ಸರ್ಕಾರಿ ಶಾಲಾ ಮಕ್ಕಳ ಶೂ, ಸಾಕ್ಸ್‌ ವಿತರಣೆ ವಿಳಂಬ: ಕನಿಷ್ಠ ಪಕ್ಷ 2 ತಿಂಗಳು ಕಾಯಲೇ ಬೇಕು

Bengaluru: ಈ ಬಾರಿ ಶೂ (Shoe) ಮತ್ತು ಸಾಕ್ಸ್‌ (Socks) ಹಾಕಿಕೊಳ್ಳಬೇಕಾದರೆ ಶಾಲಾ ವಿದ್ಯಾರ್ಥಿಗಳು ಒಂದೆರಡು (Shoes socks distribution delay) ತಿಂಗಳು ಕಾಯಲೇಬೇಕು. ಅಲ್ಲಿಯವರೆಗೆ ಬರಿಗಾಲಲ್ಲೇ

ಶಾಲೆಗೆ ತೆರೆಳುವುದು ಅಥವಾ ಕಳೆದ ವರ್ಷ ನೀಡಿದ ಶೂ ಧರಿಸುವುದು ಅನಿವಾರ್ಯವಾಗಿದೆ. ಮೇ 31ರಿಂದ ಸರಕಾರಿ ಶಾಲೆಗಳು (Government School) ಶಾಲೆಗಳು ಆರಂಭವಾಗಿವೆ

‘ಸಮವಸ್ತ್ರ’, ‘ಪಠ್ಯಪುಸ್ತಕ’ ಈ ಸಮಯದಲ್ಲೇ ವಿದ್ಯಾರ್ಥಿಗಳ ಕೈಸೇರಿದೆ. ಆದರೆ ಇನ್ನು ‘ಶೂ ಸಾಕ್ಸ್‌ ಮತ್ತು ಸೈಕಲ್‌ ಬಹಳ ಮುಖ್ಯವಾಗಿ ನೀಡಬೇಕಾಗಿದೆ.

ಆದರೆ ಸೈಕಲ್‌ ಅನ್ನು ಕಳೆದ ಮೂರು ವರ್ಷಗಳಿಂದ ನೀಡಿಲ್ಲ. ಈ ವರ್ಷ ಕೂಡ ನೀಡುವ ‘ಗ್ಯಾರಂಟಿ’ ಇಲ್ಲ.

ಸರಕಾರ ಶೂ ಮತ್ತು ಸಾಕ್ಸ್‌ಗಾಗಿ 2023-24ನೇ ಸಾಲಿನಲ್ಲಿ 125 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಎಸ್‌ಡಿಎಂಸಿ(SDMC) ಅಧ್ಯಕ್ಷರ ಕೈ ಇದು ಸೇರಬೇಕಾದಲ್ಲಿ ಕನಿಷ್ಠ ಒಂದು ತಿಂಗಳು ಆದರೂ

ಬೇಕಾಗುತ್ತದೆ ನಂತರ ಅದನ್ನು ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಸಿಗಬೇಕಾದರೆ ಮತ್ತೊಂದು ತಿಂಗಳು ಕಾಯುವ ಅವಶ್ಯಕತೆ ಇದೆ. ಒಟ್ಟಾರೆ ವಿದ್ಯಾರ್ಥಿಗಳು ಕಳೆದ ವರ್ಷದ ಶೂ ಅಥವಾ ಬರಿಗಾಲಿನಲ್ಲೇ

ಎರಡು ತಿಂಗಳು ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಇದೆ.

ಒಂದು ಜೊತೆ ಶೂಗೆ 265 ರೂ. 1 ರಿಂದ 5ನೇ ತರಗತಿ ಮಕ್ಕಳಿಗೆ, 295 ರೂ 6 ರಿಂದ 8ನೇ ತರಗತಿ ಮಕ್ಕಳಿಗೆ ಮತ್ತು 325 ರೂ. 9 ಮತ್ತು 10ನೇ ತರಗತಿ ಮಕ್ಕಳಿಗೆ ನಿಗದಿಪಡಿಸಿದೆ.ಅಲ್ಲದೆ ಇದರ ಜತೆಗೆ

ಎರಡು ಜೊತೆ ಸಾಕ್ಸ್‌ಗಾಗಿ ಒಬ್ಬ ವಿದ್ಯಾರ್ಥಿಗೆ ಅಂದರೆ ಒಟ್ಟಾರೆ 125 ಕೋಟಿ ರೂ.ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.ಒಟ್ಟು 45.45 ಲಕ್ಷ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ.

