ಗೆಲ್ಲುವ ಭರವಸೆ ಇಲ್ಲ ; ಗೆದ್ದ ಅಭ್ಯರ್ಥಿಯನ್ನೇ ಸಿದ್ದರಾಮಯ್ಯ ಖರೀದಿ ಮಾಡಿದ್ದಾರೆ: ಬಿಜೆಪಿ ಆರೋಪ

Karnataka: ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವ ಭರವಸೆ ಇಲ್ಲ ಎಂಬ ಕಾರಣಕ್ಕೆ ಗೆದ್ದ ಅಭ್ಯರ್ಥಿಯನ್ನೇ ಸಿದ್ದರಾಮಯ್ಯ(Siddaramaiah bought winning candidate) ಅವರು ಖರೀದಿ ಮಾಡಿದ ಆಡಿಯೋ ರಿಲೀಸ್ ಆಗಿದೆ.

ಇದು ಮತದಾರರಿಗೆ ಮಾಡುವ ದ್ರೋಹವಲ್ಲವೇ? ಪ್ರಜೆಗಳಿಗೆ ದ್ರೋಹ ಮಾಡಿದ ನೀವು ಅದ್ಯಾವ ಮುಖವಿಟ್ಟುಕೊಂಡು ಜನರೆಡೆಗೆ ಹೋಗುತ್ತಿದ್ದೀರಿ? ಎಂದು ಬಿಜೆಪಿ ವಿಪಕ್ಷ ನಾಯಕರು ಸಿದ್ದರಾಮಯ್ಯ(Siddaramaiah) ಅವರನ್ನು ಪ್ರಶ್ನೆ ಮಾಡಿದೆ.

ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ನಂತರ, ಹಾಲಿ ಜೆಡಿಎಸ್‌ಶಾಸಕ ಕೆ ಶ್ರೀನಿವಾಸಗೌಡ(Srinivas gowda) ಅವರು, ಬಹಿರಂಗವಾಗಿಯೇ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದರು.

ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಪರವಾಗಿ ಕೆಲಸ ಮಾಡುವುದಾಗಿಯೂ ತಿಳಿಸಿದ್ದರು. ಅದಾದನಂತರ ಆಡಿಯೋ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದ್ದು,

ಮತದಾರರೊಬ್ಬರಿಗೆ ಶ್ರೀನಿವಾಸಗೌಡ ಅವರು ಕಳೆದ ಚುನಾವಣೆ ವೇಳೆ ನಾನು 17 ಕೋಟಿ ಸಾಲ ಮಾಡಿದ್ದೇನೆ.

ಆ ಸಾಲವೇ ಇನ್ನೂ ತೀರಿಲ್ಲ. ಹೀಗಾಗಿ ಈ ಬಾರಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಸಿದ್ದರಾಮಯ್ಯನವರಿಗೆ ಬೆಂಬಲಿಸಿದರೆ ನನಗೆ ಲಾಭವಾಗಲಿದೆ ಎಂಬರ್ಥದಲ್ಲಿ ಹೇಳಿದ್ದರು.

ಇದೀಗ ಆ ಆಡಿಯೋವನ್ನು ಇಟ್ಟುಕೊಂಡು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ, ಜನರು ಚಾಮುಂಡೇಶ್ವರಿಯಲ್ಲಿ(Siddaramaiah bought winning candidate) ಸಿದ್ದರಾಮಯ್ಯ ಅವರನ್ನು ಜನ ತಿರಸ್ಕರಿಸಿದ್ದಾರೆ.

ಬದಾಮಿಯಲ್ಲೂ ಸೋಲುವ ಭಯದಿಂದ ಕೋಲಾರಕ್ಕೆ ಹೊರಟಿದ್ದೀರಿ. ಅಲ್ಲಿಯೂ ಸೋಲುವುದು ನಿಶ್ಚಯ. ಅಭಿವೃದ್ಧಿಯ ರಾಜಕಾರಣ ನಿಮ್ಮದಾಗಿದ್ದರೆ, ಕ್ಷೇತ್ರ ಪಲಾಯನ ಬೇಕಿತ್ತೇ? ಉತ್ತರಿಸಿ ಸಿದ್ದರಾಮಯ್ಯ ಅವರೇ,

ಇದನ್ನೂ ಓದಿ: https://vijayatimes.com/rrr-wins-golden-globe/

ನಮ್ಮ ರಾಜ್ಯದ ಅಭಿವೃದ್ಧಿಯನ್ನು ಪ್ರಪಾತಕ್ಕೆ ತಳ್ಳಿದ್ದು ನಿಮ್ಮ ಐದು ವರ್ಷಗಳ ಸಾಧನೆ. ಭ್ರಷ್ಟಾಚಾರ, ಹಗರಣ, ಡಿನೋಟಿಫಿಕೇಷನ್, ಹಿಂದುಗಳ ಹತ್ಯೆಯ ಮೂಲಕ ಕರ್ನಾಟಕದಲ್ಲಿ ಅಂಧಾ ದರ್ಬಾರ್‌ ಮಾಡಿದವರು ನೀವು.

ಹೀಗೆ ಜನರಿಗೆ ಮಾಡಿದ ದ್ರೋಹಗಳಿಗೆ ಪ್ರಾಯಶ್ಚಿತ್ತವಾಗಿ ಯಾತ್ರೆಯೇ? ಎಂದು ಲೇವಡಿ ಮಾಡಿದೆ.

ಇನ್ನೊಂದು ಟ್ವೀಟ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shiva kumar) ವಿರುದ್ದವೂ ವಾಗ್ದಾಳಿ ನಡೆಸಿರುವ ಬಿಜೆಪಿ, ಉತ್ತರಿಸಿ ಡಿ.ಕೆ.ಶಿವಕುಮಾರ ಅವರೇ,

ನೀವು ಇಂಧನ ಸಚಿವರಾಗಿದ್ದಾಗ 2016 ರಲ್ಲಿ ಸುಳ್ಯದ ಗಿರಿಧರ್ ರೈ(Sulya giridhar rai) ಎನ್ನುವವರು ವಿದ್ಯುತ್ ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದರೆ,

ಅವರನ್ನೇ ಅರೆಸ್ಟ್ ಮಾಡಿದ ಕ್ರೂರ ಆಡಳಿತ ನಿಮ್ಮದು. ಹೀಗೆ ರೈತರಿಗೆ ನೀವು ಮಾಡಿದ ದ್ರೋಹಗಳನ್ನು ಅವರಿನ್ನೂ ಮರೆತಿಲ್ಲ.

ನೀವೇ ಇಂಧನ ಸಚಿವರಾಗಿದ್ದಾಗ ರೈತರ ಕೃಷಿಗೆ ಅಗತ್ಯವಾದ ವಿದ್ಯುತ್ ನೀಡಲಿಲ್ಲ. ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಿ ರೈತರ ಬೆಳೆಗೆ ಕೊಳ್ಳಿ ಇಟ್ಟಿದ್ದಿರಿ. ಈಗ ಅಧಿಕಾರಕ್ಕಾಗಿ ಉಚಿತ ವಿದ್ಯುತ್ ನಾಟಕವಾಡುತ್ತಿದ್ದಿರಿ ಎಂಬುದು ಜನರಿಗೆ ತಿಳಿಯುವುದಿಲ್ಲವೇ? ಎಂದು ಟೀಕಿಸಿದೆ.

Exit mobile version