಚ ಏರಿಕೆ ಕಂಡ ಷೇರು ಮಾರುಕಟ್ಟೆ!

sensex

ಕಳೆದ ಕೆಲವು ದಿನಗಳಿಂದ ಷೇರು ಪೇಟೆಯಲ್ಲಿ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಇಂದು 1700 ಅಂಕಗಳಷ್ಟು ಏರಿಕೆ ಕಂಡು ತನ್ನ ವಹಿವಾಟು ಪೂರ್ಣಗೊಳಿಸಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ ಎಂಬ ಭೀತಿಯಲ್ಲಿ ಮಹಾಪತನ ಕಂಡಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಮಂಗಳವಾರ ಬರೋಬ್ಬರಿ 1,700 ಅಂಕಗಳಷ್ಟು ಭರ್ಜರಿ ಜಿಗಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.


ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 315.60 ಅಂಕ ಏರಿಕೆ ಕಂಡಿದ್ದು, 56,721.44 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಅದೇ ರೀತಿ ಎನ್.ಎಸ್.ಇ ನಿಫ್ಟಿ ಕೂಡಾ 85.75 ಅಂಕಗಳಷ್ಟು ಏರಿಕೆಯೊಂದಿಗೆ 16,928.55 ಅಂಕಗಳಲ್ಲಿ ವಹಿವಾಟು ನಡೆಸಿತ್ತು
ಬಜಾಜ್ ಫೈನಾನ್ಸ್, ಎಸ್ ಬಿಐ, ಬಜಾಜ್ ಫಿನ್ ಸರ್ವ್, ಎಲ್ ಆ್ಯಂಡ್ ಟಿ, ಟೈಟಾನ್ ಷೇರುಗಳ ಮೌಲ್ಯ ಶೇ.5.13ರಷ್ಟು ಲಾಭಗಳಿಸಿದೆ. ಕಳೆದ ಹತ್ತು ತಿಂಗಳಲ್ಲಿ ಮೊದಲ ಬಾರಿಗೆ ಎಂಬಂತೆ ಸೋಮವಾರ 1,700ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿತ್ತು.


ಮುಂಬಯಿ ಷೇರುಪೇಟೆ ಸೆಕ್ಸ್ 1,736.21 ಅಂಕಗಳಷ್ಟು ಭಾರೀ ಏರಿಕೆಯೊಂದಿಗೆ, 58,142.05 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 509.65 ಅಂಕ ಏರಿಕೆಯಾಗಿದ್ದು, 17,35242 ಅಂಕಗಳ ಮಟ್ಟ ತಲುಪಿದೆ.

Exit mobile version