ಬರಿಗಾಲಿನಲ್ಲೇ ತರಗತಿ:

ಸರಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಬಹುತೇಕ ಬಡತನದ ಕುಟುಂಬದಿಂದ ಬಂದಿರುತ್ತಾರೆ ಅವರ ಪೋಷಕರಿಗೆ ಅವರ ಮಕ್ಕಳಿಗೆ ಶೂ-ಚಪ್ಪಲಿ ಖರೀದಿಸಿ ಕೊಡುವುದು ಕಷ್ಟವಾಗಿರುತ್ತದೆ

ಇದರಿಂದ ನಗರ ಪ್ರದೇಶದ ಸರಕಾರಿ ಶಾಲೆಗಳಲ್ಲೂ ಕೂಡ ಮತ್ತು ಗ್ರಾಮೀಣ ಭಾಗದಲ್ಲಿ ಸಹ ಬಹುತೇಕ ಮಕ್ಕಳು ಇಂದಿಗೂ ಬರಿಗಾಲಿನಲ್ಲೇ ಆಗಮಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ, ”ಸರಕಾರ

ನೀಡುವ ಶೂಗಾಗಿ ಕಾಯುತ್ತಿದ್ದೇವೆ ಅವರು ಕೊಟ್ಟಮೇಲೆ ಅದನ್ನು ಹಾಕಿಕೊಂಡು ಬರುತ್ತೇವೆ,”(Shoes socks distribution delay) ಎಂದು ಹೇಳುತ್ತಿದ್ದಾರೆ.

ಏನಿದು ಶೂ-ಸಾಕ್ಸ್‌ ಭಾಗ್ಯ:

ಕಾಂಗ್ರೆಸ್‌ (Congress) ಸರಕಾರ 2017-18ನೇ ಸಾಲಿನಲ್ಲಿ ಅಧಿಕಾರದಲ್ಲಿತ್ತು ಆ ಸಮಯದಲ್ಲಿ ಶೂ ಮತ್ತು ಸಾಕ್ಸ್‌ ನೀಡುವ ಯೋಜನೆಯನ್ನು ಸರಕಾರಿ ಶಾಲಾ ಮಕ್ಕಳಿಗಾಗಿ ಜಾರಿಗೆ ತಂದಿತು.

ಇದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಪಾದ ಅಳತೆ ಪಡೆದು ನೇರವಾಗಿ ಖರೀದಿ ಮಾಡಿ ವಿತರಣೆ ಮಾಡಲು ಸರಕಾರಕ್ಕೆ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ಆದ್ದರಿಂದ ಹಣವನ್ನು ಶಾಲೆಯಲ್ಲಿರುವ ಎಸ್‌ಡಿಎಂಸಿಗೆ ಬಿಡುಗಡೆ ಮಾಡಿ ಅಲ್ಲಿಂದ ವಿದ್ಯಾರ್ಥಿಗಳಿಗೆ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ನೀಡಲು ಸೂಚಿಸಿತ್ತು. ಆದರೆ ಅನುದಾನದ ಕೊರತೆಯಿಂದ 2020-21,

2021-22ನೇ ಶೈಕ್ಷಣಿಕ ಸಾಲಿನಲ್ಲಿ ನೀಡಿರಲಿಲ್ಲ.ಆದರೆ ಇದೀಗ ಮತ್ತೆ 2022-23ನೇ ಸಾಲಿನಿಂದ ಮತ್ತೆ ನೀಡಲು ಆರಂಭಿಸಿತು. ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಈ ವೇಳೆ ಕೆಲವು ಷರತ್ತುಗಳನ್ನು ವಿಧಿಸುತ್ತಿದೆ.

ಸಾಮಾನ್ಯವಾಗಿ ವಿಧಿಸುವ ಷರತ್ತುಗಳು

ಶೂ ಮತ್ತು ಸಾಕ್ಸ್‌ ನೀಡಲು ಶಾಲಾ ಮಕ್ಕಳಿಗೆ ಅನುದಾನ ಬಿಡುಗಡೆಯಾಗಿದೆ. ಆದರೆ, ಪ್ರಕ್ರಿಯೆ ಇನ್ನು ಬಾಕಿ ಇದೆ. ಎಲ್ಲ ಜಿಲ್ಲೆಗಳ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಮುಂದಿನ

ದಿನಗಳಲ್ಲಿ ಪ್ರಕ್ರಿಯೆ ಮುಗಿಸಲಾಗುವುದು. ಆನಂತರ ಖರೀದಿಗೆ ಎಸ್‌ಡಿಎಂಸಿಗೆ ಹಣ ಬಿಡುಗಡೆ ಮಾಡಿ ಸೂಚಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ, ಡಾ.ಆರ್‌.ವಿಶಾಲ್‌ ತಿಳಿಸಿದ್ದಾರೆ.

ರಶ್ಮಿತಾ ಅನೀಶ್

Exit mobile version