Virat Kohli : ಶತಕದ ಕೊನೆಯ 50 ರನ್ ಗಳಿಸುವಾಗ, ನಿಜವಾದ ವಿರಾಟ್ ಕೊಹ್ಲಿಯನ್ನು ನೋಡಿದ್ದೇನೆ : ಶೋಯೆಬ್ ಅಖ್ತರ್

INDIA

India : ಏಷ್ಯಾಕಪ್ನಲ್ಲಿ(Asia Cup 2022) ಅಫ್ಘಾನಿಸ್ತಾನ(Afghanisthan) ವಿರುದ್ಧದ ಪಂದ್ಯದಲ್ಲಿ ಶತಕದ ದ್ವಿತೀಯಾರ್ಧದಲ್ಲಿ ಅಂದರೆ ಕೊನೆಯ 50 ರನ್ಗಳಿಸುವಾಗ ತಾನು ನಿಜವಾದ ವಿರಾಟ್ ಕೊಹ್ಲಿಯನ್ನು(Virat Kohli) ನೋಡಿದ್ದೇನೆ,

ಎಂದು ಪಾಕಿಸ್ತಾನದ(Pakistan) ಮಾಜಿ ಕ್ರಿಕೆಟ್ ಆಟಗಾರ ಶೋಯೆಬ್ ಅಖ್ತರ್(Shoiab Akthar) ಹೇಳಿಕೊಂಡಿದ್ದಾರೆ.

Virat Kohli

ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್, “ಸ್ಟಾರ್ ಬ್ಯಾಟರ್ನ ಇನ್ನಿಂಗ್ಸ್ನ ಮೊದಲಾರ್ಧವು ನಿಜವಾದ ಅವನ ಆಟವಲ್ಲ, ಎರಡನೇ ಭಾಗದ ಸಮಯದಲ್ಲಿ ನಿಜವಾದ ವಿರಾಟ್ ಕೊಹ್ಲಿ ಹೊರಬಂದರು. ಇನ್ನು ವಿರಾಟ್ ಕೊಹ್ಲಿ 100 ಶತಕಗಳನ್ನು ಬಾರಿಸಬೇಕು.

ಇದನ್ನೂ ಓದಿ : https://vijayatimes.com/tejaswi-surya-slams-state-congress/

ವಿರಾಟ್ ಆ ಹೆಗ್ಗುರುತನ್ನು ತಲುಪುವುದನ್ನು ನೋಡಲು ನಾನು ಬಯಸುತ್ತೇನೆ. ಏಕೆಂದರೆ ಅವರು ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಎಂದು ಅಖ್ತರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಭಾರತೀಯ ಅಭಿಮಾನಿಗಳು ಅತಿರೇಕಕ್ಕೆ ಹೋಗಬಾರದು. ವಿರಾಟ್ ಕೊಹ್ಲಿ ತಂಡಕ್ಕೆ ಓಪನರ್ ಆಗುತ್ತಾರೆ ಎಂದು ಭಾವಿಸಬಾರದು.

Virat Kohli

ನಿನ್ನೆ ಕೊಹ್ಲಿ ಗಳಿಸಿದ ಮೊದಲ 50 ರನ್, ಅದು ನಿಜವಾದ ವಿರಾಟ್ ಕೊಹ್ಲಿ ಅಲ್ಲ. ಅವರು ತಮ್ಮ ಇನ್ನಿಂಗ್ಸ್ನ ಕೊನೆಯ 50 ರನ್ ಗಳಿಸಿದಾಗ ನಾನು ನಿಜವಾದ ವಿರಾಟ್ ಕೊಹ್ಲಿಯನ್ನು ನೋಡಿದೆ.

ಯಾವಾಗ ಅವರು ತಮ್ಮ ಶತಕವನ್ನು ಗಳಿಸಿದರು, ವಿರಾಟ್ ಕೊಹ್ಲಿ ಇಚ್ಛೆಯಂತೆ ಸ್ಕೋರ್ ಮಾಡುತ್ತಿದ್ದಾರೆ ಮತ್ತು ಅವರು ತಮ್ಮ ಫಾರ್ಮ್ ಅನ್ನು ಮರಳಿ ಪಡೆಯುತ್ತಿದ್ದಾರೆ.

https://youtu.be/KpXWVOS_Dhg

ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 122 ರನ್ ಸಿಡಿಸುವ ಮೂಲಕ ಭಾರತ ನಿಗದಿತ 20 ಓವರ್ಗಳಲ್ಲಿ 212 ರನ್ ಗಳಿಸಲು ನೆರವಾದರು.

ನಂತರ ಅಫ್ಘಾನಿಸ್ತಾನ ಇನ್ನಿಂಗ್ಸ್ ಅನ್ನು ಭುವನೇಶ್ವರ್ ಕುಮಾರ್ ಧ್ವಂಸಗೊಳಿಸಿ, ಭಾರತ 101 ರನ್ಗಳಿಂದ ಗೆಲ್ಲಲು ಸಹಾಯ ಮಾಡಿದರು.
Exit mobile version