ಅರ್ಧಕ್ಕೆ ನಿಲ್ಲಿಸಿದ ನಾಟಕ ; ಮುಸ್ಲಿಂ ಕಥಾ ಪ್ರಧಾನ ನಾಟಕಕ್ಕೆ ಸಂಘ ಪರಿವಾರ ಅಡ್ಡಿ, ಕಲಾವಿದರ ಖಂಡನೆ

Shimoga

ಮುಸ್ಲಿಂ ಪ್ರಧಾನ ನಾಟಕ(Drama) ಪ್ರದರ್ಶನಕ್ಕೆ ಸಂಘ-ಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿರುವ ಘಟನೆ ಶಿವಮೊಗ್ಗದ(Shimmoga drama has been stopped) ಆನವಟ್ಟಿಯಲ್ಲಿ ನಡೆದಿದೆ.

ಆನವಟ್ಟಿಯ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ “ಜೊತೆಗಿರುವನು ಚಂದಿರ” ನಾಟಕವೂ (Shimmoga drama has been stopped) ಮುಸ್ಲಿಂ ಪ್ರಧಾನ ಕಥೆಯನ್ನು ಹೊಂದಿದ್ದು, ಈ ನಾಟಕವನ್ನು ಪ್ರದರ್ಶನ ಮಾಡದಂತೆ ಬೆದರಿಕೆ ಹಾಕಲಾಗಿದೆ.

ಜೊಸೇಫ್‌ ಸ್ಟೀನ್‌ ಅವರ “ ಫಿಡ್ಲರ್‌ ಆನ್‌ದಿ ರೂಫ್”ಎಂಬ ಇಂಗ್ಲೀಷ್‌ ನಾಟಕವನ್ನು ಜಯಂತ್ ಕಾಯ್ಕಿಣಿ(Jayanth Kaykini) ಅವರು “ಜೊತೆಗಿರುವನು ಚಂದಿರ” ಎಂದು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

https://vijayatimes.com/utsav-plans-among-congress-leaders/

ಈ ನಾಟಕವನ್ನು ಶಿವಮೊಗ್ಗದ `ರಂಗ ಬೆಳಕುʼ ತಂಡದಿಂದ ಆನವಟ್ಟಿಯಲ್ಲಿ ಪ್ರದರ್ಶನ ನಡೆಯುತ್ತಿತ್ತು. ೭.೪೫ಕ್ಕೆ ನಾಟಕ ಪ್ರಾರಂಭವಾಗಿತ್ತು. ಈ ಮಧ್ಯೆ ೯.೩೦ ಸುಮಾರಿಗೆ ಕೆಲ ಯುವಕರು “ಭಾರತ ಮಾತಾಕೀ ಜೈ” ಎಂದು ಹೇಳುತ್ತಾ, ನಾಟಕ ನಿಲ್ಲಿಸುವಂತೆ ದಾಂಧಲೆ ಮಾಡಿದ್ದಾರೆ. ಪ್ರೇಕ್ಷಕರನ್ನು ಹೊರಗೆ ಕಳುಹಿಸಿ, ನಾಟಕವನ್ನು ಅರ್ಧಕ್ಕೆ ನಿಲ್ಲಿಸಿದರು ಎಂದು ಆಯೋಜಕರು ತಿಳಿಸಿದ್ದಾರೆ. 

ಈ ಕೃತ್ಯವನ್ನು ಖಂಡಿಸಿರುವ ಶಿವಮೊಗ್ಗ ಕಲಾವಿದರ ಸಂಘ ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ನೀಡಲು ಮುಂದಾಗಿದ್ದಾರೆ. ಅರ್ಧಕ್ಕೆ ನಿಲ್ಲಿಸಿರುವ ನಾಟಕವನ್ನು ಮರುಪ್ರದರ್ಶನ ಮಾಡಲು ಆಯೋಜಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನು ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು, ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಪರವಾಗಿರುವ ಸಾಹಿತ್ಯ,‌ ನಾಟಕ, ಕಲೆ ಮೊದಲಾದ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಕಂಡರೆ ಆರ್ ಎಸ್ ಎಸ್(RSS) ಮತ್ತು ಪರಿವಾರಕ್ಕೆ ಭಯ.

ಈ ದಾಳಿಗೂ ಇದೇ ಕಾರಣ. ಇಂತಹ ಅಡ್ಡಿ-ಆತಂಕಗಳನ್ನು ಎದುರಿಸುವ ಚೈತನ್ಯ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಇದೆ. ಶಿವಮೊಗ್ಗದ ಅನವಟ್ಟಿಯಲ್ಲಿ ಕನ್ನಡ ನಾಟಕ ‘ಜತೆಗಿರುವನು ಚಂದಿರ’ ಪ್ರದರ್ಶನಕ್ಕೆ ಆರ್ಎಸ್ಎಸ್ ಅಡ್ಡಿಪಡಿಸಿರುವುದು ಸಾಂಸ್ಕೃತಿಕ ಭಯೋತ್ಪಾದನೆಯಲ್ಲದೆ ಮತ್ತೇನಲ್ಲ.

ಈ ಗೂಂಡಾಗಿರಿಯಲ್ಲಿ ಪಾಲುದಾರರಾದ ಎಲ್ಲಾ ದುಷ್ಕರ್ಮಿಗಳನ್ನು ಸರ್ಕಾರ ಈ ಕೂಡಲೇ ಬಂಧಿಸಿ, ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Exit mobile version