ಶೇಂಗಾ ಆರೋಗ್ಯವನ್ನು ವೃದ್ಧಿಸಬಲ್ಲದೇ?

ನಾವು ಅನೇಕ ಬಾರಿ ಅಡುಗೆಯಲ್ಲಿ ಶೇಂಗಾವನ್ನು ಉಪಯೋಗಿಸುತ್ತವೆ. ಶೇಂಗಾವು ರುಚಿಯಾಗಿದ್ದು, ಅನೇಕರು ಇಷ್ಟಪಡುವಂತಹ ಕಣಜವಾಗಿದೆ. ಆದರೆ ಅನೇಕರಿಗೆ ಇದರಲ್ಲಿ ಅನೇಕ ಆರೋಗ್ಯಕ್ಕೆ ಬೇಕಾದ ಅಂಶಗಳು ಅಡಗಿಕೊಂಡಿವೆ ಎನ್ನುವುದು ತಿಳಿದಿರುವುದೇ ಇಲ್ಲ. ಇಂದು ನಾವು ಶೇಂಗಾದಲ್ಲಿರುವ ಆರೋಗ್ಯಕರ ಗುಣಗಳನ್ನು ತಿಳಿದುಕೊಳ್ಳೋಣ.

ಶೇಂಗಾವನ್ನು ದಕ್ಷಿಣ ಕನಾಟಕದಲ್ಲಿ ನೆಲಕಡಲೆ ಎಂದು ಕರೆಯುತ್ತಾರೆ. ಇದು ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುವ ಕಣಜವಾಗಿದೆ. ಕೊಲೆಸ್ಟ್ರಾಲ್‌ನಿಂದ ಹೆಪ್ಪುಗಟ್ಟಿರುವ ರಕ್ತ ಸಂಚಾರವನ್ನು ಸರಾಗಗೊಳಿಸುತ್ತದೆ. ದೇಹವನ್ನು ಬೊಜ್ಜು ಮುಕ್ತಗೊಳಿಸುತ್ತದೆ. ಕಡಲೇ ಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್, ಮೆಗ್ನೇಷಿಯಂ, ಝಿಂಕ್‌ನಂತಹ ನಾರಿನಂಶವೂ ಸಾಕಷ್ಟಿದೆ. ಇದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಸಿಗುತ್ತವೆ. ವಯೋಸಹಜ ಕಾಯಿಲೆಗಳಾದ ಚರ್ಮ ಸುಕ್ಕುಗಟ್ಟುವುದನ್ನು ಇದು ತಡೆಯುತ್ತದೆ.

ಒಂದು ಮುಷ್ಟಿ ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಅದನ್ನು ತಿನ್ನುವುದರಿಂದ ಇದರ ಪೌಷ್ಟಿಕಾಂಶ  ದ್ವಿಗುಣಗೊಳ್ಳುತ್ತದೆ. ಇದನ್ನು ಉಪ್ಪು ಹಾಕಿ ಬೇಯಿಸಿ ಕೂಡಾ ತಿನ್ನುವುದರಿಂದ ದೇಹಕ್ಕೆ ಯಥೇಷ್ಟವಾಗಿ ಶಕ್ತಿ ಲಭಿಸುತ್ತದೆ ಹಾಗೂ ರಕ್ತ ಸಂಚಾರ ಸುಗಮಗೊಳ್ಳುತ್ತದೆ.  ಬೆಲ್ಲದ ಜೊತೆಯೂ ಇದನ್ನು ಸೇವಿಸಬಹುದು ರುಚಿಯಷ್ಟೇ ಅಲ್ಲ ಆರೋಗ್ಯಕ್ಕೂ ಉತ್ತಮ. ಚರ್ಮದ ಆರೋಗ್ಯಕ್ಕೂ ಇದು ಸಹಕಾರಿಯಾಗಿದೆ. ಜತೆಗೆ ಗಂಟುಗಳ ನೋವಿಗೂ ಪರಿಹಾರಕಾರಿಯಾಗಿದೆ. ಬಡವರ ಬಾದಾಮಿ ಎಂದೇ ಹೆಸರಾದ ಶೇಂಗಾದಿಂದ ಅನೇಕ ಸಮಸ್ಯೆಗಳಿಗೆ ಪರಿಹಾರವಿದೆ ಎನ್ನುವುದು ಈ ಮೂಲಕ ತಿಳಿದುಕೊಳ್ಳಬಹುದು.

Exit mobile version