ಪುಲ್ವಾಮಾ ದಾಳಿ ಕುರಿತು ಮಲಿಕ್‌ ಗಂಭೀರ ಆರೋಪ ; ಮಾಧ್ಯಮಗಳ ನಿರ್ಲಕ್ಷದ ಕುರಿತು ಶಶಿ ತರೂರ್‍ ಆಕ್ರೋಶ

New Delhi: ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರಾಗಿದ್ದ ಸತ್ಯಪಾಲ ಮಲಿಕ್‌ ರವರು 2019ರ ಪುಲ್ವಾಮಾ (Pulwama) ಭಯೋತ್ಪಾದಕ ದಾಳಿ ಕುರಿತು ಸ್ಪೋಟಕ ಆರೋಪಗಳನ್ನು ಮಾಡಿದ್ದರು. ಆದರೆ ಈ ಆರೋಪಗಳ ಬಗ್ಗೆ ಭಾರತೀಯ ಮಾಧ್ಯಮಗಳ (Shashi Tharoor about Pulwama) ನಿರ್ಲಕ್ಷದ ಕುರಿತು ಕಾಂಗ್ರೆಸ್‌ ಸಂಸದ ಶಶಿ ತರೂರ್‍ (Shashi Tharoor) ದಿಗ್ಬ್ರಮೆಯನ್ನು ವ್ಯಕ್ತಪಡಿಸಿದರು.

Shashi Tharoor about Pulwama


ಯಾವುದೇ ಮಾಧ್ಯಮಗಳು ಇಂತಹ ಗಂಭೀರ ಸುದ್ದಿಯನ್ನು ಹೇಗೆ ನಿರ್ಲಕ್ಷಿಸಲು ಸಾಧ್ಯ? ವೈಫಲ್ಯಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಂತೆ ಮಾಧ್ಯಮಗಳು ಭಾರತ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅವರು ಮಾಧ್ಯಮಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಫೆಬ್ರವರಿ 2019 ರಲ್ಲಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ (CRPF) ಬೆಂಗಾವಲು ಪಡೆ ಮೇಲೆ ಪಾಕ್‌ ಬಾಂಬ್ ದಾಳಿ ನಡೆಸಿ 40 ಯೋಧರನ್ನು ಬಲಿತೆಗೆದುಕೊಂಡಿತ್ತು.

ಈ ಘಟನೆ ಅಕ್ಷರಶಃ ದೇಶವನ್ನೇ ಬೆಚ್ಚಿ ಬೀಳಿಸಿತ್ತು,ಪಾಕ್‌ ವಿರುದ್ದ ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು.ನಮ್ಮನ್ನು ಕಾಯುವ ಯೋಧರ ಕ್ರೂರ ಮರಣ ಪ್ರತಿ ಭಾರತೀಯನು ಮರೆಯುವುದೇ ಇಲ್ಲ.


ಮಲಿಕ್‌ರವರು ಇತ್ತೀಚೆಗೆ ಸುದ್ದಿ ಜಾಲತಾಣವಾದ ‘ದಿ ವೈರಲ್‌ಗೆ’(The Viral) ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿಯವರು ಪುಲ್ವಾಮಾ

ವಿಷಯವನ್ನು ಸಾರ್ವತ್ರಿಕ ಚುನಾವಣೆಗಾಗಿ ಬಳಸಿದ್ದಾರೆಯೇ ಎಂದು ಸಂದರ್ಶಕರು ಮಾಜಿ ರಾಜ್ಯಪಾಲರನ್ನು ಕೇಳಿದಾಗ,

ಸತ್ಯಪಾಲ್ ಮಲಿಕ್ (Satyapal Malik) ಮುಗುಳ್ನಕ್ಕು “ಹಾ ಯಾ ನಾ.. ಕುಚ್ ನಹೀ ಕರ್ ರಹಾ ಹೂ,” ಎಂದು ಉತ್ತರಿಸಿದರು.


