ಕನ್ನಡ ಚಿತ್ರರಂಗದಲ್ಲಿ ಒಂದರಂತೆ ಒಂದು ಸಿನಿಮಾಗಳು ತೆರೆಮೇಲೆ ಬರಲು ಸಜ್ಜಾಗಿದೆ. ಸದ್ಯ ಇದೇ ಸಾಲಿನಲ್ಲಿ ಚಿತ್ರರಸಿಕರ ಕಣ್ಣೆದುರಿಗೆ ಬರಲು ಸದ್ದಿಲ್ಲದೇ ಚಿತ್ರಿಕರಣವನ್ನು ಸಂಪೂರ್ಣವಾಗಿ ಮುಗಿಸಿ ತಯಾರಾಗಿರುವ ‘ಸ್ಟ್ರಾಬೆರಿ’ ಸಿನಿಮಾ ಬಿಡುಗಡೆ ಹಂತದಲ್ಲಿದೆ. ಸ್ಟ್ರಾಬೆರಿ ಸಿನಿಮಾದಲ್ಲಿ ನಟಿ ಶ್ರುತಿ ಹರಿಹರನ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ಈ ಸಿನಿಮಾವನ್ನು ಕಿರಿಕ್ ಪಾರ್ಟಿ ಹುಡುಗ ನಟ ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ಪುರುಸೋತಿಲ್ಲದೆ ನಿರತರಾಗಿರುವ ನಟ ರಕ್ಷಿತ್ ಶೆಟ್ಟಿ, ತಮ್ಮ ಎಲ್ಲಾ ನೂತನ ಪ್ರಾಜೆಕ್ಟ್ಗಳಲ್ಲಿಯೂ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸ್ಟ್ರಾಬೆರಿ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ಬಾಕಿ ಇದ್ದು, ಮುಗಿಯುವ ಹಂತದಲ್ಲಿದೆ. ಈ ಸಿನಿಮಾದಲ್ಲಿ ನಟಿ ಶ್ರುತಿ ಹರಿಹರನ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಸಿನಿಮಾದಲ್ಲಿ ‘ದಿಯಾ’ ಸಿನಿಮಾದ ಖ್ಯಾತ ಕಲಾವಿದ ದೀಕ್ಷಿತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಶ್ರುತಿ ಹರಿಹರನ್ ಅವರಿಗೆ ಸಾಥ್ ನೀಡಿದ್ದಾರೆ.
ರಕ್ಷಿತ್ ಶೆಟ್ಟಿ ಈ ಸಿನಿಮಾ ನಿರ್ಮಾಣ ಮಾಡಿತ್ತಿದ್ದಾರೆ ಎಂದರೆ ಅಲ್ಲಿ ಹೊಸಬರಿಗೆ, ಹೊಸ ಕಲಾವಿದರಿಗೆ ಹೆಚ್ಚು ಆದ್ಯತೆ ಇರುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಈ ಸಿನಿಮಾವನ್ನು ಲೂವಿಸ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನಿರ್ದೇಶನ ಮಾಡುವ ಮೂಲಕ ಪರಿಪೂರ್ಣ ನಿರ್ದೇಶಕರಾಗಿ ಲೂವಿಸ್ ಅವರು ಹೊರಹೊಮ್ಮುತ್ತಿದ್ದಾರೆ. ಒಟ್ಟಾರೆ ಸ್ಟ್ರಾಬೆರಿ ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದ್ದು, ಪೋಸ್ಟ್ ಪ್ರೋಡಕ್ಷನ್ ಕೆಲಸ ಮಾತ್ರ ಬಾಕಿ ಉಳಿಸಿಕೊಂಡಿದೆ. ಶೀಘ್ರದಲ್ಲೇ ಸ್ಟ್ರಾಬೆರಿ ಸಿನಿಮಾ ತೆರೆಗೆ ಅಪ್ಪಳಿಸಲಿದ್ದು, ಸಿನಿ ಪ್ರೇಕ್ಷಕರು ಸಿನಿಮಾವನ್ನು ಹತ್ತಿರದ ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದಾಗಿದೆ.