ಜೆಡಿಎಸ್‌ನಲ್ಲಿ ಬಂಡಾಯದ ಭೀತಿ? “ ಭವಾನಿಗೆ ಟಿಕೆಟ್ ಇಲ್ಲ ಅಂದ್ರೆ ನನಗೆ ಬೇಡ” ಎಂದ ರೇವಣ್ಣ

Hassan: ಜೆಡಿಎಸ್(JDS) ಪಕ್ಷ ಇಬ್ಭಾಗ ಆಗುತ್ತಾ? ರೇವಣ್ಣ ಅವರೇ ಬಂಡಾಯ ಎದ್ದು ಪಕ್ಷವನ್ನು ತುಂಡು ಮಾಡುತ್ತಾರಾ? ಈ ಎಲ್ಲಾ ಪ್ರಶ್ನೆಗಳು ಈಗ ಜೆಡಿಎಸ್‌ ಕಾರ್ಯಕರ್ತರನ್ನು ಕಾಡುತ್ತಿದೆ. ಈ ಪ್ರಶ್ನೆಗಳಿಗೆ, ಅನುಮಾನಗಳಿಗೆ ಮುಖ್ಯ ಕಾರಣ ರೇವಣ್ಣ (shocking statement of revanna) ಅವರು ಇತ್ತೀಚೆಗೆ ಮಾಧ್ಯಮಗಳಿಗೆ ಕೊಡುತ್ತಿರುವ ಹೇಳಿಕೆ ಮತ್ತು ಅವರ ವರ್ತನೆ.

ಅದ್ರಲ್ಲೂ ಇತ್ತೀಚೆಗೆ “ನನ್ನ ಹೆಂಡ್ತಿಗೆ ಟಿಕೆಟ್ ಕೊಡದಿದ್ದರೆ ನನಗೂ ಬೇಡ” ಎಂದು ಎಚ್ ಡಿ ರೇವಣ್ಣ (H.D.Revanna) ಅವರು ಕೊಟ್ಟ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.


ಹಾಸನದಲ್ಲಿ ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಎಚ್ ಡಿ ರೇವಣ್ಣ ಹೊಸ ಬಾಂಬ್‌ ಹಾಕಿದ್ದಾರೆ.

“ನನ್ನ ಹೆಂಡ್ತಿಗೆ ಟಿಕೆಟ್ ಕೊಡದಿದ್ರೆ ನನಗೂ ಬೇಡ” ಎಂಬ ಸಂದೇಶವನ್ನು ರೇವಣ್ಣ ಅವರು ತಮ್ಮ ಹಿರಿಯ ಸಹೋದರ ಬಾಲಕೃಷ್ಣ ಗೌಡರ (Balakrishna Gowda) ಮೂಲಕ ದೇವೇಗೌಡರಿಗೆ ಕಳುಹಿಸಿದ್ದಾರೆ.

ಈ ಸಂದೇಶದ ಮೂಲಕ ರೇವಣ್ಣ ಅವರು ಪರೋಕ್ಷವಾಗಿ ಬಂಡಾಯದ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಹಿಂದೆ ರೇವಣ್ಣ ಅವರೇ ಭವಾನಿಗೆ ಟಿಕೆಟ್‌ ಕೊಡದಿದ್ದರೆ ಮಗ ಸೂರಜ್‌ಗೂ ಟಕೆಟ್‌ ಬೇಡ ಅನ್ನೋ ಹೇಳಿಕೆಯನ್ನು ಕೊಟ್ಟಿದ್ದರು.

ಅಂದ್ರೆ ರೇವಣ್ಣ ಅವರ ಪೂರ್ತಿ ಕುಟುಂಬ ಜೆಡಿಎಸ್‌ ವಿರುದ್ಧ ನಿಲ್ಲಲಿದೆ ಅನ್ನೋ ಸಂದೇಶ ರವಾನಿಸುತ್ತಿದ್ದಾರೆ.

ಈ ಕೋಪದ ಮಾತುಗಳು ಜೆಡಿಎಸ್‌ ಅನ್ನು ಇಬ್ಭಾಗ ಮಾಡಲಿದೆಯಾ ಅನ್ನೋ ಆತಂಕ ಈಗ ಜೆಡಿಎಸ್‌ ನಾಯಕರನ್ನು ಕಾಡುತ್ತಿದೆ.

https://youtube.com/shorts/nonjJbhIJRU?feature=share

ಆದ್ರೆ ಇದಕ್ಕೆ ದೇವೇಗೌಡರು ಅವಕಾಶ ಮಾಡಿಕೊಡಲ್ಲ ಅನ್ನೋ ವಿಶ್ವಾಸ ಜೆಡಿಎಸ್‌ ಕಾರ್ಯಕರ್ತರಲ್ಲಿದೆ.


ಹಾಸನ ಕೈತಪ್ಪ ಬಾರದು:
ಹಾಸನದಲ್ಲಿ ಪ್ರೀತಂ ಗೌಡ (Preetham Gowda) ರವರ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಆ ಕ್ಷೇತ್ರ ಕೈತಪ್ಪುವ ಎಲ್ಲಾ ಸಾಧ್ಯತೆಗಳಿವೆ.

ಹಾಗಾಗಿ ಹೇಗಾದ್ರೂ ಮಾಡಿ ಆ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಅನ್ನೋದೇ ತಮ್ಮ ಆಶಯ. ಸ್ನೇಹಿತರು,

ಆಪ್ತರ ಮಾತಿನಿಂದ ಉತ್ಸಾಹಗೊಂಡ ರೇವಣ್ಣ ರವರು ಹಾಸನ ಕ್ಷೇತ್ರ ಉಳಿಸಿಕೊಳ್ಳದಿದ್ದರೆ ಹೊಳೆನರಸೀಪುರದಿಂದ ನಾನು ಗೆದ್ದು ಏನು ಪ್ರಯೋಜನ ಹಾಗಾಗಿ (shocking statement of revanna )ಅಲ್ಲಿನ ಟಿಕೆಟ್ ನನಗೂ ಬೇಡ ಎಂದು ಹೇಳಿದ್ದಾರೆ.


ಈ ಮಧ್ಯೆ ರಾಜಕೀಯ ವಲಯದಲ್ಲಿ ಇನ್ನೊಂದು ಗುಸು ಗುಸು ಕೇಳಿ ಬರುತ್ತಿದೆ. ಒಂದು ವೇಳೆ ಭವಾನಿ ಅವರಿಗೆ ಜೆಡಿಎಸ್ ಟಿಕೆಟ್‌ ಸಿಗದಿದ್ದರೆ,

ಪಕ್ಷೇತರವಾಗಿ ಚುನಾವಣೆ ನಿಲ್ಲಲು ಭವಾನಿ ರೇವಣ ಚಿಂತಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಚುವಾವಣಾ ಹೊಸ್ತಿಲಲ್ಲಿ ಪಕ್ಷದೊಳಗೆ ಹಾಗೂ ಕುಟುಂಬದೊಳಗಿನ ಶೀತಲ ಜೆಡಿಎಸ್‌ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ.

Exit mobile version