ಶಿಕ್ಷಣ ಸಚಿವರಿಗೆ ಬೇಕಂತೆ 5 ಸಾವಿರ: ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕಿಡಿಗೇಡಿಗಳ ಡಿಮ್ಯಾಂಡ್

ಚಾಮರಾಜನಗರ: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆ ತೆರದು ಸುಲಭದಲ್ಲಿ ಹಣಗಳಿಸುವ ಕಿಡಿಗೇಡಿಗಳ ಕರಾಮತ್ತು ಹೊಸದೇನಲ್ಲಾ.

ವಿವಿಧ ಕ್ಷೇತ್ರದ ಹಲವು ವಿವಿಐಪಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ನಂತರ ಹಣಕ್ಕಾಗಿ ಬೇಡಿಕೆ ಇಡುವುದು ಇತ್ತೀಚೆಗೆ ಮಾಮೂಲಾಗಿಬಿಟ್ಟಿದೆ. ಇದೇ ಹಾದಿಯಲ್ಲಿ ಮತ್ತೊಂದು ‌ಹೆಜ್ಜೆ ಇರಿಸಿರುವ ಕಿಡಿಗೇಡಿಗಳು ಇದೀಗ ಶಿಕ್ಷಣ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದಿದ್ದಾರೆ. ಅಲ್ಲದೇ ಹಲವರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿ, ರಿಕ್ವೆಸ್ಟ್ ಸ್ವೀಕರಿಸಿದ ನಂತರ 5 ಸಾವಿರ ರೂ. ಹಣದ ಅವಶ್ಯಕತೆ ಇದೆ ಎಂದು ಬೇಡಿಕೆಯಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಆದರೆ, ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿರುವ ಸಚಿವರಿಗೆ ಈ ವಿಷಯ ಬೇಗನೇ ಗಮನಕ್ಕೆ ಬಂದಿದೆ. ಇದು ಗಮನಕ್ಕೆ ಬರುತಿದ್ದಂತೆ ಸಚಿವರ ಆಪ್ತ ಕಾರ್ಯದರ್ಶಿ ಸೈಬರ್ ಸೆಲ್​ನಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ. ಈ ಕುರಿತು ಆರೋಪಿಯ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.

Exit mobile version