ಬೈರಾಗಿ ಟೀಸರ್ ನನ್ನ ಪ್ರೀತಿಯ ತಮ್ಮನಿಗೆ ಅರ್ಪಿಸುತ್ತೇನೆ : ಡಾ. ಶಿವರಾಜ್‍ಕುಮಾರ್!

appu

ಕರುನಾಡ ಚಕ್ರವರ್ತಿ ನಟ(Actor) ಡಾ. ಶಿವರಾಜ್ ಕುಮಾರ್( Shivarajkumar) ಅವರು ತಾವು ಅಭಿನಯಿಸಿದ ಬೈರಾಗಿ(Bairaagi) ಚಿತ್ರದ ಟೀಸರ್ ಅನ್ನು ತಮ್ಮ ಸಹೋದರ(Brother) ಪವರ್ ಸ್ಟಾರ್(Powerstar) ಪುನೀತ್ ರಾಜ್‍ಕುಮಾರ್(PuneethRajkumar) ಅವರಿಗೆ ಅರ್ಪಿಸಿದ್ದಾರೆ. ಇದೇ ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನ ಮತ್ತು ಅದೇ ದಿನದಂದು ಪವರ್ ಸ್ಟಾರ್ ಅಪ್ಪು ಅವರು ಅಭಿನಯದ ಜೇಮ್ಸ್ ಸಿನಿಮಾ ರಾಜ್ಯ ಮಾತ್ರವಲ್ಲದೇ, ದೇಶ-ವಿದೇಶದ ಅನೇಕ ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಇದೇ ವಿಷಯವನ್ನು ಪ್ರಸ್ತಾಪ ಮಾಡಿದ ಶಿವಣ್ಣ, ಅಪ್ಪು ಎಲ್ಲೂ ಹೋಗಿಲ್ಲ, ನಮ್ಮ ಜೊತೆಯಲ್ಲೇ ಇದ್ದಾನೆ. ನಮ್ಮ ಜೊತೆ ಜೊತೆಗೆ ಅವನನ್ನು ಕರೆದುಕೊಂಡು ಹೋಗೊಣ. ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಡೆಯಾಗುತ್ತಿದೆ. ಅದೇ ದಿನ ಎಲ್ಲಾ ಚಿತ್ರಮಂದಿರದ ಸ್ಕ್ರೀನ್ ನಲ್ಲಿ ಬೈರಾಗಿ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಲಿದೆ. ಆ ಟೀಸರ್ ಅನ್ನು ನನ್ನ ತಮ್ಮನಿಗೆ ಅರ್ಪಿಸುತ್ತೇನೆ.

ನೀವೆಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಅಪ್ಪು ನಮ್ಮ ಜೊತೆಯಲ್ಲೇ ಇದ್ದಾನೆ, ನಮ್ಮ ಜೊತೆ ಜೊತೆಗೆ ಅಪ್ಪುನ ಕರೆದುಕೊಂಡು ಹೋಗೊಣ. ನಿಮ್ಮೆಲ್ಲರ ಪ್ರೀತಿ ಹೀಗೆ ಅವನ ಮೇಲಿರಲಿ ಎಂದು ಅಭಿಮಾನಿಗಳಿಗೆ ಶಿವರಾಜ್ ಕುಮಾರ್ ವೀಡಿಯೋ ಮೂಲಕ ಹೇಳಿದ್ದಾರೆ.

Exit mobile version