Bengaluru : ಬೆಂಗಳೂರು(Bengaluru) ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ(Tejaswi Surya) ಅವರು ರಾಜ್ಯ ಕಾಂಗ್ರೆಸ್(Congress) ವಿರುದ್ದ ವಾಗ್ದಾಳಿ ನಡೆಸಿದ್ದು, ಬೆಂಗಳೂರಿನ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಆದರೆ ಇಡೀ ನಗರವೇ ಜಲಾವೃತವಾಗಿದೆ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಆ ಮೂಲಕ ಬೆಂಗಳೂರಿನ ಇಮೇಜ್ ಅನ್ನು ಕಾಂಗ್ರೆಸ್ ಹಾಳು ಮಾಡಿದೆ ಎಂದು ಆರೋಪಿಸಿದ್ದಾರೆ. ಈಗ ಜಲಾವೃತವಾಗಿರುವ ಹಲವು ಪ್ರದೇಶಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅನುಮತಿ ಪಡೆಯದೇ ಕೆರೆ ಒತ್ತುವರಿ ಮಾಡಲಾಗಿದೆ.
ಇದನ್ನೂ ಓದಿ : https://vijayatimes.com/lucky-man-kannada-cinema-review/
ಪ್ರತಿಪಕ್ಷಗಳು ತಮ್ಮ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ‘ಬ್ರಾಂಡ್ ಬೆಂಗಳೂರು’ ಮಾನಹಾನಿ ಮಾಡಲು ಪ್ರಯತ್ನಿಸುತ್ತಿವೆ. ನಗರದ ಕೆಲವು ಭಾಗಗಳಲ್ಲಿ ಮಾತ್ರ ಮುಳುಗಡೆಯಾಗಿದೆ. ಇನು ಬೆಳ್ಳಂದೂರಿನಲ್ಲಿನ(Bellandur) ಕೆರೆಗಳನ್ನು ಒತ್ತುವರಿ ಮಾಡಿದವರು ಯಾರು? ಇದಕ್ಕೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಂಸದ ತೇಜಸ್ವಿ ಸೂರ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್, ಟೆಂಪ್ಟ್ ಆಗಿ ದೋಸೆ ತಿನ್ನಲು ಹೋಗಿದ್ದ ಎಳೆ ಸಂಸದ ತೇಜಸ್ವಿ ಸೂರ್ಯ ಈಗ ದಿಢೀರನೆ ಹೇಳಿಕೆ ಕೊಡಲು ಪ್ರತ್ಯಕ್ಷರಾಗಿದ್ದಾರೆ. ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ ಷಡ್ಯಂತ್ರವಂತೆ.

ವರುಣದೇವನ ಷಡ್ಯಂತ್ರವೇ? ಮೇಘರಾಜನ ಷಡ್ಯಂತ್ರವೇ? ಅಥವಾ 40% ಕಮಿಷನ್ ಲೂಟಿಕೋರರ ಷಡ್ಯಂತ್ರವೇ? ಸಂಸದರು ಉತ್ತರಿಸುವರೆ? ಎಂದು ಪ್ರಶ್ನಿಸಿದೆ. ಇನ್ನು ಸೆಪ್ಟೆಂಬರ್ 5 ರಂದು ತೇಜಶ್ವಿ ಸೂರ್ಯ ಅವರು, ಪದ್ಮನಾಭನಗರದಲ್ಲಿ ಬೆಣ್ಣೆ ದೋಸೆ ತಿನ್ನುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಅವರು ಹಂಚಿಕೊಂಡು,
ಬೆಂಗಳೂರು ಪ್ರವಾಹದಿಂದ ಮುಳುಗುತ್ತಿದೆ. ಆದರೆ ನಮ್ಮ ಸಂಸದರು ಬೆಣ್ಣೆ ಮಸಾಲೆ ದೋಸೆ ತಿನ್ನುತ್ತಿದ್ದಾರೆ. ಉತ್ತಮ ಉಪಹಾರವನ್ನು ಆನಂದಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದರು. ಈ ವಿಡಿಯೋ(Video) ಸಾಮಾಜಿಕ ಜಾಲತಾಣದಲ್ಲಿ(Social Media) ಭಾರೀ ವೈರಲ್(Viral) ಆಗಿತ್ತು.