ಧೂಮಪಾನಿಗಳಿಗೆ ಶಾಕಿಂಗ್‌ ನ್ಯೂಸ್‌ ; ಬಿಡಿ ಸಿಗರೇಟ್‌ ಮಾರಾಟಕ್ಕೆ ಬೀಳಲಿದೆ ಬ್ರೇಕ್‌ !

New Delhi : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಕಾದಿದೆ. ದಿನೇ ದಿನೇ ಧೂಮಪಾನ ಸಂಬಂಧಿ ರೋಗಗಳು, ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಡಿ ಸಿಗರೇಟು ಮಾರಾಟಕ್ಕೆ ನಿಷೇಧ ಹೇರುವ ಚಿಂತನೆ ಕೇಂದ್ರ ಸರ್ಕಾರ(Shocking news for smokers) ಮಾಡುತ್ತಿದೆ.

ಈ ಕುರಿತು ಈಗಾಗಲೇ ಸಂಸದೀಯ ಸ್ಥಾಯಿ ಸಮಿತಿ (Standing Committee of Parliament) ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಒಂದು ನಿರ್ಧಾರ ಮಾಡಲಿದೆ.

ಧೂಮಪಾನ ಆರೋಗ್ಯಕ್ಕೆ ಹಾನಿಕರ(Smoking is Injurious to Health) ಎಂದು ಗೊತ್ತಿದ್ದರೂ ಕೂಡ ಜನ ಕ್ಯಾರೇ ಅನ್ನದೆ ತನ್ನ ಧೂಮಪಾನಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ.

ಇದರಿಂದ ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಹೃದಯಾಘಾತದಂತಹ ಅಪಾಯಕಾರಿ ರೋಗಗಳು ಹೆಚ್ಚುತ್ತಿವೆ.

ಅಲ್ಲದೆ ಧೂಮಪಾನದಿಂದ ಸುತ್ತಮುತ್ತಲು ವಾಸಿಸುವವರ ಆರೋಗ್ಯದ ಮೇಲೂ ಗಂಭೀರ ಪರಿಣಾಮವಾಗುತ್ತಿದೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಸಂಸದೀಯ ಸ್ಥಾಯಿ ಸಮಿತಿ ಬಿಡಿ ಸಿಗರೇಟ್ (Cigarette) ಮಾರಾಟವನ್ನು ನಿಷೇಧ ಮಾಡುವಂತೆ ಶಿಫಾರಸು ಮಾಡಿದೆ.

ಇದನ್ನೂ ಓದಿ : https://vijayatimes.com/congress-leader-pateria-arrested/

ಈಗಾಗ್ಲೇ ಸಂಸದೀಯ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರಕ್ಕೆ ತಂಬಾಕಿನ ಮೇಲಿನ ತೆರಿಗೆ ಹೆಚ್ಚಿಸುವಂತೆ ಪ್ರಸ್ತಾವನೆ ನೀಡಿದೆ. ಬಿಡಿ ಸಿಗರೇಟ್ ಮಾರಾಟದಿಂದಾಗಿ ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ಪರಿಣಾಮ ಬೀರುತ್ತಿದೆ.

ಹಾಗೆಯೇ ತಂಬಾಕು ಸಂಬಂಧಿತ ಉತ್ಪನ್ನಗಳ ಬಳಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡುವ ಉದ್ದೇಶದಿಂದ ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಯುವ ಧೂಮಪಾನಿಗಳ ಸಂಖ್ಯೆ ಹೆಚ್ಚಾಗಿದೆ. ಧೂಮಪಾನಿಗಳಿಗೆ ಕೈಗೆಟಕುವ ದರದಲ್ಲಿ ಸಿಗರೇಟ್ ಸಿಗುತ್ತಿರುವುದು ಕೂಡ ಈ ಬೆಳವಣಿಗೆಗೆ ಬಹು ಮುಖ್ಯ ಕಾರಣವೆಂದರೆ ತಪ್ಪಾಗಲಾರದು.

ಇಡೀ ಪ್ಯಾಕ್ ಸಿಗರೇಟ್ ಖರೀದಿಸುವ ಬದಲಿಗೆ ಒಂದು ಅಥವಾ ಎರಡು ಸಿಗರೇಟ್ ಗಳನ್ನು ಖರೀದಿಸುತ್ತಿರುವುದು ಮಾಮೂಲಿಯಾಗಿದೆ.

ಇದರಿಂದಾಗಿ ಇಂದಿನ ಯುವಜನತೆ ಸಿಗರೇಟ್ ವ್ಯಸನಿಗಳಾಗುತ್ತಿರುವುದು ಹೆಚ್ಚಾಗುತ್ತಿರುವುದರೊಂದಿಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಇದೆಲ್ಲ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಂಸತ್ತಿನ ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಬಿಡಿ ಸಿಗರೇಟ್ ನಿಷೇಧಿಸುವಂತೆ ಶಿಫಾರಸ್ಸು ನೀಡಿದೆ.

ಅಲ್ಲದೆ ವಿಮಾನ ನಿಲ್ದಾಣಗಳಲ್ಲಿ ಧೂಮಪಾನ ವಲಯಗಳನ್ನು ತೆಗೆದು ಹಾಕುವಂತೆ ಶಿಫಾರಸ್ಸಿನಲ್ಲಿ ಉಲ್ಲೇಖಿಸಿದೆ. ತಂಬಾಕು ಪದಾರ್ಥಗಳ ಮೇಲೆ ವಿಧಿಸುವ ತೆರಿಗೆಯನ್ನೂ ಹೆಚ್ಚಿಸುವಂತೆ ತಿಳಿಸಿದೆ.

ಇದರಿಂದಾಗಿ ಸರ್ಕಾರಕ್ಕೂ ಹಣ ಹರಿದು ಬರಲಿದೆ ಬಹು ಮುಖ್ಯವಾಗಿ ತಂಬಾಕು ಯುವಜನತೆಯನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಾಯಿ ಸಮಿತಿಯು ಸರ್ಕಾರಕ್ಕೆ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.

ಇದನ್ನೂ ನೋಡಿ : https://fb.watch/ho7wju_Ejk/ ರಿಯಾಲಿಟಿ ಚೆಕ್ ನಲ್ಲಿ ಬಯಲಾಯಿತು ಆಂಬ್ಯುಲೆನ್ಸ್ ಡ್ರೈವರ್ ನ ಅಜಾಗರೊಕತೆ!.

ಆರೋಗ್ಯ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಮೂರು ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರ ಈ-ಸಿಗರೇಟ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

GST ಯ ನಂತರವೂ ತಂಬಾಕು ಪದಾರ್ಥಗಳ ಮೇಲೆ ಗಮನಾರ್ಹ ಬದಲಾವಣೆಗಳು ಕಂಡು ಬಂದಿರಲಿಲ್ಲ. ಇಂದಿನ ಯುವಜನತೆ ಹಾಗೂ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಿ ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ನೀಡಿದೆ.

Exit mobile version