ಸಿಆರ್‌ಪಿಎಫ್ (CRPF) ಬೆಂಗಾವಲು ಪಡೆ ತಮ್ಮ ಸದಸ್ಯರನ್ನು ಸಾಗಿಸಲು ವಿಮಾನ ಕೊಡಿ ವಿನಂತಿಸಿದ್ದರು. ಯಾಕೆಂದರೆ ಅಂತಹ ಒಂದು ದೊಡ್ಡ ಬೆಂಗಾವಲು ರಸ್ತೆಯ ಮೂಲಕ ವಿರಳವಾಗಿ ಪ್ರಯಾಣಿಸುತ್ತದೆ.

ನಂತರ ಅವರು ಗೃಹ ಸಚಿವಾಲಯವನ್ನು ವಿಚಾರಿಸಿದ್ದಾರೆ, ಅದರೆ ಅವರು ಕೊಡಲು ನಿರಾಕರಿಸಿದರು. ಅವರಿಗೆ ಕೇವಲ 5 ವಿಮಾನಗಳು ಬೇಕಾಗಿದ್ದವು, ಆದರೆ ಅವರಿಗೆ ಯಾವುದನ್ನೂ ಒದಗಿಸಲಾಗಿಲ್ಲ.


ಬೆಂಗಾವಲು ಪಡೆ ಸಂಚರಿಸುವ ಹೆದ್ದಾರಿಗೆ ಯಾವುದೇ ಸಂಪರ್ಕ ರಸ್ತೆಗಳನ್ನು ನಿರ್ಬಂಧಿಸಲಾಗಿಲ್ಲ. ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದ

ವಾಹನವು ಸ್ಫೋಟಕ್ಕೆ 10-12 ದಿನಗಳ ಮೊದಲು ಸುಮಾರು 300 ಕೆಜಿಯಷ್ಟು ಸ್ಫೋಟಕಗಳನ್ನು ಹೊತ್ತುಕೊಂಡು ಕಣ್ಣಿಗೆ ಕಾಣದಂತೆ ಹತ್ತಿರದ ಹಳ್ಳಿಗಳಲ್ಲಿ (Shashi Tharoor about Pulwama) ಸಂಚರಿಸುತ್ತಿತ್ತು ಎಂದು ಅವರು ಹೇಳಿದರು.

ಇಷ್ಟೊಂದು ಬೃಹತ್ ಪ್ರಮಾಣದ ಸ್ಫೋಟಕಗಳು ಬರಬಹುದಾದ ಏಕೈಕ ಸ್ಥಳ ಪಾಕಿಸ್ತಾನವಾಗಿದ್ದರೂ, ಈ ಭದ್ರತಾ ವೈಫಲ್ಯಗಳಿಂದ ಸಾವು ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.


“ಅದೇ ಸಂಜೆ ನಾನು ಪ್ರಧಾನಿಗೆ ಹೇಳಿದ್ದೆ. ಇದು ನಮ್ಮ ತಪ್ಪು. ನಾವು ವಿಮಾನವನ್ನು ನೀಡಿದ್ದರೆ ಹೀಗಾಗುತ್ತಿರಲಿಲ್ಲ.

ಅದಕ್ಕೆ “ತುಮ್ ಅಭಿ ಚುಪ್ ರಹೋ….’ ನಾನು ಇದನ್ನು ಈಗಾಗಲೇ ಒಂದೆರಡು ಚಾನಲ್‌ಗಳಿಗೆ (Channel) ಹೇಳಿದ್ದೇನೆ ಎಂದು ಅವರು ನನಗೆ ಹೇಳಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಮೌನವಾಗಿರುವಂತೆ ಕೇಳಿಕೊಂಡಿದ್ದಾರೆ ಎಂದು ಮಲಿಕ್ ಹೇಳಿದ್ದಾರೆ.

ಪುಲ್ವಾಮಾ (Pulwama) ದಾಳಿ ‘100 ಪ್ರತಿಶತ ಗುಪ್ತಚರ ವೈಫಲ್ಯ’ ,ಪುಲ್ವಾಮಾ ಹತ್ಯಾಕಾಂಡಕ್ಕೆ ಕೇಂದ್ರದ ಸ್ವಂತ ತಪ್ಪುಗಳೇ ಕಾರಣ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Exit mobile version